ಮರುಕುಂಬಿ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಗೆ ದಲಿತ ಸಂಘಟನೆಗಳ ಸಂಭ್ರಮ

KannadaprabhaNewsNetwork |  
Published : Oct 28, 2024, 12:55 AM IST
27ಎಚ್ಎಸ್ಎನ್17 :  | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆ ಮರುಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ೯೮ ಜನರಿಗೆ ಜೀವವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.

ಪಟಾಕಿ ಸಿಡಿಸಿ ಘೋಷಣೆ । ದಲಿತರ ಮೇಲಿನ ದೌರ್ಜನ್ಯದ ವಿರುದ್ಧ 98 ಜನರ ಶಿಕ್ಷೆಗೆ ಸ್ವಾಗತ । ಅಂಬೇಡ್ಕರ್‌ ಪ್ರತಿಮೆಗೆ ಮಾಲೆ

ಕನ್ನಡಪ್ರಭ ವಾರ್ತೆ ಹಾಸನ

ಕೊಪ್ಪಳ ಜಿಲ್ಲೆ ಮರುಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ೯೮ ಜನರಿಗೆ ಜೀವವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿ ಘೋಷಣೆ ಕೂಗಿದರು.

ಇದೇ ವೇಳೆ ದಲಿತ ಮುಖಂಡರಾದ ಕೃಷ್ಣದಾಸ್ ಮಾತನಾಡಿ, ಕೊಪ್ಪಳ ಜಿಲ್ಲೆ ಮರುಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ನ್ಯಾಯಾಲಯ ತೀರ್ಪು ನೀಡಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ದಲಿತರಿಗೆ ನ್ಯಾಯ ಒದಗಿಸಿದಂತಹ ನ್ಯಾಯಾಲಯ ಸಂವಿಧಾನವನ್ನು ಎತ್ತಿ ಹಿಡಿದಿದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ ಎಂದರು.

ಹಿರಿಯ ದಲಿತ ಮುಖಂಡ ಎಚ್.ಕೆ.ಸಂದೇಶ್ ಮಾಧ್ಯಮದೊಂದಿಗೆ ಮಾತನಾಡಿ, ಗಂಗಾವತಿ ತಾಲೂಕಿನ ಮರುಕುಂಡಿ ಗ್ರಾಮದಲ್ಲಿ ೨೦೨೪ರ ಏಪ್ರಿಲ್ ೨೮ ರಂದು ಪುನೀತ್ ರಾಜಕುಮಾರ್ ಅವರ ಪವರ್ ಸಿನಿಮಾ ಟಕೆಟ್ ತೆಗೆದುಕೊಳ್ಳುವ ಕಾರಣಕ್ಕೆ ಅಲ್ಲಿನ ದಲಿತರ ಮಧ್ಯೆ ಜಗಳವಾಗಿ ನಂತರದಲ್ಲಿ ಸವರ್ಣಿಯರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಅಂದು ಇಡೀ ದಿನ ಮಾದಿಗ, ದಲಿತರ ೬೦ ಗುಡಿಸಲನ್ನು ಸುಟ್ಟು ಹಾಕಲಾಗಿತ್ತು. ನಂತರ ಪೊಲೀಸ್ ಠಾಣೆಗೆ ದಲಿತರು ದೂರು ನೀಡಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸುಮಾರು ೧೧೭ ಜನರ ಮೇಲೆ ದೂರು ದಾಖಲಾಗುತ್ತದೆ. ಇವರಲ್ಲಿ ೧೭ ಜನರು ಈಗಾಗಲೇ ಸಾವನಪ್ಪಿದ್ದಾರೆ. ಉಳಿಕೆ ೯೮ ಜನರ ಮೇಲೆ ಜೀವವಧಿ ಶಿಕ್ಷೆ ನೀಡಲಾಯಿತು. ಇಂತಹ ಕ್ರಾಂತಿಕಾರಿ ತೀರ್ಪು ಎಲ್ಲಿಯೂ ಕೂಡ ಬಂದಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸಿ.ಜಿ.ಎಂ. ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಉಳುವಾರೆ, ಕೆ.ಈರಪ್ಪ, ರಂಗಸ್ವಾಮಿ ದಲಿತ ಮುಖಂಡ ಗೋವಿಂದ್ ರಾಜ್, ಸಿಜಿಎಂ ಒಕ್ಕೂಟ ಅಂಬುಗ ಮಲ್ಲೇಶ್, ದಲಿತ ಮುಖಂಡ ಈರೇಶ್ ಈರಳ್ಳಿ, ಗೋವಿಂದರಾಜು, ದಲಿತ ಮುಖಂಡ ಕ್ರಾಂತಿ ಪ್ರಸಾದ್ ತ್ಯಾಗಿ, ನಗರಸಭಾ ಸದಸ್ಯರು ಮತ್ತು ವಕೀಲರು, ವಕೀಲ ಯೋಗೀಶ್, ಕೆ.ಪ್ರಕಾಶ್, ದಲಿತ ಮುಖಂಡ ಜಗದೀಶ್ ಚೌಡಳ್ಳಿ, ಹರೀಶ್ ಕಟ್ಟೆಬೆಳಗೊಳಿ, ಸಾಹಿತಿ ಜಯರಾಮ್, ಬಿಒ ಇಲಾಖೆ ಕೆವೈಸಿ ಜಗದೀಶ್, ಸತೀಶ್ ಕಬ್ಬಳ್ಳಿ ಚಂದ್ರು ಶಾಣೆನಹಳ್ಳಿ ಇದ್ದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್