ಸಹಕಾರಿ ಸಂಘಗಳು ರಾಜಕೀಯ ರಹಿತವಾಗಿರಲಿ

KannadaprabhaNewsNetwork |  
Published : Dec 13, 2025, 03:15 AM IST
ಕಅತತಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಸರ್ವ ಸಮುದಾಯದ ಹಿತಕ್ಕಾಗಿ ಸ್ಥಾಪನೆಗೊಂಡ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿಸ್ವಾರ್ಥ ಮನೋಭಾವನೆಯಿಂದ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದರಿಂದ ರೈತರು ಹಾಗೂ ಸಂಘ ಉಳಿದು ಬೆಳೆಯಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸರ್ವ ಸಮುದಾಯದ ಹಿತಕ್ಕಾಗಿ ಸ್ಥಾಪನೆಗೊಂಡ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿಸ್ವಾರ್ಥ ಮನೋಭಾವನೆಯಿಂದ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಇದರಿಂದ ರೈತರು ಹಾಗೂ ಸಂಘ ಉಳಿದು ಬೆಳೆಯಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಎಲಿಮುನ್ನೋಳಿ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಪತ್ತಿನ ಸಹಕಾರಿ ಸಂಘಗಳು ಸಾಲಕ್ಕೆ ಸೀಮಿತವಾಗದೆ ಕೃಷಿ ಉತ್ಪನಗಳ ಉತ್ಪಾದನೆ, ವ್ಯಾಪಾರ ಅಭಿವೃದ್ಧಿಯಂತಹ ಯೋಜನೆಗಳಿಗೆ ಒತ್ತು ನೀಡಬೇಕು. ಇದರೊಂದಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸಬೇಕು. ಎಲಿಮುನ್ನೋಳಿಯಲ್ಲಿ ಎರಡು ಸಹಕಾರ ಸಂಘದ ಮೂಲಕ 1406 ರೈತ ಸದಸ್ಯರು ₹11.21 ಕೋಟಿ ಶೂನ್ಯ ಬಡ್ಡಿ ದರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಲಮನ್ನಾ ಸೌಲಭ್ಯ ಪಡೆದಿದ್ದಾರೆ. 1686 ಜನ ರೈತರು ಶೂನ್ಯ ಬಡ್ಡಿ ದರದ ₹ 14.74 ಕೋಟಿ ಸಾಲ ಪತ್ತು ಪಡೆದುಕೊಂಡಿದ್ದಾರೆ. ಜಿಲ್ಲಾ ಸಹಕಾರಿ ರಂಗದಲ್ಲಿ 45 ವರ್ಷಗಳ ಕಾಲ ಉತ್ತಮ ಆಡಳಿತ ನಿರ್ವಹಿಸಿದ ಆತ್ಮತೃಪ್ತಿಯಿದ್ದು, ತಾಲೂಕಿನ ರೈತರ ಸಹಕಾರಿ ಸಂಘಗಳ ಮೇಲ್ವಿಚಾರಣೆಯೊಂದಿಗೆ ಮನೆಮನೆಗೆ ಸಾಲ ಸೌಲಭ್ಯ ತಲುಪಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಕೆಂಪಣ್ಣಾ ವಾಸೇದಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮೀರಾಸಾಹೇಬ ಮುಲ್ತಾನಿ, ನಿವೃತ್ತ ಅಧಿಕಾರಿ ಎ.ಬಿ.ಪಟ್ಟಣಶೆಟ್ಟಿ, ಸಂಘದ ಉಪಾಧ್ಯಕ್ಷ ಜಿನಗೌಡ ಇಮಗೌಡನವರ, ನಿರ್ದೇಶಕರಾದ ಕಲಗೌಡ ಮಲಗೌಡನವರ, ದುಂಡಪ್ಪ ಮರೆಣ್ಣವರ, ಶಶಿಕುಮಾರ ಬೋನಿ, ಬಾಳಾಸಾಹೇಬ ಬೋನಿ, ಕಾಶವ್ವ ಮೆಟಗುಡ್ಲಿ, ಶ್ರೀಮಂತಿ ಚೌಗಲಾ, ಸಪುರಾಬೇಗಂ ಮುಲ್ಲಾ, ಶಿವಪ್ಪಾ ದೊಡಮನಿ, ಮಹಾಂತೇಶ ಮಗೆನ್ನವರ, ಶಶಿಕಾಂತ ದೊಡ್ಡಲಿಂಗನ್ನವರ, ಅಪ್ಪಣ ಬಡಿಗೇರ, ದತ್ತಾತ್ರಯ ಕುಲಕರ್ಣಿ, ಭೀಮಗೌಡ ಗಿರಿಗೌಡನವರ, ಬಿ.ಕೆ.ಮಗೆಣ್ಣವರ, ಶಿವಕುಮಾರ ಮರೆಣ್ಣವರ, ರತ್ನಾಕರ ಬೋನಿ, ನಿಂಗಪ್ಪಾ ಹಸರಾಣಿ, ಕೆಂಪಣ್ಣ ಉರಬನಟ್ಟಿ, ಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ರಾಮಲಿಂಗ ಸನದಿ, ಬ್ಯಾಂಕ್‌ ನಿರೀಕ್ಷಕ ನಾಗರಾಜ ಕರಗುಪ್ಪಿ, ಮುಖ್ಯ ಕಾರ್ಯನಿರ್ವಾಹಕ ಮಹೇಶ ಕುರಣಿ, ಕಲ್ಲಪ್ಪಾ ಮರಡಿ, ಅಕ್ಷಯ ಪಾಟೀಲ, ಜಯಪಾಲ ಬೇಡಕಿಹಾಳ ಮತ್ತಿತರರು ಉಪಸ್ಥಿತರಿದ್ದರು.ಕೋಟ್‌

ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ, ಸಂಗಮ ಹಾಗೂ ವಿಶ್ವರಾಜ್ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಬಿಲ್‌ಗಳನ್ನು ಆಯಾ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖಾಂತರ ಹಣ ಪಾವತಿಸಬೇಕು. ಇದರಿಂದ ರೈತರಿಗೂ ಮತ್ತು ಸಂಘಗಳಿಗೂ ಅನೂಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಯವರು ಕೂಡಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ಪತ್ರದ ಮೂಲಕ ವಿನಂತಿಸಿಕೊಳ್ಳಬೇಕು.- ರಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ