ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಸೊಮನಹಳ್ಳಿ ಎಜುಕೇಷನ್ ಸೊಸೈಟಿಯಲ್ಲಿ ಕೃಷಿಕ ಸ್ವಾವಲಂಭಿ ಸಂಘ ಹಾಗೂ ಆಕ್ಟೀವ್ ಹೆಲ್ತ್ ಕೇರ್ ಸೆಂಟರ್ ಸಹಯೊಗದಲ್ಲಿ ಏರ್ಪಡಿಸಿದ್ದ ಜೀವನ ಶೈಲಿ ಕಾಯಿಲೆಗಳು ಮತ್ತು ಅವುಗಳ ನಿವಾರಣೆ ಕುರಿತ ಆರೋಗ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಗಿ, ಗೋದಿ, ಸಿರಿಧ್ಯಾನ್ಯಗಳಲ್ಲೂ ಅಕ್ಕಿಯಂತೇಯೆ ಸಕ್ಕರೆ ಅಂಶವಿದೆ. ಇದನ್ನು ಅರಿತು ಇವುಗಳನ್ನು ಮಿತವಾಗಿ ಬಳಸಿ ಕಾಳು, ಸೊಪ್ಪು, ತರಕಾರಿ, ಮೊಟ್ಟೆ ಹೆಚ್ಚಾಗಿ ಬಳಸಿ ಆರೊಗ್ಯ ಕಾಪಾಡಿಕ್ಕೊಳ್ಳಲು ಸಲಹೆ ನೀಡಿದರು.ನಿಯಮಿತ ವ್ಯಾಯಮ ಹಾಗೂ ಶ್ರಮದ ಮೂಲಕ ಆರೋಗ್ಯಕರ ಜೀವನ ನಡೆಸಬೇಕು. ಜಿಂಕ್ ಪುಡ್, ಬಿಸ್ಕತ್ ಸೇರಿ ಬೇಕರಿ ಉತ್ಪನ್ನಗಳ ಸೇವನೆ ವರ್ಜಿಸಬೇಕು. ಮೊಟ್ಟೆ, ಕೋಳಿ, ಮೀನು ಮಾಂಸ ಬಳಸಬಹುದು ಎಂದರು.
ಮಧು ಮೇಹಿಗಳಿಗಳಿಗೆ ಪಥ್ಯ ಇರಬೇಕಾದ ಹಣ್ಣು ಹಂಪಲು ತಿಂಡಿ ತೀರ್ಥಗಳ ಮೇಲೆ ಸೆಳೆತ ಇರುತ್ತದೆ. ಅವುಗಳನ್ನು ಮಿತವಾಗಿ ಮುಂದಿನ ವರ್ಷದಿಂದ ಬಳಸಬೇಕು ಎಂದರೆ ಈ ವರ್ಷ ಕಟ್ಟು ನಿಟ್ಟಾದ ಜೀವನ ಶೈಲಿ ಅನುಸರಿಸಲು ಸಜ್ಜಾಗಿ ಎಂದರು.
ಕಾರ್ಯಕ್ರಮದಲ್ಲಿ ಆಕ್ಟೀವ್ ಹೆಲ್ತ್ ಸೆಂಟರ್ ನ ಡಾ.ಎನ್.ಸ್ನೇಹಾ, ಆಹಾರ ತಜ್ಞರಾದ ಅಮೂಲ್ಯ, ಯಶಸ್ವಿನಿ, ಆರೋಗ್ಯ ಸಹಾಯಕಿ ಮಂಜುಳಾ, ನಗರಕೆರೆ ಜಗದೀಶ್, ಜನಶಕ್ತಿ ಸಂತೋಷ್, ಕೃಷಿಕ ಸ್ವಾವಲಂಬಿ ಸಂಘದ ಪ್ರಧಾನ ಕಾರ್ಯದರ್ಶಿ ನ.ಲಿ.ಕೃಷ್ಣ, ಜಿ.ಸಿ.ಮೊಹನ್ ಕೊತ್ತನಹಳ್ಳಿ ಉಮೇಶ್, ಮಳವಳ್ಳಿ ಬಸವರಾಜ್, ದೇವರಹಳ್ಳಿ ರಾಮಲಿಂಗೇಗೌಡ, ಆಡಳಿತಾಧಿಕಾರಿ ಸಿದ್ದರಾಮು ಉಪಸ್ಥಿತರಿದ್ದರು.