ಕನ್ನಡಪ್ರಭ ವಾರ್ತೆ ಮುಂಡಗೋಡ
ಶನಿವಾರ ಸಂಜೆ ಪಟ್ಟಣದ ಮಾರಿಕಾಂಬಾ ದೇವಾಲಯ ಬಳಿ ಆಯೋಜಿಸಲಾದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸ್ವಾಭಿಮಾನ ಮತ್ತು ಗರ್ವ ಉಳಿಯುವ ರೀತಿಯಲ್ಲಿ ಡಿ.ಬಿ.ಟಿ. ಮೂಲಕ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದು ಕ್ರಾಂತಿಯಲ್ಲದೇ ಇನ್ನೇನು ಎಂದ ಅವರು, ಹಿಂದೆಲ್ಲ ದೆಹಲಿಯಿಂದ ೧ ರೂಪಾಯಿ ಕಳುಹಿಸಿದರೆ ಇಲ್ಲಿಗೆ ಬಂದು ತಲುಪಬೇಕಾದರೆ ಅದು ೧೬ ಪೈಸೆ ಆಗಿರುತ್ತಿತ್ತು. ಈ ಸೋರಿಕೆಯನ್ನು ತಪ್ಪಿಸಿ ಶೂನ್ಯ ಶೋಷಣೆ ಹಾಗೂ ಶೂನ್ಯ ಸೋರಿಕೆಯೊಂದಿಗೆ ಭ್ರಷ್ಟಾಚಾರವಿಲ್ಲದೆ ನೇರವಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಇಷ್ಟೆಲ್ಲ ಯೋಜನೆಗಳನ್ನು ಯಶಸ್ವಿಗೊಳಿಸಿಯು ಉತ್ತಮ ಬಜೆಟ್ ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.ದೇಶದ ಬೆನ್ನೆಲುಬಾದ ರೈತರ ೩ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದಿದ್ದ ಕೇಂದ್ರ ಬಿಜೆಪಿ ಸರ್ಕಾರ ಶ್ರೀಮಂತ ಉದ್ಯಮಿಗಳ ೧೪.೭೬ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇಕಿಲ್ಲ. ಚೌಕಿದಾರ ಮಾಡುವ ಕೆಲಸ ಇದೇ ಏನು? ಇದಕ್ಕೆ ರಾಷ್ಟ್ರದ ಲೂಟಿ ಎನ್ನದೆ ಇನ್ನೇನು ಎನ್ನಬೇಕು? ಬಿಜೆಪಿಯವರು ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸುವುದು ಹೋಗಲಿ, ಜನರು ಇದ್ದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ದೇಶ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದರು.