ಗ್ರಾಮೀಣ ಮಕ್ಕಳಿಗೆ ನಾಟ್ಯ ಕಲೆಗೆ ಪ್ರೋತ್ಸಾಹ ಅಗತ್ಯ: ವೈ ಎಸ್ ವಿ ದತ್ತ

KannadaprabhaNewsNetwork |  
Published : Feb 20, 2024, 01:46 AM IST
19ಕೆಕೆಡಿಯು2 | Kannada Prabha

ಸಾರಾಂಶ

ಭರತ ನಾಟ್ಯ ಕಲೆಯನ್ನು ಗ್ರಾಮೀಣ ಮಕ್ಕಳಿಗೆ ಕಲಿಸಿ ದೇಶ, ವಿದೇಶದಲ್ಲಿ ಕಡೂರಿನ ಕೀರ್ತಿ ಬೆಳಗಿಸುತ್ತಿರುವ ನಾಟ್ಯಕೇಶವ ನೃತ್ಯ ಕಲಾನಿಕೇತನ ಶಾಲೆಗೆ ಸಾಂಸ್ಕೃತಿಕ, ಸಾಹಿತ್ಯಾಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.

ನಾಟ್ಯಕೇಶವ ನೃತ್ಯ ಕಲಾನಿಕೇತನ ಶಾಲೆ ಆಯೋಜಿಸಿದ್ದ 9 ನೇ ವರ್ಷದ ನಾಟ್ಯ ಸಂಭ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಭರತ ನಾಟ್ಯ ಕಲೆಯನ್ನು ಗ್ರಾಮೀಣ ಮಕ್ಕಳಿಗೆ ಕಲಿಸಿ ದೇಶ, ವಿದೇಶದಲ್ಲಿ ಕಡೂರಿನ ಕೀರ್ತಿ ಬೆಳಗಿಸುತ್ತಿರುವ ನಾಟ್ಯಕೇಶವ ನೃತ್ಯ ಕಲಾನಿಕೇತನ ಶಾಲೆಗೆ ಸಾಂಸ್ಕೃತಿಕ, ಸಾಹಿತ್ಯಾಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು.ಕಡೂರು ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ನಾಟ್ಯಕೇಶವ ನೃತ್ಯ ಕಲಾನಿಕೇತನ ಶಾಲೆ ಆಯೋಜಿಸಿದ್ದ 9 ನೇ ವರ್ಷದ ನಾಟ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 9 ವರ್ಷದಿಂದ ಕಡೂರು ಸುತ್ತಮುತ್ತಲಿನ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಮಕ್ಕಳಿಗೆ ನಾಟ್ಯ ನೃತ್ಯದ ಬಗ್ಗೆ ತರಬೇತಿ ನೀಡುತ್ತಿರುವ ಶಿವಮೊಗ್ಗದ ವಿದ್ವಾನ್ ಎಸ್.ಕೇಶವ ಕುಮಾರ್ ಪಿಳ್ಳೈ ನೂರಾರು ಮಕ್ಕಳಿಗೆ ನಾಟ್ಯ ಕಲಿಸುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟ ಹಾಗೂ ವಿದೇಶಗಳಿಗೂ ಸಹ ಇವರಿಂದ ತರಬೇತಿ ಪಡೆದ ಮಕ್ಕಳನ್ನು ಕಳುಹಿಸಿ ಪ್ರಶಸ್ತಿ ಪಡೆದು ದಾಖಲೆ ಮಾಡಿರುವುದು ಹೆಮ್ಮೆಯ ಸಂಗತಿ. ಕಲಾಭಿಮಾನಿಗಳ ಪರವಾಗಿ ಪಿಳ್ಳೈ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಾವು ಶಾಸಕರಾದ ಅವಧಿಯಲ್ಲಿ ಪಿಳ್ಳೈ ಅವರಿಗೆ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸೇರಿದಂತೆ ಸಮಾನ ಮನಸ್ಕರು ನಾಟ್ಯಕಲಾ ಶಾಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಮುಂದೆಯೂ ಸಹ ಕಲಾಭಿಮಾನಿಗಳು ಅವರಿಗೆ ಸಹಕಾರ ನೀಡಿ ಎಂದು ಕೋರಿದರು.

ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾರಿತ್ರಿಕ, ಐತಿಹಾಸಿಕ ಹಿನ್ನೆಲೆ ಇದ್ದು, 50 ವರ್ಷದ ಹಿಂದೆ ಈ ಶಾಲೆ ಯಲ್ಲಿ ಕಲಿತ ವಿದ್ಯಾರ್ಥಿ ಈ ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವುದು ಶಾಲೆಗೆ ಹಾಗೂ ನಮ್ಮ ತಾಲೂಕಿಗೂ ಹೆಮ್ಮೆಯ ವಿಷಯ.

ಕಿಮ್ಮನೆ ರತ್ನಕರ ಶಿಕ್ಷಣ ಸಚಿವರಾಗಿದ್ದ ವೇಳೆ ಈ ಶಾಲೆ ಕೊಠಡಿ ನಿರ್ಮಾಣಕ್ಕೆ ಮನವಿ ಮಾಡಿದಾಗ ಕೂಡಲೆ ಸಚಿವರು ಅಂದು ಹಣ ಬಿಡುಗಡೆ ಮಾಡಿದ್ದರು. ಅದರ ಫಲವೆ ಇಂದು ಭವ್ಯ ಕಟ್ಟಡ ನಿರ್ಮಾಣವಾಗಿರುವುದು ಎಂದು ಸ್ಮರಿಸಿದರು.

ಶಾಸಕ ಕೆ.ಎಸ್.ಆನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಯಲು ಸೀಮೆಯಲ್ಲಿ ಇಂತಹ ನಾಟ್ಯ ಕಲೆಯನ್ನು ಮಕ್ಕಳಿಗೆ ಕಲಿಸಿ ಈ ನಾಡಿನ ಸಾಂಸ್ಕೃತಿಕ ಕಲೆಗಳ ತರಬೇತಿ ನೀಡುತ್ತಿರುವ ಕಲಾನಿಕೇತನ ಶಾಲೆ 9 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪಿಳ್ಲೈ ಅವರ ಸಾಧನೆ ಮೆಚ್ಚುವಂತಹದ್ದು. ಮುಂಬರುವ ದಶ ಮಾನೋತ್ಸವವನ್ನು ಅದ್ಧೂರಿಯಾಗಿ ಪಟ್ಟಣದಲ್ಲಿಯೇ ನಡೆಸಲು ತಾವು ಸಹ ಅವರೊಂದಿಗೆ ಕೈಜೋಡಿಸಿ ಯಶಸ್ಸಿಗೆ ಶ್ರಮಿಸುತ್ತೇನೆ ಹಾಗು ಡಾ.ವೆಂಕಟಲಕ್ಷ್ಮಮ್ಮ ಸಮಾಧಿ ದುರಸ್ಥಿಗೆ ಸಹಾಯ ಮಾಡುವುದಾಗಿ ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಡೂರು ಮಕ್ಕಳಿಗೆ ನಾಟ್ಯ ಕಲಿಸುವ ಮೂಲಕ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕೇಶವಕುಮಾರ್ ಅವರನ್ನು ಅಭಿನಂಧಿಸುತ್ತೇವೆ. ಇಂತಹ ಕಲಾ ನಿಕೇತನ ಶಾಲೆಯನ್ನು ಮುಂದಿನ ಮಕ್ಕಳಿಗೆ ಉಳಿಸಿ ಬೆಳೆಸಲು ಪುರಸಭೆ ಸಹಕಾರ ಎಂದಿಗೂ ಇರುತ್ತದೆ. ದಶಮಾನೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಲ್ಲಾ ಕಲಾಪೋಷಕರು ಸಹ ನಿಮ್ಮೊಂದಿಗೆ ಇರುತ್ತೇವೆ ಎಂದರು.ತಹಸೀಲ್ದಾರ್ ಎಂ.ಪಿ.ಕವಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧರಾಜ್ ನಾಯ್ಕ, ಮುಖ್ಯ ಶಿಕ್ಷಕ ಎಂ. ಚಂದ್ರಶೇಖರ್, ಮುಖ್ಯ ಶಿಕ್ಷಕಿ ಕೆ.ಎಂ.ರುಕ್ಷಿಣಿ, ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಪಂಗ್ಲಿ ಮಂಜು,ಶೋಭಾ ಮತ್ತು ಪೋಷಕರು ಇದ್ದರು.

19ಕೆಕೆಡಿಯು2.

ಕಡೂರು ಪಟ್ಟಣದ ಶ್ರೀ ನಾಟ್ಯಕೇಶವ ನೃತ್ಯ ಕಲಾನಿಕೇತನ ಶಾಲೆ 9ನೇ ವರ್ಷದ ನಾಟ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಮಾತನಾಡಿದರು. ಭಂಡಾರಿಶ್ರೀನಿವಾಸ್, ಎಂ.ಪಿ.ಕವಿರಾಜ್, ಸಿದ್ದರಾಜನಾಯ್ಕ ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ