ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ ವತಿಯಿಂದ ನಗರ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಆಯೋಜಿಸಿದ್ದ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರಿಗೆ ಕಾರ್ಪೊರೇಟ್ ಆಡಳಿತದ ಪರಿಕಲ್ಪನೆಗಳು ಮತ್ತು ಸಿದ್ಧಾಂತಗಳು ಕುರಿತ ವಿಚಾರಸಂಕಿರಣವನ್ನು ಮಹಾಮಂಡಳ ನಿರ್ದೇಶಕ ಎಸ್.ಬಿ.ಎಂ. ಮಂಜು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಲದ ನಿರ್ದೇಶಕರಾದ ಎಂ.ಎಂ. ಮೆಟಗುಡ್ಡಿ, ವಿಜಯಾನಂದ ಹೊಸಕೋಟೆ, ಎಂ.ಆರ್. ವೆಂಕಟೇಶ್, ಎಸ್.ಪಿ. ಶೇಷಾದ್ರಿ, ಎಣ್ಣೆಗೆರೆ ವೆಂಕಟರಮಣಯ್ಯ, ಮಾಜಿ ನಿರ್ದೇಶಕರಾದ ಬೃಹದಾಂಬ, ಕೋದಂಡರಾಮು, ವಿಜಯಕುಮಾರ್, ಟಿ. ಜನಾರ್ಧನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಂಡಲಿ ಕೆರೂರ್ ಮೊದಲಾದವರು ಇದ್ದರು.