ನೂತನ ಸಮುದಾಯ ಭವನಕ್ಕೆ ಎರಡು ಕೋಟಿ ಮಂಜೂರು ಆಗಿದ್ದು ಈಗ ಸದ್ಯದಲ್ಲೇ 60 ಲಕ್ಷಕ್ಕೂ ಹೆಚ್ಚು ಅನುದಾನ ಬಿಡುಗಡೆಗೊಳಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಸರಗೂರು

ಆದಿ ಕರ್ನಾಟಕ (ಹೊಲಯ) ಮಹಾಸಭಾ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಮಂಗಳವಾರ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಿವಿಧ ಗಣ್ಯರು ಉದ್ಘಾಟಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್. ಸಿ ಮಹದೇವಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಶಿಲ್ಪಿಯಾಗಿ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆ, ಸಾಮಾಜಿಕ ನ್ಯಾಯ, ಸಮಾನತೆ,ಸೋದರತ್ವ,ಶಿಕ್ಷಣ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ನೂತನ ಸಮುದಾಯ ಭವನಕ್ಕೆ ಎರಡು ಕೋಟಿ ಮಂಜೂರು ಆಗಿದ್ದು ಈಗ ಸದ್ಯದಲ್ಲೇ 60 ಲಕ್ಷಕ್ಕೂ ಹೆಚ್ಚು ಅನುದಾನ ಬಿಡುಗಡೆಗೊಳಿಸಿದ್ದೇವೆ. ಈ ಬಾರಿ ಸರಗೂರು ತಾಲೂಕಿನ 11 ಗ್ರಾಮಗಳಿಗೆ ಭವನಕ್ಕೆ ತಲಾ 20 ಲಕ್ಷದಂತೆ, ಎಚ್.ಡಿ ಕೋಟೆ ತಾಲೂಕಿನ 15 ಗ್ರಾಮಗಳಿಗೆ ತಲಾ 20 ಲಕ್ಷದಂತೆ 3 ಕೋಟಿ, ಸರಗೂರಿನ ಬಾಬು ಜಗಜೀವನ್ ರಾಮ್ ಭವನಕ್ಕೆ 1ಕೋಟಿ 50 ಲಕ್ಷ

ಈ ತಾಲೂಕಿನವರು ತುಂಬ ಬಡವರಾದರಿಂದ ಇಲ್ಲಿಗೆ ನೂರಾರು ಬೋರ್ವೆಲ್ ಮಾಡಿ ಕೊಟ್ಟಿದ್ದೇನೆ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯಅನಿಲ್ ಮಾತನಾಡಿ, ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸುವ ಅಗತ್ಯವನ್ನು ತಿಳಿಸಿದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ ದರು.ಎಲ್ಲಾ ಶಾಲಾ ಕಾಲೇಜಿನ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಗಣ್ಯರಿಗೆ, ಸಮಾಜದ ಎಲ್ಲಾ ಮುಖಂಡರನ್ನು ಸನ್ಮಾನಿಸಲಾಯಿತು.ಅಂತರಸಂತೆ ಬುದ್ಧ ವಿಹಾರ ಮಾತೃಶ್ರೀ ಗೌತಮಿ ಬಂತೇಜಿ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸರಗೂರು ತಾಲೂಕು ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಇಟ್ನ ರಾಜಣ್ಣ, ಎಚ್.ಡಿ ಕೋಟೆ ತಾಲೂಕು ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಶಿವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಘೋತ್ತಮ್ ಹೋ.ಬ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಲಿಂಗರಾಜು,ಮಾಜಿ ಸದಸ್ಯ ಹೆಚ್ ಸಿ ಮಂಜುನಾಥ್, ಆದಿ ಕರ್ನಾಟಕ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾದನೂರು, ಡಾ ಬಿ ಆರ್ ಅಂಬೇಡ್ಕರ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಲಂಕೆ ರಮೇಶ್, ಆದಿ ಕರ್ನಾಟಕ ಮಹಾಸಭಾದ ಎಚ್ ಡಿ ಕೋಟೆಯ ಮಾಜಿ ಅಧ್ಯಕ್ಷ ಹೆಚ್. ಸಿ ನರಸಿಂಹಮೂರ್ತಿ,ಎ ಪಿ ಎಂ ಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಚೆನ್ನಿಪುರ ಮಲ್ಲೇಶ್, ಗೋಪಾಲಸ್ವಾಮಿ, ಯೂತ್ ಅಧ್ಯಕ್ಷ ವಕೀಲ ಶಿವರಾಜು, ಮುಳ್ಳೂರು ಲೋಕೇಶ್, ಮುಳ್ಳೂರ್ ರವಿ, ಶಿವಚನ್ನ, ಗ್ರಾಮೀಣ ಮಹೇಶ್, ಲಂಕೆ ಶ್ರೀನಿವಾಸ್,ಸಮಾಜದ ಇದಿಯಪ್ಪ, ದೇವಯ್ಯ ಇತರರು, ಮಹಿಳಾ ಸಂಘದ ಅಧ್ಯಕ್ಷೆ ಅನುಷಾ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.