ಡೇರಿ ಉದ್ಯಮದಿಂದ ತಾಲೂಕಿನಲ್ಲಿ ತಿಂಗಳಿಗೆ ಸುಮಾರು 20 ಕೋಟಿ ವಹಿವಾಟು ನಡೆಯುತ್ತಿದ್ದು ಇದರಿಂದ ಆರ್ಥಿಕವಾಗಿ ರೈತರಿಗೆ ಬದುಕು ಕಟ್ಟಿಕೊಟ್ಟಿದೆ. ತಾಲೂಕಿನ ರೈತರನ್ನು ಕಲ್ಪವೃಕ್ಷ ಕಾಮಧೇನು ಕೈ ಹಿಡಿದಿರುವುದರಿಂದ ತಾಲೂಕಿನ ಅಭಿವೃದ್ಧಿಯ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಹಾಸನ ಹಾಲು ಒಕ್ಕೂಟದಿಂದ ರೈತರಿಗೆ ಉತ್ತಮ ಬೆಲೆ ನೀಡುತ್ತಿದ್ದು ಜೊತೆಗೆ ಡೇರಿಗಳ ಮೂಲಕ ರಿಯಾಯಿತಿ ದರದಲ್ಲಿ ಪಶು ಆಹಾರ ಮ್ಯಾಟ್ ಸೇರಿದಂತೆ ಕೆಲವು ಸಾಮಗ್ರಿಗಳನ್ನು ರೈತರಿಗೆ ಕೊಡಲಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಪ್ರಸ್ತುತ ಡೇರಿ ಉದ್ಯಮದಿಂದ ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಸದೃಢವಾಗಲು ಕಾರಣವಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಮರಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಡೇರಿ ಉದ್ಯಮದಿಂದ ತಾಲೂಕಿನಲ್ಲಿ ತಿಂಗಳಿಗೆ ಸುಮಾರು 20 ಕೋಟಿ ವಹಿವಾಟು ನಡೆಯುತ್ತಿದ್ದು ಇದರಿಂದ ಆರ್ಥಿಕವಾಗಿ ರೈತರಿಗೆ ಬದುಕು ಕಟ್ಟಿಕೊಟ್ಟಿದೆ. ತಾಲೂಕಿನ ರೈತರನ್ನು ಕಲ್ಪವೃಕ್ಷ ಕಾಮಧೇನು ಕೈ ಹಿಡಿದಿರುವುದರಿಂದ ತಾಲೂಕಿನ ಅಭಿವೃದ್ಧಿಯ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಹಾಸನ ಹಾಲು ಒಕ್ಕೂಟದಿಂದ ರೈತರಿಗೆ ಉತ್ತಮ ಬೆಲೆ ನೀಡುತ್ತಿದ್ದು ಜೊತೆಗೆ ಡೇರಿಗಳ ಮೂಲಕ ರಿಯಾಯಿತಿ ದರದಲ್ಲಿ ಪಶು ಆಹಾರ ಮ್ಯಾಟ್ ಸೇರಿದಂತೆ ಕೆಲವು ಸಾಮಗ್ರಿಗಳನ್ನು ರೈತರಿಗೆ ಕೊಡಲಾಗುತ್ತಿದೆ ಎಂದರು.ಹಲವು ವರ್ಷಗಳಿಂದ ಗ್ರಾಮಸ್ಥರು ಹೊಸ ಡೇರಿ ನೀಡುವಂತೆ ಮನವಿ ಮಾಡುತ್ತಾ ಬಂದಿದ್ದರು ಅವರ ಮನವಿಯಂತೆ ಹೊಸ ಡೇರಿಯನ್ನು ಗ್ರಾಮದಲ್ಲಿ ಪ್ರಾರಂಭ ಮಾಡಲಾಗಿದೆ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಮಾರಾಟ ಮಾಡುವ ಮೂಲಕ ಸಂಘ ಅಭಿವೃದ್ಧಿ ಹೊಂದಲು ಹೆಚ್ಚು ಸಹಕಾರ ನೀಡುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ನೂತನ ಸಂಘದ ಅಧ್ಯಕ್ಷ ರಾಧಾ ಉಮಾ ಮಹೇಶ್, ಕಾರ್ಯದರ್ಶಿ ರತ್ನ ರವಿಕುಮಾರ್, ಮಾಜಿ ತಾಪಂ ಸದಸ್ಯರಾದ ಗೂಳಿ ಹೊನ್ನೇನಳ್ಳಿ ಗಣೇಶ್, ಗಂಗಾಧರ್, ಮಾಜಿ ಗ್ರಾಪಂ ಸದಸ್ಯ ಉಮೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕ ಕಾರ್ಯದರ್ಶಿ ಮರಿ ಶೆಟ್ಟಿಹಳ್ಳಿ ಸತೀಶ್, ಹಾಸನ ಹಾಲು ಒಕ್ಕೂಟದ ಮೇಲ್ವಿಚಾರಕ ಕೃಷ್ಣಮೂರ್ತಿ, ವಿಸ್ತಾರಣಾಧಿಕಾರಿ ರವಿಕುಮಾರ್, ಮುಖಂಡರಾದ ಹುಲಿಕೆರೆ ಸಂಪತ್ ಕುಮಾರ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್ ಜಿ. ಚಿರಂಜೀವಿ, ಜೆಡಿಎಸ್ ಯುವ ಮುಖಂಡರಾದ ಕುಮಾರಸ್ವಾಮಿ, ಸಂತೋಷ್( ಮೂಲೆ ಹಟ್ಟಿ ) ಪ್ರದೀಪ್, ಸಂಘದ ನಿರ್ದೇಶಕರಾದ ಪ್ರೇಮಲತಾ ಕೋಡಿ ಲಿಂಗಪ್ಪ, ಪ್ರಿಯಾಂಕ ಸುರೇಶ್, ಸುಕನ್ಯಾ ಕುಮಾರ್, ಹೇಮಾ ಜಗದೀಶ್, ಸವಿತಾ ಪುಟ್ಟರಾಜ್, ರಾಜಮಣಿ ಕುಮಾರ್, ದಿವ್ಯ ಬಸವರಾಜ್, ಮೋಹನ್ ಕುಮಾರಿ ಪುಟ್ಟರಾಜು, ಭಾಗ್ಯ ಕೃಷ್ಣ ಶೆಟ್ಟಿ, ಭಾಗ್ಯಮ್ಮ ಸ್ವಾಮಿ, ಗ್ರಾಮದ ಮುಖಂಡರಾದ ಜಗದೀಶ್, ಧರ್ಮಣ್ಣ, ಕುಮಾರಣ್ಣ, ಅಶೋಕ್, ಯೋಗೇಶ್ ಅರಸಪ್ಪ, ಪುಟ್ಟರಾಜ್, ಮಂಜು, ಶಾಮಿಯಾನ ಪುಟ್ಟರಾಜ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.