ಹಾರೋಕೊಪ್ಪ ಹೈನುಗಾರರಿಗೆ ಅಭಿವೃದ್ಧಿಗೆ ಉತ್ತೇಜನ

KannadaprabhaNewsNetwork |  
Published : Jul 12, 2026, 03:00 AM IST
ಪೊಟೋ೧೦ಸಿಪಿಟ೨: ತಾಲೂಕಿನ ಹಾರೋಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರದ ನಿರ್ಮಾಣದ ಕಾಮಗಾರಿಗೆ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನಲ್ಲಿ ಹೈನೋದ್ಯಮದ ಅಭಿವೃದ್ಧಿಗೆ ಉತ್ತೇಜನ ನೀಡಲು ಒಕ್ಕೂಟ ಬದ್ಧ ಎಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ತಿಳಿಸಿದರು

ಚನ್ನಪಟ್ಟಣ: ತಾಲೂಕಿನಲ್ಲಿ ಹೈನೋದ್ಯಮದ ಅಭಿವೃದ್ಧಿಗೆ ಉತ್ತೇಜನ ನೀಡಲು ಒಕ್ಕೂಟ ಬದ್ಧ ಎಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ತಿಳಿಸಿದರು.

ತಾಲೂಕಿನ ಹಾರೋಕೊಪ್ಪ ಡೇರಿ ಕಟ್ಟಡ ಮತ್ತು ಬಿಎಂಸಿ ಕೇಂದ್ರದ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವ ಕ್ಷೇತ್ರದ ಹೈನೋದ್ಯಮ ಹಾಗೂ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ಹಾರೋಕೊಪ್ಪ ಹಾಲು ಉತ್ಪಾದಕ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಡೇರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣದ ಜತೆಗೆ ಬಿಎಂಸಿ ಕೇಂದ್ರ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಕಟ್ಟಡಕ್ಕೆ ಬಮೂಲ್, ಕೆಎಂಎಫ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ವಿವಿಧ ಮೂಲದಿಂದ ೨೦ ಲಕ್ಷ ರು. ಅನುದಾನದ ಜೊತೆಗೆ ಹೆಚ್ಚುವರಿ ಅನುದಾನಕ್ಕೆ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಹಾರೋಕೊಪ್ಪ ಗ್ರಾಮದಲ್ಲಿ ೨ ಸಾವಿರ ರಾಸುಗಳಿದ್ದು, ರೈತರು ೨ ಸಾವಿರ ಮ್ಯಾಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಏಕಕಾಲಕ್ಕೆ ಅಷ್ಟೊಂದು ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಗಮನ ಸೆಳೆದು ಶೇ.೫೦ ರಷ್ಟು ಮ್ಯಾಟ್ ಕೊಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಎಚ್.ಎಸ್.ಪುಟ್ಟರಾಜು ಮಾತನಾಡಿ, ಸಂಘದಲ್ಲಿ ನಿತ್ಯ ೮ ಸಾವಿರ ಲೀ. ಹಾಲು ಉತ್ಪಾದುಸುತ್ತಿದ್ದು, ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ೬೦ ಲಕ್ಷ ವೆಚ್ಚದಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ಆರೇಳು ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವ ಗುರಿ ಇದೆ ಎಂದರು.

ಈ ವೇಳೆ ಡೇರಿ ಉಪಾಧ್ಯಕ್ಷ ಎಚ್.ಎಂ.ಕರೀಗೌಡ, ನಿರ್ದೇಶರಾದ ಡಿ.ಶಿವಲಿಂಗಯ್ಯ, ಚಿಕ್ಕತಮ್ಮಯ್ಯ, ಎಚ್.ಎಂ. ಮಹದೇವ, ಎಚ್.ಎಸ್.ಸಾಗರ್, ಕಮಲಮ್ಮ, ತಾಯಮ್ಮ, ಜ್ಯೋತಿ, ಪಿ.ಚೌಡಯ್ಯ, ಮುಖಂಡರಾದ ಎಚ್.ಎಲ್. ಶಂಕರೇಗೌಡ, ಎಚ್.ಟಿ.ಶಂಕರೇಗೌಡ, ಎಚ್.ಎಲ್.ಶಂಕರೇಗೌಡ ಇತರರಿದ್ದರು.

ಪೊಟೋ೧೦ಸಿಪಿಟ೨: ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಡೇರಿ ಕಟ್ಟಡ ಮತ್ತು ಬಿಎಂಸಿ ಕೇಂದ್ರದ ನಿರ್ಮಾಣ ಕಾಮಗಾರಿಗೆ ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಭೂಮಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ್ ಅದಾಲತ್; ಅತ್ಯಂತ ವೇಗದ ಶಾಶ್ವತ ಪರಿಹಾರ: ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಜನರಿಗೆ ಕಲಾಭವನ ಮುಕ್ತ ಮಾಡಲು ಹೋರಾಟ ಸಮಿತಿ