ಕಾರ್ಮಿಕ ಸಚಿವ ಸಂತೋಷ ಲಾಡ್ ವಿರುದ್ಧ ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Feb 05, 2026, 02:30 AM IST
ಮುಂಡರಗಿಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕೂಡಲೇ ಕಾರ್ಮಿಕ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಸಂಪುಟದಿಂದ ತೆಗೆದುಹಾಕದೇ ಇದ್ದಲ್ಲಿ ರಾಜ್ಯಾದ್ಯಂತ ಹಡಪದ ಸಮಾಜದ ವತಿಯಿಂದ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಮುಂಡರಗಿ: ಕಾರ್ಮಿಕ‌ ಸಚಿವ ಹಡಪದ(ಕ್ಷೌರಿಕ) ಸಮಾಜಕ್ಕೆ ಮಾನಸಿಕವಾಗಿ ನೋವುಂಟು ಮಾಡುವಂತ ನಿಷೇಧಿತ ಪದವನ್ನು ಬಳಸಿದ್ದಲ್ಲದೆ, ವೃತ್ತಿ ಬಗ್ಗೆ ವ್ಯಂಗ್ಯ ಮಾಡಿದ್ದು, ಕೂಡಲೇ ಕಾರ್ಮಿಕ ಸಚಿವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಡಪದ ಸಮಾಜದಿಂದ ಬುಧವಾರ ತಾಲೂಕು ಹಡಪದ ಅಪ್ಪಣ್ಣ ಸೇವಾ ಸಂಘದಿಂದ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.

ನಮ್ಮ ಸಮಾಜವು ಅತಿ ಹಿಂದುಳಿದಿಳಿದೆ. ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಅಸಂಘಟಿತ ಕಾರ್ಮಿಕ ವಲಯದಲ್ಲಿದ್ದು, ವೈದ್ಯರನ್ನು ಬಿಟ್ಟರೆ ಎರಡನೇ ತಾಯಿ ಸ್ಥಾನದಲ್ಲಿ ಸೇವೆ ಮಾಡುವ ಸಮಾಜ ನಮ್ಮದಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಲ್ಲಿಯೇ ಆ ಪದವನ್ನು ನಿಷೇಧಿಸಲಾಗಿದೆ. ಆದರೂ ಕಾಂಗ್ರೆಸ್‌ ಸರ್ಕಾರದ ಸಚಿವರೇ ನಿಷೇಧಿತ ಪದಬಳಕೆ ಮಾಡುತ್ತಿದ್ದು, ನಮ್ಮ ಸಮಾಜಕ್ಕೆ ಬಹಳ ನೋವುಂಟು ಮಾಡಿದೆ. ಕೂಡಲೇ ಕಾರ್ಮಿಕ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಸಂಪುಟದಿಂದ ತೆಗೆದುಹಾಕದೇ ಇದ್ದಲ್ಲಿ ರಾಜ್ಯಾದ್ಯಂತ ಹಡಪದ ಸಮಾಜದ ವತಿಯಿಂದ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ದೇವಪ್ಪ ಮುಂಡರಗಿ, ತಾಲೂಕು ಅಧ್ಯಕ್ಷ ವೀರಣ್ಷ ಹಡಪದ, ದೇವರಾಜ ಹಡಪದ, ಮುತ್ತು ಹಡಪದ, ಮಲ್ಲಿಕಾರ್ಜುನ ಹಡಪದ, ಬಸವರಾಜ ಹಡಪದ, ಚಂದ್ರಶೇಖರ ಹಡಪದ, ಉದಯಕುಮಾರ ಹಡಪದ, ಮಂಜುನಾಥ ಹಡಪದ, ಶಿವಾನಂದ ಹಡಪದ‌ ಇತರರು ಇದ್ದರು. ಬಿಇಡಿ ದಾಖಲಾತಿ ಪರಿಶೀಲನೆ

ಗದಗ: 2025- 26ನೇ ಸಾಲಿನ ಬಿಇಡಿ ದಾಖಲಾತಿ ಸಂಬಂಧ 4ನೇ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟು ಮ್ಯಾಟ್ರಿಕ್ಸನ್ನು ಜ. 29ರಂದು https://schooleducation.karnataka.gov.in ನಲ್ಲಿ ಪ್ರಕಟಿಸಿ ಕಾಲೇಜುಗಳಿಗೆ ದಾಖಲಾಗದ ಅಭ್ಯರ್ಥಿಗಳು 4ನೇ ಸುತ್ತಿನ ಸೀಟು ಹಂಚಿಕೆಗಾಗಿ ತಮ್ಮ ಅಭಿಮತವನ್ನು ದಾಖಲಿಸಲು ಜ. 31ರ ವರೆಗೆ ಅವಕಾಶವನ್ನು ಕಲ್ಪಿಸಿದ್ದು, karnataka.gov.in/GPSTRHK ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ.ಅಭ್ಯರ್ಥಿಗಳು ಈಗ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡನ್ನು ಬಳಸಿ ನಿಗದಿತ ಶುಲ್ಕದ ಚಲನ್‌ ಮುದ್ರಿಸಿಕೊಂಡು ಭಾರತೀಯ ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಿ ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ಹಾಜರಾಗಿ ಸಲ್ಲಿಸಿ ಫೆ. 6ರೊಳಗೆ ದಾಖಲಾತಿ ಪತ್ರವನ್ನು ಪಡೆದುಕೊಳ್ಳುವುದು ಹಾಗೂ ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಲು ಸೂಚಿಸಿದೆ.ಹೆಚ್ಚಿನ ಮಾಹಿತಿಗಾಗಿ www.schooleducation.kar.nic.in.ಜಾಲತಾಣವನ್ನು ಅಥವಾ ಬಿ.ಎಫ್. ಆರವಟಗಿ ನೋಡಲ್ ಅಧಿಕಾರಿಗಳು ಡಯಟ್ ಗದಗ, ಇವರನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ