ಶಿಕ್ಷಣ, ಸಂಸ್ಕಾರದಿಂದ ಸಮಾಜದ ಅಭಿವೃದ್ಧಿ

KannadaprabhaNewsNetwork |  
Published : Sep 05, 2026, 02:00 AM IST
ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ ಭಗವಾನ ಶ್ರೀ ಕೃಷ್ಣ ಜಯಂತಿ ಉದ್ಘಾಟನೆ | Kannada Prabha

ಸಾರಾಂಶ

ಯುವ ಜನಾಂಗದಲ್ಲಿ ಕಂಡು ಬರುತ್ತಿರುವ ಜಾಗೃತಿ ಹಾಗೂ ಉತ್ಸಾಹ ಆತ್ಮವಿಶ್ವಾಸ ಮೂಡಿಸುತ್ತಿದೆ. ಯುವಜನರು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಇಂತಹ ಕಾರ್ಯಕ್ರಮಗಳನ್ನು ಸ್ವತಃ ಸಂಘಟಿಸುವ ಮಟ್ಟಕ್ಕೆ ಬೆಳೆಯಬೇಕು.

ಧಾರವಾಡ:

ಭಗವದ್ಗೀತೆ ಹಿಡಿದು ಪ್ರಮಾಣ ಸ್ವೀಕರಿಸುವ ಮೂಲಕ ಶ್ರೀಕೃಷ್ಣನ ಸಂದೇಶ ಸ್ಮರಿಸಲಾಗುತ್ತಿದೆ ಎಂದು ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ ಹೇಳಿದರು.

ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಭಗವಾನ ಶ್ರೀಕೃಷ್ಣ ಜಯಂತಿ ಉದ್ಘಾಟಿಸಿದ ಅವರು, ಯುವ ಜನಾಂಗದಲ್ಲಿ ಕಂಡು ಬರುತ್ತಿರುವ ಜಾಗೃತಿ ಹಾಗೂ ಉತ್ಸಾಹ ಆತ್ಮವಿಶ್ವಾಸ ಮೂಡಿಸುತ್ತಿದೆ. ಯುವಜನರು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಇಂತಹ ಕಾರ್ಯಕ್ರಮಗಳನ್ನು ಸ್ವತಃ ಸಂಘಟಿಸುವ ಮಟ್ಟಕ್ಕೆ ಬೆಳೆಯಬೇಕು ಎಂದರು.

ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿದ್ದು, ಮಕ್ಕಳಿಗೆ ಇವುಗಳ ಕುರಿತು ಅಗತ್ಯ ಅರಿವು ಮೂಡಿಸಬೇಕು. ಮಕ್ಕಳಿಗೆ ಸರಿಯಾದ ಜಾಗೃತಿ, ಮಾರ್ಗದರ್ಶನ ಹಾಗೂ ರಕ್ಷಣೆ ನೀಡುವುದು ಹಿರಿಯರ ಜವಾಬ್ದಾರಿ. ಅವರಿಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಬೆಂಬಲ ನೀಡುವ ಮೂಲಕ ಅವರ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂಬ ಸಲಹೆ ನೀಡಿದರು.

ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಶ್ರೀಕೃಷ್ಣ ಜಯಂತಿ ಯಾವುದೇ ಒಂದು ಸಮಾಜಕ್ಕೆ ಸೀಮಿತಗೊಳಿಸದೆ, ವಿವಿಧ ಸಮಾಜಗಳ ಜನರು ಭಕ್ತಿ-ಭಾವದಿಂದ ಶ್ರೀಕೃಷ್ಣ ಪರಮಾತ್ಮನನ್ನು ಸ್ಮರಿಸಬೇಕು ಎಂದರು.

ಇಸ್ಕಾನ್ ದೇವಾಸ್ಥಾನದ ರಣಧೀರ ರಾಮದಾಸ್ ಭಗವಾನ ಶ್ರೀಕೃಷ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಸಂತ ಅರ್ಕಾಚಾರಿ, ಕುಮಾರ ಬೆಕ್ಕೇರಿ, ಆರತಿ ದೇವಶಿಖಾಮಣಿ ಇದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಯಾದವ ಸಂಘದ ಅಧ್ಯಕ್ಷರಾದ ನೇತ್ರಾವತಿ ಗೊಲ್ಲರ, ನಾಗರಾಜ ಯಾದವ, ಬುರಾನ ಗೌಳಿ, ಇಮಾಮ ಕಾನೆವಾಲೆ, ವಿಶಾಲ್ ಗೌಳಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಜಾನಪದ ಒಲವು ಹೆಚ್ಚಳ ಆಶಾದಾಯಕ
ಶ್ರದ್ಧಾ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ