ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

KannadaprabhaNewsNetwork |  
Published : Sep 12, 2026, 01:45 AM IST
11ಎಚ್ಎಸ್ಎನ್17 :  | Kannada Prabha

ಸಾರಾಂಶ

ಶಾಲಿನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ೧೩ನೇ ವರ್ಷದ ಮಕ್ಕಳ ಚಾವಡಿ ಮನೆ-ಮನ ಕಾರ್ಯಕ್ರಮ ಮತ್ತು ದೇಶಿಕಲೆ, ದೇಶಿ ಆಟ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅವರ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಶ್ಯಕವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ವಾಚಕರ ವಾಣಿ, ಸಂಪಾದಕೀಯ, ಅಂಕಣಗಳು, ಕ್ರೀಡಾ ಸುದ್ದಿಗಳು ಪತ್ರಿ ಕೆಯ ಯಾವ ಭಾಗದಲ್ಲಿ ಪ್ರಕಟವಾಗುವವು ಇವೆ. ಅವುಗಳ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಹೆಚ್ಚು ಸಮಯ ನೀಡದೆ, ಪ್ರತಿನಿತ್ಯ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಿಂದ ಪ್ರಚಲಿತ ವಿದ್ಯಮಾನಗಳ ಕುರಿತು ಜ್ಞಾನ ಹೆಚ್ಚುವುದರ ಜೊತೆಗೆ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗ ಲಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಸಲಹೆ ನೀಡಿದರು.

ಪಟ್ಟಣದ ಶಾಲಿನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ೧೩ನೇ ವರ್ಷದ ಮಕ್ಕಳ ಚಾವಡಿ ಮನೆ-ಮನ ಕಾರ್ಯಕ್ರಮ ಮತ್ತು ದೇಶಿಕಲೆ, ದೇಶಿ ಆಟ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅವರ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಶ್ಯಕವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ವಾಚಕರ ವಾಣಿ, ಸಂಪಾದಕೀಯ, ಅಂಕಣಗಳು, ಕ್ರೀಡಾ ಸುದ್ದಿಗಳು ಪತ್ರಿ ಕೆಯ ಯಾವ ಭಾಗದಲ್ಲಿ ಪ್ರಕಟವಾಗು ಇವೆ. ಅವುಗಳ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.ಇಂದಿನ ಒತ್ತಡದ ಬದುಕಿನಲ್ಲಿ ಪುಸ್ತಕ, ಪತ್ರಿಕೆ ಓದುವ ಅಭಿರುಚಿ ಕಳೆದುಕೊಳ್ಳುತ್ತಿದ್ದೇವೆ. ಪುಸ್ತಕಗಳು ನಮ್ಮ ಜ್ಞಾನ ವೃದ್ಧಿಸುವ ಸ್ನೇಹಿತರಾಗಿವೆ. ವಿದ್ಯಾರ್ಥಿಗಳ ಸರ್ವತೋ ಮುಖ ಬೆಳವಣಿಗೆಗೆ ಪುಸ್ತಕಗಳು ಸಹಕಾರಿ, ಓದುವ ಅಭಿರುಚಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು, ತಂತ್ರ ಜ್ಞಾನ ನಮಗೆ ಜಗತ್ತನ್ನೇ ಕೈಬೆರಳ ತುದಿಗೆ ತಂದುಕೊಟ್ಟಿದರೂ, ಅದರ ಅತಿಯಾದ ಮತ್ತು ತಪ್ಪು ಬಳಕೆ ನಮ್ಮ ಜೀವನದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮಗಳನ್ನು ಬೀರು ತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಕ್ಕಳ ಭವಿಷ್ಯವನ್ನು ರೂಪಿಸು ವಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ನ ಪಾತ್ರ ಮಹತ್ವದ್ದಾಗಿದೆ. ಬಾಲ್ಯದಲ್ಲಿ ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತಿರುತ್ತದೆ. ಆ ಸಮಯದಲ್ಲಿ ಅವರಿಗೆ ಎಂತಹ ಸಂಸ್ಕಾರ ಮತ್ತು ಜ್ಞಾನವನ್ನು ನೀಡುತ್ತೇವೆಯೋ, ಅದೇ ಅವರ ಭವಿಷ್ಯದ ವ್ಯಕ್ತಿತ್ವಕ್ಕೆ ಬುನಾದಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ನಿರಂತರವಾಗಿ ಶ್ರಮಿಸುತ್ತಿದೆ. ಮಕ್ಕಳಿಗಾಗಿ ಕವಿ ಗೋಷ್ಠಿ, ನಾಟಕೋತ್ಸವ ಮತ್ತು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿ ಸುತ್ತದೆ. ಇದು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಿದೆ. ನಾಡಿನ ಹಬ್ಬಗಳು, ಸಂಪ್ರದಾಯಗಳು, ಗ್ರಾಮೀಣ ಕಲೆ, ಕ್ರೀಡೆ ಮತ್ತು ಇತಿಹಾಸವನ್ನು ಸರಳ ಭಾ?ಯಲ್ಲಿ ಮಕ್ಕಳಿಗೆ ತಲುಪಿಸುವ ಮೂಲಕ ಅವರು ತಮ್ಮ ಬೇರುಗಳನ್ನು ಮರೆ ಯದಂತೆ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತಿದೆಂದು ಶ್ಲಾಘಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಅವರು ಮಾತನಾಡಿ, ಮ ಕ್ಕಳಿಗೆ ಗ್ರಾಮೀಣ ಕಲೆಗಳ ವಿಶೇ?ತೆಗ ಳನ್ನು ಪರಿಚಯ ಮಾಡಿಕೊಡಬೇಕು. ನಮ್ಮ ನೆಲದ ಗಟ್ಟಿತನ ಉಳಿಸಲು ಮೂಲ ಜನಪದವನ್ನು ಬೆಳೆಸಬೇಕು. ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಬೇಕೆಂದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿ ಕಾರ್ಯ ಕ್ರಮ ಮತ್ತು ದೇಸಿ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್, ಗೌರವಾಧ್ಯಕ್ಷ ಮಹದೇವ್, ಕಾರ್ಯದರ್ಶಿ ಸಿದ್ದೇಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪೂರ್ಣಾ, ಉನ್ನತಿ ಹೆಗ್ಗಡೆ, ಲತಾ ಪುಟ್ಟೇಗೌಡ, ದೀಪ್ತಿ, ಸಿ.ಪಿ. ಕುಮಾರ್‌, ಅಜ್ಜು ಗಂಗಾಧರ್ ಸೇರಿ ಶಿಕ್ಷಕ ವೃದ್ಧ ಹಾಗೂ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶೋತ್ಸವದಲ್ಲಿ ಪಿಒಪಿ ಮೂರ್ತಿಗೆ ಅವಕಾಶವಿಲ್ಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಕುಂಭಾಭಿಷೇಕ