ಕುಡುಪು ಕ್ಷೇತ್ರದಲ್ಲಿ ಭಕ್ತಿಪೂರ್ವಕ ಷಷ್ಠಿ ಮಹೋತ್ಸವ, ಸಹಸ್ರಾರು ಮಂದಿ ಭಾಗಿ

KannadaprabhaNewsNetwork |  
Published : Dec 19, 2023, 01:45 AM IST
ಕುಡುಪು ಕ್ಷೇತ್ರದಲ್ಲಿ ರಥೋತ್ಸವ ನೆರವೇರಿತು. | Kannada Prabha

ಸಾರಾಂಶ

ಷಷ್ಠಿ ಮಹೋತ್ಸವ ಪ್ರಯುಕ್ತ 5 ಸಾವಿರ ಪಂಚಾಮೃತ ಅಭಿಷೇಕ, 20 ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ನಡೆದವು. ದೇವರಿಗೆ ಹಾಲು, ಸೀಯಾಳ, ಹಿಂಗಾರ, ಚಿನ್ನ ಹಾಗೂ ಬೆಳ್ಳಿಯ ಹರಕೆ, ಹೂವುಗಳನ್ನು ಅರ್ಪಿಸಿ ಪುನೀತರಾದರು. ಸಂಜೆಯಯವರೆಗೆ 15ಸಾವಿರಕ್ಕೂ ಅಧಿ​ಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಜಿಲ್ಲೆಯ ಪ್ರಸಿದ್ಧ ನಾಗಾರಾಧನೆ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಭಕ್ತಿಪೂರ್ವಕವಾಗಿ ನೆರವೇರಿತು.ಮುಂಜಾನೆ 4 ಗಂಟೆಗೆ ದೇವರಿಗೆ ಪಂಚಮಿ ಉತ್ಸವ, ಆ ಬಳಿಕ ಉರುಳು ಸೇವೆ ನಡೆಯಿತು. ಉಷಾಕಾಲ ಪೂಜೆ ನೆರವೇರಿ, ವಿಶೇಷ ಪಂಚಾಮೃತ ಅಭಿಷೇಕ, ನವಕಲಶಾಭಿಷೇಕ, ಸಹಸ್ರನಾಮ ಹಾಗೂ ಅಷ್ಟೋತ್ತ ಅರ್ಚನೆ, ವಿಶೇಷ ಹರಿವಾಣ ನೈವೇದ್ಯದೊಂದಿಗೆ ಸರ್ವಾಭರಣಭೂಷಿತ ಶ್ರೀ ಅನಂತಪದ್ಮನಾಭ ದೇವರಿಗೆ ಮಹಾಪೂಜೆ ಜರುಗಿತು.ಮುಂಜಾನೆಯಿಂದಲೇ ಶ್ರೀ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಸಲ್ಲಿಸಿದರು.ಮಧ್ಯಾಹ್ನ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ವಿಶೇಷ ವಾದ್ಯ ಸುತ್ತು ಜರುಗಿ ಬ್ರಹ್ಮರಥೋತ್ಸವ ನೆರವೇರಿತು. ಭಕ್ತರಿಂದ ಉದ್ಘೋಷ ಮುಗಿಲುಮುಟ್ಟಿತ್ತು. ಬಳಿಕ ಶ್ರೀ ವರ ಬ್ರಹ್ಮರಥ ಎಳೆಯಲಾಯಿತು.ಷಷ್ಠಿ ಮಹೋತ್ಸವ ಪ್ರಯುಕ್ತ 5 ಸಾವಿರ ಪಂಚಾಮೃತ ಅಭಿಷೇಕ, 20 ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ನಡೆದವು. ದೇವರಿಗೆ ಹಾಲು, ಸೀಯಾಳ, ಹಿಂಗಾರ, ಚಿನ್ನ ಹಾಗೂ ಬೆಳ್ಳಿಯ ಹರಕೆ, ಹೂವುಗಳನ್ನು ಅರ್ಪಿಸಿ ಪುನೀತರಾದರು. ಸಂಜೆಯಯವರೆಗೆ 15ಸಾವಿರಕ್ಕೂ ಅಧಿ​ಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮೊಕ್ತೇಸರ ಮನೋಹರ ಭಟ್‌ ಕುಡುಪು, ಅನುವಂಶಿಕ ಮೊಕ್ತೇಸರ ಹಾಗೂ ಅನುವಂಶಿಕ ಪವಿತ್ರಪಾಣಿ ಕೆ. ಬಾಲಕೃಷ್ಣ ಕಾರಂತ, ಮೊಕ್ತೇಸರ ಭಾಸ್ಕರ ಕೆ., ಕಾರ್ಯ ನಿರ್ವಹಣಾ​ಕಾರಿ ಪ್ರವೀಣ್‌, ವಾಸ್ತುಶಿಲ್ಪಿ ಕೃಷ್ಣರಾಜ ತಂತ್ರಿ, ಉದಯ ಕುಮಾರ್‌ ಕುಡುಪು, ಸುಜನ್‌ದಾಸ್‌ ಕುಡುಪು, ವಾಸುದೇವ ರಾವ್‌, ದಿನೇಶ್‌ ಪೆಜತ್ತಾಯ, ರಾಘವೇಂದ್ರ ಭಟ್‌, ಸೋಮಶೇಖರ್‌ ಭಟ್‌, ರವಿ ಕೌಡೂರು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ