ಕನ್ನಡಪ್ರಭ ವಾರ್ತೆ ಬೇಲೂರು
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೀಡಾದ ಸಂದರ್ಭಗಳಲ್ಲಿ ಗ್ರಾಮೀಣರ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿಯಾಗಿದೆ ಎಂದು ಶಾಸಕ ಎಚ್. ಕೆ.ಸುರೇಶ್ ಹೇಳಿದರು.ತಾಲೂಕಿನ ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಇಡೀ ರಾಜ್ಯದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಇದಕ್ಕೆ ಕಾರಣ ಎಚ್. ಡಿ. ರೇವಣ್ಣನವರ ಪರಿಶ್ರಮ ಎಂದರು. ಹೈನುಗಾರಿಕೆ ಪ್ರಗತಿಗೆ ಮೂಲ. ಹಸುಗಳ ಪಾಲನೆಯಿಂದ ಕುಟುಂಬದಲ್ಲಿ ಅರ್ಥಿಕ ಸಂಕಷ್ಟವನ್ನು ಪರಿಹಾರ ಮಾಡುತ್ತಿದ್ದಾರೆ. ಹೆಬ್ಬಾಳು ಹಾಲು ಉತ್ಪಾದಕ ಸಹಕಾರ ಸಂಘ ಉತ್ತಮ ನಡೆಯುವ ಜೊತೆಗೆ ಅತ್ಯುತ್ತಮ ಕಟ್ಟಡ ನಿರ್ಮಿಸಿದೆ ಎಂದರು.
ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿ ಜಿಲ್ಲೆಯ ಕೃಷಿಗೆ ಆರ್ಥಿಕ ಸ್ವಾವಲಂಬಿ ಬದುಕು ನೀಡಿದ ಹೆಗ್ಗಳಿಕೆ ಮಾಜಿ ಪ್ರಧಾನಿ ಎಚ್. ಡಿ .ದೇವೇಗೌಡರು ಮತ್ತು ಎಚ್. ಡಿ.ರೇವಣ್ಣನವರಿಗೆ ಸೇರುತ್ತದೆ. ಎಚ್.ಡಿ. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೃಷಿಕರಿಗೆ ನೆರವಿಗೆ ಧಾವಿಸಿ ಸಾಲಮನ್ನಾ ಮಾಡಿದ್ದಾರೆ. ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಿಂದ ಬೆಳೆದಿರುವುದು ಇದಕ್ಕೆ ನಿರ್ದೇಶನ, ನಾನು ಶಾಸಕರಾದ ಸಂದರ್ಭದಲ್ಲಿ ಈ ಭಾಗದ ಬಹುತೇಕ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿದ ಬಗ್ಗೆ ತಿಳಿಸಿದ ಅವರು ಪ್ರಮುಖವಾಗಿ ಐದು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಅನುಕೂಲವಾಗುವ ಹೆಬ್ಬಾಳು ಏತ ನೀರಾವರಿಗೆ ಇಂದಿನ ಶಾಸಕರು ಅನುಮೋದನೆ ಮಾಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಹಾಲಿನ ಡೇರಿ ಅಧ್ಯಕ್ಷ ರೇಣುಕಯ್ಯ, ನಿರ್ದೇಶಕ ರಾಮಚಂದ್ರೇಗೌಡ, ಬಿ.ಎಂ.ದೊಡ್ಡವೀರೇಗೌಡ, ಗ್ರಾ.ಪಂ ಅಧ್ಯಕ್ಷೆ ಧೃವಕುಮಾರಿ, ವಿಸ್ತರಣಾಧಿಕಾರಿ ಪುಟ್ಟರಾಮು, ಸಹಾಯಕ ವ್ಯವಸ್ಥಾಪಕ ದಿನೇಶ್, ಸುರೇಶ್, ಕಾರ್ಯದರ್ಶಿ ಶಂಕರೇಗೌಡ, ಮಾಜಿ ಅಧ್ಯಕ್ಷರಾದ ಶಾಂತಮೂರ್ತಿ, ಮಲ್ಲೇಗೌಡ, ಚಂದ್ರಶೇಖರಯ್ಯ, ಭುವನೇಶ್, ವಿಘ್ನೇಶಯ್ಯ, ಜಗದೀಶ್, ತೀರ್ಥನಾಂದ್, ಮೋಹನ್, ಉಮೇಶ್, ಜಗದೀಶ್, ವೇದಮೂರ್ತಿ, ನಂಜೇಶ, ದಾನಮ್ಮ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.