ಆಹಾರ ಶೈಲಿಯೇ ಮಧುಮೇಹ ಬರಲು ಪ್ರಮುಖ ಕಾರಣ

KannadaprabhaNewsNetwork |  
Published : Aug 07, 2026, 01:30 AM IST
ಜೀವನ ಶೈಲಿ ಹಾಗೂ ಆಹಾರ ಶೈಲಿಯೇ ಮಧುಮೇಹ ಬರಲು ಪ್ರಮುಖ ಕಾರಣವಾಗಿದೆ : ಡಾ.ಅನಿಲ್ | Kannada Prabha

ಸಾರಾಂಶ

ಮಧುಮೇಹ ಎಂದರೆ ಕಾಯಿಲೆಗಳ ಯಜಮಾನ. ಮಧುಮೇಹ ಬಂದರೆ ಜೊತೆಗೆ ಹತ್ತು ಕಾಯಿಲೆಗಳನ್ನು ಹುಟ್ಟುಹಾಕುತ್ತದೆ. ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಶೈಲಿಯೇ ಮಧುಮೇಹ ಬರಲು ಪ್ರಮುಖ ಕಾರಣವಾಗಿದೆ ಎಂದು ಡಾ.ಅನಿಲ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಧುಮೇಹ ಎಂದರೆ ಕಾಯಿಲೆಗಳ ಯಜಮಾನ. ಮಧುಮೇಹ ಬಂದರೆ ಜೊತೆಗೆ ಹತ್ತು ಕಾಯಿಲೆಗಳನ್ನು ಹುಟ್ಟುಹಾಕುತ್ತದೆ. ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಶೈಲಿಯೇ ಮಧುಮೇಹ ಬರಲು ಪ್ರಮುಖ ಕಾರಣವಾಗಿದೆ ಎಂದು ಡಾ.ಅನಿಲ್ ಅಭಿಪ್ರಾಯಪಟ್ಟರು.

ನಗರದ ಐಎಂಎ ಸಭಾಂಗಣದಲ್ಲಿ ಮಧುಮೇಹ ಮತ್ತು ಅದರ ಪರಿಣಾಮಗಳ ಬಗ್ಗೆ ತಜ್ಞ ವೈದ್ಯರುಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದ್ದು ೨೦೩೦ರ ಹೊತ್ತಿಗೆ ಭಾರತದಲ್ಲಿ ಅತಿ ಹೆಚ್ಚು ಪೀಡಿತ ರೋಗಿಗಳಿರುತ್ತಾರೆ ಎಂದು ಸಮೀಕ್ಷೆಯಿಂದ ವ್ಯಕ್ತವಾಗಿದ್ದು ೨೦೧೫ರಲ್ಲಿ ೭೦ಮಿಲಿಯನ್ ಇದ್ದ ಮಧುಮೇಹಿಗಳ ಸಂಖ್ಯೆ ೨೦೨೪ಕ್ಕೆ ೧೧೦ ಮಿಲಿಯನ್ ಜನರು ಡಯಾಬಿಡೀಸ್‌ನಿಂದ ಭಾದಿತರಾಗಿದ್ದಾರೆ. ಇತ್ತೀಚೆಗೆ ೨-೩೦ವರ್ಷದ ಯುವಕರೂ ಡಯಾಬಿಟೀಸ್‌ನಿಂದ ಬಳಲುತ್ತಿರುವುದನ್ನು ನೋಡಬಹುದಾಗಿದೆ ಎಂದರು. ದೇಶದಲ್ಲಿ ವೇಗವಾಗಿ ವ್ಯಾಪಿಸುತ್ತಿರುವ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಹಾಗೂ ಮಧುಮೇಹದ ಸಂಪೂರ್ಣ ನಿರ್ವಹಣೆ ಮಾಡಲು ತಜ್ಞ ವೈದ್ಯರುಗಳ ತಂಡವೊಂದನ್ನು ಕಟ್ಟಿದ್ದು ವಿಸ್ಮಯ ಶುಗರ್ ಕ್ಲಿನಿಕ್ ಹೆಸರಿನಲ್ಲಿ ಪ್ರಾರಂಭಿಸಿರುವ ಮಧುಮೇಹ ಮುಕ್ತ ಆಂದೋಲನದಲ್ಲಿ ಜನರಿಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ತಜ್ಞವೈದ್ಯರು ನೀಡಲಿದ್ದಾರೆ. ತಿಪಟೂರು ತಾಲೂಕಿನ ಜನತೆಗೆ ಮಧುಮೇಹದಿಂದ ಆಗುವ ತೊಂದರೆ ಹಾಗೂ ಯುವಕರು ಸಕ್ಕರೆ ಕಾಯಿಲೆ ಬಾರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೂಡಾ ಮಾಹಿತಿ ನೀಡಲಾಗುವುದು ಎಂದರು. ಖ್ಯಾತ ನರರೋಗ ತಜ್ಞ ಡಾ.ಗುರುನಾಥ್‌ರೆಡ್ಡಿ ಮಾತನಾಡಿ, ಮಧುಮೇಹ ರಕ್ತನಾಳಗಳ ಕಾರ್ಯಕ್ಷಮತೆ ಮೇಲೆಯೂ ಪರಿಣಾಮ ಬೀರಲಿದ್ದು ಗ್ಯಾಂಗರೀನ್‌ಗೂ ಕಾರಣವಾಗಲಿದೆ. ಆದ್ದರಿಂದ ಮಧುಮೇಹವನ್ನು ಜನರು ನಿರ್ಲಕ್ಷಿಸಬಾರದು ಎಂದರು.

ಯಕೃತ್ತು ತಜ್ಞ ಡಾ.ಪ್ರವೀಣ್ ಮಾತನಾಡಿ ನಮ್ಮ ಆಹಾರ ಪದ್ದತಿ ಹಾಗೂ ಜೀವನ ಶೈಲಿ ಬದಲಿಸಿಕೊಳ್ಲುವ ಮೂಲಕ ಮಧುಮೇಹವನ್ನು ದೂರವಿಡಬಹುದು. ಮಧುಮೇಹ ಹೆಚ್ಚಾದರೆ ಫ್ಯಾಟಿಲಿವರ್ ಸಮಸ್ತೆಗೆ ಕಾರಣವಾಗುತ್ತದೆ ಮಧುಮೇಹವನ್ನು ನಿರ್ಲಕ್ಷಿಸಬೇಡಿ ಎಂದರು. ಆಯುರ್ವೇದ ತಜ್ಞವೈದ್ಯ ಡಾ. ಪ್ರಶಾಂತ್ ಮಾತನಾಡಿ, ರೋಗಗಳ ರಾಜ ಎಂದು ದೇಹದ ಸರ್ವ ನಿಯಂತ್ರಣವನ್ನು ತನ್ನ ಹಿಡಿತದಲ್ಲಿ ಹಿಡಿದುಕೊಳ್ಳುವ ಸಕ್ಕರೆ ಕಾಯಿಲೆ ಒಮ್ಮೆ ದೇಹ ಪ್ರವೇಶಿಸಿದರೆ ಯಾವ ಕಾರಣದಿಂದಲೂ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ರೋಗ ಬರುವ ಮುಂಚೆ ಮುನ್ನೆಚ್ಚರಿಕೆಯಿಂದ ಇರಬೇಕು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕರೆ ಕಾಯಿಲೆಯನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಅಮಾಯಕ ಜನರ ಜೀವದ ಜೊತೆ ಚೆಲ್ಲಾಟ ನಡೆಸುತ್ತಿದ್ದು ಅಂತಹ ಸುದ್ದಿಗಳನ್ನು ಯಾರು ಎಂದಿಗೂ ನಂಬಬಾರದು. ಸಕ್ಕರೆ ಕಾಯಿಲೆಯನ್ನು ಉತ್ತಮ ನಿರ್ವಹಣೆಯ ಮೂಲಕ ಜಾಸ್ತಿ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ದಂತ ವೈದ್ಯೆ ಡಾ.ಪ್ರಗತಿ ಸಂಗಮೇಶ್ ಮಾತನಾಡಿ, ಮಧುಮೇಹ ಹೆಚ್ಚಾದೆ ಬಾಯಿಹುಣ್ಣು, ವಸಡು ಸಮಸ್ಯೆ, ವಸಡಿನಲ್ಲಿ ಕೀವು ಸಂಗ್ರಹವಾಗುವುದು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಿಯಮಿತವಾಗಿ ಮಧುಮೇಹ ಪರೀಕ್ಷೆ ಹಾಗೂ ದಂತ ವ್ಶೆದ್ಯರಿಂದ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು. ವಿಚಾರ ಗೋಷ್ಠಿಯಲ್ಲಿ ಡಾ.ನಿಶ್ವಿತಾ ಆನಂದ್, ಡಾ.ಕೈಲಾಸ್, ಡಾ.ವಿಕ್ರಂ, ಡಾ.ರಕ್ಷಿತ್ ಮುಂತಾದ ವಿಶೇಷ ತಜ್ಞ ವೈದ್ಯರು ಉಪಸ್ಥಿತರಿದ್ದರು.

-------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ, ನಾಡಿದ್ದು ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ
ಸೆ.1ಕ್ಕೆ ದೆಹಲಿ ಚಲೋ: ಸಿಪಿಐನಿಂದ ಜಾಗೃತಿ, ಪಾದಯಾತ್ರೆ