ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಜೆಡಿಎಸ್ ತಾಲೂಕು ಅಧ್ಯಕ್ಷ ಬಾಲಪ್ಪ ಹುನಗುಂಡಿ ಮಾತನಾಡಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ ಅವರು ಪೋಲಿಸ್ ಇಲಾಖೆಯ ಗಾಂಭೀರ್ಯತೆಯನ್ನು ಕಳೆದಿರುವ ಇವರು, ಭಾರತ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಎಚ.ಡಿ.ಕುಮಾರಸ್ವಾಮಿಯವರ ವಿರುದ್ಧ ಅಸಭ್ಯ ಮತ್ತು ಅವಾಚ್ಯ ಶಬ್ಧಗಳನ್ನು ಬಳಸಿ ಅಧಿಕಾರಿಗಳಿಗೆ ಪತ್ರ ಬರೆದು ಇಲಾಖೆಯ ಅಶಿಸ್ತಿಗೆ ಕಾರಣರಾಗಿದ್ದಾರೆ ಎಂದರು.
ಎಂ.ಚಂದ್ರಶೇಖರ ಮತ್ತು ರಾಜ್ಯದ ಪೊಲೀಸ್ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ಭ್ರಷ್ಟತೆಗೆ ಉತ್ತೇಜನ ನೀಡುತ್ತಿದೆ. ಕಾರಣ ಎಂ.ಚಂದ್ರಶೇಖರ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಜೆಡಿಎಸ್ ಕಾರ್ಯದರ್ಶಿ ಚಂದ್ರಕಾಂತ ಶೇಖಾ, ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಅನ್ವರಖಾನ್ ಪಠಾಣ, ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಈರಣ್ಣ ಕವಡಿಮಟ್ಟಿ, ಸಂತೋಷ ತಿಪ್ಪಾ, ಕೃಷ್ಣಾ ಹಾಸೀಲಕರ್, ಎಸ್.ಆರ್.ವಾಲೀಕಾರ, ಲಕ್ಷ್ಮಣ ಹಾಲನ್ನವರ, ಪ್ರಕಾಶ ವಾಳದುಂಕಿ, ಸಚಿನ್ ರಾಂಪೂರ, ಈಶ್ವರ ಮುರಗೋಡ, ಸಂಗಮೇಶ ನನ್ನಾ, ಸಂಜೀವ ಭಾವಿಕಟ್ಟಿ, ಸಂಗಪ್ಪ ಮಾವಿನಮರದ, ಕೇಮಣ್ಣ ರಾಂಪೂರ ಸೇರಿದಂತೆ ಇನ್ನೂ ಅನೇಕರು ಮನವಿ ನೀಡಿ ಆಗ್ರಹಿಸಿದರು.