ದೇವಾಂಗ ಜಾಗೃತಿ ಜೋತಿಗೆ ಭಕ್ತಿಪೂರ್ವಕ ಸ್ವಾಗತ

KannadaprabhaNewsNetwork |  
Published : Mar 29, 2026, 02:15 AM IST
ಫೋಟೋ28 ಎಚ್,ಎನ್,ಎಂ 01: ಹನುಮಸಾಗರದ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಶ ನಿ ವಾ ರ ಆಗಮಿಸಿದ ದೇವಾಂಗ ಜ್ಯೋತಿಯನ್ನು ಅರ್ಚಕರಾದ ರಾಘವೇಂದ್ರ ಸಿನ್ನೂರ ಹಾಗೂ ಮಂಜುನಾಥ ಸಿನ್ನೂರ ಪೂಜೆ ಸಲ್ಲಿಸಿ ದೇವಾಂಗ ಜಾಗೃತಿ ಜ್ಯೋತಿಯನ್ನು ಬಿಳ್ಕೊಡಲಾಯಿತು. | Kannada Prabha

ಸಾರಾಂಶ

ದೇವಾಂಗ ಜ್ಯೋತಿಯ ಆಹ್ವಾನ ನೀಡುವ ಉದ್ದೇಶದಿಂದ ದೇವಾಂಗ ಜ್ಯೋತಿ ಕಳುಹಿಸಲಾಗಿದೆ

ಹನುಮಸಾಗರ: ಪಟ್ಟಣದ ಶ್ರೀಬನಶಂಕರಿ ದೇವಸ್ಥಾನಕ್ಕೆ ಶನಿವಾರ ಆಗಮಿಸಿದ ದೇವಾಂಗ ಜ್ಯೋತಿಯನ್ನು ಅರ್ಚಕ ರಾಘವೇಂದ್ರ ಸಿನ್ನೂರ ಹಾಗೂ ಮಂಜುನಾಥ ಸಿನ್ನೂರ ಪೂಜೆ ಸಲ್ಲಿಸಿ ದೇವಾಂಗ ಜಾಗೃತಿ ಜ್ಯೋತಿ ಬೀಳ್ಕೊಡಲಾಯಿತು.

ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತ ಸಮಾವೇಶದ ಅಂಗವಾಗಿ ಹಂಪಿ ಹೇಮಕೂಟ ಪೀಠಾಧಿಪತಿ ದಯಾನಂದಪುರಿ ಮಹಾಸ್ವಾಮೀಜಿ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭದ ಅಂಗವಾಗಿ ದೇವಾಂಗ ಸಮಾಜ ಬಾಂಧವರ ಜಾಗೃತಿಗಾಗಿ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಪೂಜೆಗೊಂಡು ರಾಜ್ಯಾದ್ಯಂತ ಜಾಗೃತಿ ಮೂಡಿಸಿ ಮೇ 9 ಮತ್ತು 10ನೇ ಶನಿವಾರ ಮತ್ತು ಭಾನುವಾರ ಬಾದಾಮಿ ಬನಶಂಕರಿಯಲ್ಲಿ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭಕ್ಕೆ ಆಗಮಿಸುವ ಮೂಲಕ ದೇವಾಂಗ ಜ್ಯೋತಿಯ ಆಹ್ವಾನ ನೀಡುವ ಉದ್ದೇಶದಿಂದ ದೇವಾಂಗ ಜ್ಯೋತಿ ಕಳುಹಿಸಲಾಗಿದೆ ಎಂದು ಜಾಗೃತಿ ಸಮಿತಿ ತಿಳಿಸಿದರು.

ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ,ಉಪಾಧ್ಯಕ್ಷ ಸುರೇಶ ಸಿನ್ನೂರ,ಮಹೇಶ ಹುಲಮನಿ, ಶಂಕ್ರಪ್ಪ ಸಪ್ಪಂಡಿ, ಬಸವಂತಪ್ಪ ಸಿನ್ನೂರ, ರವಿ ಸಿನ್ನೂರ ,ರಾಜೇಂದ್ರ ಹುಲಮನಿ, ವಿಶಾಲ ಸಿನ್ನೂರ,ಶಂಕರ ಹುಲಮನಿ,ಅನಿಲ ಸಿನ್ನೂರ, ವತ್ಸಲ,ಭುವನೇಶ್ವರಿ, ಭಾರತಿ ಕಾಳಗಿ,ಸರಸ್ವತಿ ಸೇರಿದಂತೆ ದೇವಾಂಗ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ನೌಕರರ ಆರೋಗ್ಯ ಆಡಳಿತದ ಅಡಿಪಾಯ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಮೇ 9,10ರಂದು ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ: ಶ್ರೀನಿವಾಸ ಕಂಟ್ಲಿ