)
ಧಾರವಾಡ:
2026-27ನೇ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಿರಿಯ ಪ್ರಾಥಮಿಕ ವಿಭಾಗ:ಧಾರವಾಡ ಶಹರದ ಚಪ್ಪರ ಬಂದ ಕಾಲನಿಯ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಝಡ್.ಐ. ಮಲೀಕನವರ, ಧಾರವಾಡ ಗ್ರಾಮೀಣದ ವಿನಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಾವಿತ್ರಿ ಪಟಗಾರ, ಹುಬ್ಬಳ್ಳಿ ನಗರದ ಈಶ್ವರ ನಗರದ ಉರ್ದು ಪ್ರಾಥಮಿಕ ಶಾಲೆಯ ಶಬೀನಆರಾ ಮುನಸಿ, ನವನಗರ ಶಿವಾನಂದ ನಗರದ ಚಂದ್ರಪ್ಪ ಚೆನ್ನಗೌಡ್ರ, ಕಲಘಟಗಿಯ ನೆಲ್ಲಿಹರವಿ ತಾಂಡದ ಹೇಮರಡ್ಡಿ ಕರಿರಡ್ಡಿ, ಕುಂದಗೋಳದ ಮತ್ತಿಗಟ್ಟಿ ಉರ್ದು ಪ್ರಾಥಮಿಕ ಶಾಲೆಯ ಮಕ್ತುಮಹುಸೇನ ಸಾಬನವರ, ಅಣ್ಣಿಗೇರಿ ಮಾರುತಿ ಸುಣಗಾರ.
ಧಾರವಾಡದ ಗುಲಗಂಜಿಕೊಪ್ಪದ ಸರ್ಕಾರಿ ಉರ್ದು ಮಾದರಿ ನಂ. 4ರ ಮಂಜುಳ ಎಚ್.ಎಫ್., ಹಾರೋಬೆಳವಡಿಯ ಸಂಭಾಜಿ ಜಾಧವ, ಹುಬ್ಬಳ್ಳಿ ತಬೀಬಲ್ಯಾಂಡ್, ಸರ್ಕಾರಿ ಮಾದರಿ ಉರ್ದು ಹೆಣ್ಣ ಮಕ್ಕಳ ಶಾಲೆ ನಂ.1ರ ಹೇಮಕ್ಕ ಮೆಣಸಗಿ, ಉಣಕಲ್ಲನ್ ಕರ್ನಾಟಕ ಪಬ್ಲಿಕ್ ಶಾಲೆಯ ಈಶ್ವರಗೌಡ ಬೊಮ್ಮನಗೌಡ್ರ, ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ದಾಸರ, ಕುಂದಗೋಳ ತಾಲೂಕಿನ ಯಲಿವಾಳದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಗೀತಾ ಖಂದಾರೆ, ನವಲಗುಂದ ತಾಲೂಕಿನ ಗುಮ್ಮಗೋಳದ ಎಂ.ಡಿ. ಚುಳಕಿ.
ಧಾರವಾಡದ ಗುಲಗಂಜಿಕೊಪ್ಪದ ಉರ್ದು ಪ್ರೌಢಶಾಲೆಯ ಕೆ.ಆರ್. ರಕ್ಕಸಗಿ, ಹಳೇ ತೇಗೂರಿನ ಟಿಜಿಟಿ ಶಾಲೆಯ ಶ್ರೀಪಾದ ಗೊಂಬಿ, ಹುಬ್ಬಳ್ಳಿಯ ಪೆಂಡಾರಗಲ್ಲಿ ಶಾಲೆಯ ಶಿವಯೋಗಿ ಕೋಷ್ಟಿ, ಹೆಬಸೂರು ಶಾಲೆಯ ಮುಖ್ಯಶಿಕ್ಷಕ ಪಿ.ಬಿ. ಶಿವಪೂರ, ಕಲಘಟಗಿ ತಾಕೂಕಿನ ಗುರುವಿನಕೊಪ್ಪ ಶಾಲೆಯ ರವಿ ಕುಲಕರ್ಣಿ, ಕುಂದಗೋಳದ ಎಸ್.ಎಸ್. ಬಾಲಿಕಾ ಪ್ರೌಢಶಾಲೆಯ ಮಂಜುಳಾ ದಂಡಿನ, ನವಲಗುಂದ ತಾಲೂಕಿನ ಗುಡಿಸಾಗರ ನಾಗನೂರು ಶಾಲೆಯ ಎಲ್.ವೈ. ರಾಯಪ್ಪನವರ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.