ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪಿರಿಯಾಪಟ್ಟಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಅಭಿವೃದ್ದಿ ಕಾರ್ಯಕ್ರಮದಲ್ಲಿಕುರಿಗಾಹಿಗೆ ಐಡಿಕಾರ್ಡ್, ಕೃಷಿ ಮತ್ತು ರೇಷ್ಮೆ ಪರಿಕಗಳ ವಿತರಣೆ, 100 ತ್ರಿಚಕ್ರ ಸ್ಕೂಟರ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
ರಾಜ್ಯಾದ್ಯಂತ ಕುರಿಗಾಹಿಗಳನ್ನು ಗುರುತಿಸಿ ಅವರಿಗೆ ಐಡಿ ಕಾರ್ಡ್ ನೀಡುವ ಮೂಲಕ ಸವಲತ್ತುಗಳನ್ನು ಪಡೆಯಲು ಅನುಕೂಲ ಮಾಡಿಕೊಡುವ ಕಾರ್ಯಕ್ರಮಕ್ಕೂ ಚಾಲನೆ ದೊರಕಿದ್ದು, ಉತ್ತರ ಕರ್ನಾಟಕದಿಂದ ಬಂದ ಅನೇಕ ಕುರಿಗಾಹಿಗಳು ಕಂಬಳಿ ತೊಟ್ಟು ಸಿದ್ದರಾಮಯ್ಯಅವರಿಂದ ಗುರುತಿನ ಚೀಟಿ ಪಡೆದುಕೊಂಡರು.ಕಾಲುಬಾಯಿ ಜ್ವರದ ಲಸಿಕಾ ಅಭಿಯಾನಕ್ಕೆ ಚಾಲನೆ
ರಾಜ್ಯಾದ್ಯಂತ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ 7ನೇ ಸುತ್ತಿನ ಲಸಿಕಾ ಅಭಿಯಾನಕ್ಕೆ ಸಿಎಂ ಮತ್ತು ಡಿಸಿಎಂ ಚಾಲನೆ ನೀಡಿದರು.ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿ, ಈ ಹಿಂದೆ ವರ್ಷದಲ್ಲಿ ಒಮ್ಮೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು, ಆದರೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ನೀಡಲಾಗುತ್ತಿದೆ. 7ನೇ ಬಾರಿ ಲಸಿಕೆ ನೀಡಲಾಗುತ್ತಿದೆ, ಇದರಿಂದ ಜನ ಜಾನುವಾರುಗಳು ಅಕಾಲಿಕ ಮರಣಕ್ಕೆ ತುತ್ತಾಗುವುದನ್ನು ತಪ್ಪಿಸಬಹುದಾಗಿದೆ. ಈ ಅಭಿಯಾನ ಮುಂದಿನ ಜೂ. 9ವರೆಗೆ ನಡೆಯುತ್ತಿದೆ. ಇದಲ್ಲದೆ ಇತ್ತಿಚೆಗೆ ಬರುತ್ತಿರುವ ಚರ್ಮಗಂಟು ರೋಗಕ್ಕೂ ಲಸಿಕೆ ನೀಡಲಾಗುವುದು, ಕಾಮಧೇನು ಅಪತ್ತ್ ನಿಧಿ, ಅನುಗ್ರಹ ಯೋಜನೆ ಅಡಿ ಹಸು ಮತ್ತು ಕುರಿ ಮರಣಕ್ಕೆ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಮತ್ತು ರೇಷ್ಮೆ ಪರಿಕಗಳ ವಿತರಣೆತಾಲೂಕಿನಲ್ಲಿ ಜಿಲ್ಲಾ ಹಂತದ ಕಾರ್ಯಕ್ರಮ ನಡೆದ ಪರಿಣಾಮ ನೂರಾರು ರೈತರಿಗೆ ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣಗಳು, ರೇಷ್ಮೆ ಮೊಟ್ಟೆಗೂಡು, ಯಂತ್ರ, ಟ್ರ್ಯಾಕ್ಟರ್, ಟ್ರಿಲ್ಲರ್, ರಾಗಿ ಒಕ್ಕಣೆ ಮಾಡುವ ಯಂತ್ರ ಮೇವು ಕಾಟಾವು ಯಂತ್ರ ಮುಂತಾದವುಗಳನ್ನು ನೂರಾರು ಫಲಾನುಭವಿಗಳಿಗೆ ವಿತರಣೆ ಮಾಡಿದ್ದು ವಿಶೇಷವಾಗಿತ್ತು.
100 ತ್ರಿಚಕ್ರ ಸ್ಕೂಟರ್ ನೀಡಿಕೆಒಂದು ತಾಲೂಕಿನ ಮಟ್ಟಿಗೆ 10-15 ತ್ರಿಚಕ್ರವಾಹನಗಳನ್ನು ನೀಡುವುದು ವಾಡಿಕೆ ಆದರೆ 120 ಅರ್ಜಿಗಳು ಬಂದಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ ಪರಿಣಾಮ 100 ಮಂದಿ ವಿಚಕಲ ಚೇತನರಿಗೆ ಏಕಕಾಲದಲ್ಲಿ ತ್ರಿಚಕ್ರ ಸ್ಕೂಟರ್ ದೊರಕ್ಕಿದ್ದು ವಿಶೇಚೇತನರಿಗೆ ಸದಾವಕಾಶ ಸಿಕ್ಕಂತಾಯಿತು.
44 ಶಾಲೆಗೆ ಸ್ಮಾರ್ಟ್ ಕ್ಲಾಸ್ರೇಷ್ಮೆ ಇಲಾಖೆ ವತಿಯಿಂದ ತಾಲೂಕಿನ 44 ಶಾಲೆಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಲು ಉಪಕರಣಗಳು ನೀಡಲಾಯಿತು. ಅಲ್ಲದೆ 10 ಸಾವಿರ ಮಂದಿ ಬಡ ವಿದ್ಯಾರ್ಥಿಗಳಿಗೆ ಎಂಎಸ್‌ಐಎಲ್ ವತಿಯಿಂದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು, ಕೆ. ವೆಂಕಟೇಶ್ ಸಚಿವರಾದ ಕಾರಣ ವಿಶೇಷ ಅನುದಾನಗಳಿಂದ ಶಿಕ್ಷಣ ಅಭಿವೃದ್ದಿಗೆ ಪೂರಕ ಯೋಜನೆ ಜಾರಿಯಾದಂತಾಗಿದೆ.
24ಗಂಟೆ ನೀರು ಗ್ರಾಮ ಘೋಷಣೆಮೈಸೂರು ಜಿಲ್ಲೆಯಲ್ಲಿ 24 ಗಂಟೆಗೂ ಜನರಿಗೆ ನೀರಿನ ಸೌಲಭ್ಯ ನೀಡಿದ ಮೊದಲ ಗ್ರಾಮ ಎಂದು ಪಿರಿಯಾಪಟ್ಟಣ ತಾಲೂಕಿನ ಹಬಟೂರು ಗ್ರಾಪಂಯನ್ನು ಘೋಷಣೆ ಮಾಡಲಾಯಿತು.
ಗಮನ ಸೆಳೆದ ಸ್ಟಾಲ್ಕಾರ್ಯಕ್ರಮದಲ್ಲಿ ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೇಷ್ಮೆ, ಮೈಮೂಲ್, ಕೃಷಿ, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ಸರ್ಕಾರಿ ಸ್ಟಾಲ್ ಗಳು ಗಮನ ಸೆಳೆದವು.