ಕನ್ನಡಪ್ರಭ ವಾರ್ತೆ ಲೋಕಾಪುರ ಸಂಸ್ಕೃತಿ ಸಂಸ್ಕಾರದಿಂದ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಬನಹಟ್ಟಿಯ ಶರಣಬಸವ ಶಿವಾಚಾರ್ಯರು ಎಲ್ಲ ಜಂಗಮ ವಟುಗಳಿಗೂ ಲಿಂಗದೀಕ್ಷೆ ಕೊಟ್ಟು ಧರ್ಮೋಪದೇಶ ಮಾಡಿದರು. ಸಾನ್ನಿಧ್ಯ ವಹಿಸಿದ್ದ ವೀರಗಂಗಾಧರ ಸ್ವಾಮೀಜಿ ಮಾತನಾಡಿ, ಶಿಬಿರದಿಂದ ಮಕ್ಕಳಿಗೆ ಆಚಾರ ವಿಚಾರಗಳ ಅರಿವು ಉಂಟಾಗುತ್ತದೆ ಎಂದರು.
ಕುಂದರಗಿಯ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದ ಏಳ್ಗಿಗೆಗಾಗಿ ಹಿರೇಮಠವು ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುತ್ತದೆ. ಇಂತಹ ಕಾರ್ಯಕ್ರಮಕ್ಕೆ ನಾವು ನಿವೇಲ್ಲರೂ ಸಹಕಾರ ನಿಡೋಣ ಎಂದು ಹೇಳಿದರು. ಶ್ರೀಗಳನ್ನು ಹಿರೇಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಉಚಿತ ವೇದಾಧ್ಯಯನ ಮಾಡಿದ ವಟುಗಳು ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಗಣ್ಯರಾದ ಎಂ.ಎಂ. ವಿರಕ್ತಮಠ, ಎಲ್.ಸಿ. ಉದಪುಡಿ, ಎಸ್.ಎನ್. ಹಿರೇಮಠ, ಬಿ.ಕೆ. ಮಠದ, ಶಿವಪ್ಪ ಚೌಧರಿ, ಸುಭಾಸ ಹಂಚಾಟೆ, ಸಂಕಪ್ಪ ಗಂಗಣ್ಣವರ, ಆದಯ್ಯ ಹೊದ್ಲೂರಮಠ, ಪ್ರಕಾಶ ಚುಳಕಿ, ಅಲ್ಲಾಸಾಬ ಯಾದವಾಡ, ಸದಾಶಿವ ಉದಪುಡಿ, ಮಲ್ಲಪ್ಪ ಕೊಟಗಿ, ಸದಾಶಿವ ನಾವಿ, ಆರ್.ಜಿ. ಮುತ್ತಿನಮಠ ಹಾಗೂ ಲೋಕಾಪುರ ಸುತ್ತಮುತ್ತಲಿನ ಗ್ರಾಮಸ್ಥರು ಹಿರೇಮಠದ ಭಕ್ತರು ಇದ್ದರು.