4 ಸಾವಿರ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಶಿಕ್ಷಣದ ಭಾಗ್ಯ । ಸಿಎಸ್‌ಆರ್ ಸಹಯೋಗದೊಂದಿಗೆ ಅನುಷ್ಠಾನವಿಶೇಷ ವರದಿ
ಸರಕಾರಿ ಶಾಲೆಗಳೆಂದರೆ ಬರೀ ಕಪ್ಪು ಹಲಗೆ ಮತ್ತು ಸೀಮೆ ಸುಣ್ಣಕ್ಕಷ್ಟೇ ಸೀಮಿತ ಎಂಬ ಹಳೆಯ ಕಲ್ಪನೆ ಈಗ ಬದಲಾಗುತ್ತಿದ್ದು, ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಹೈಟೆಕ್ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಗದಗ ಜಿಲ್ಲೆಯ 16 ಸರಕಾರಿ ಶಾಲೆಗಳಲ್ಲಿ ಸೆರೆಂಟಿಕಾ ರೆನಿವೇಬಲ್ಸ್ ಸಂಸ್ಥೆಯ ಸಿಎಸ್‌ಆರ್ ಸಹಯೋಗದೊಂದಿಗೆ, ಸೆಲ್ಕೋ ಸೋಲಾರ್ ಹಾಗೂ ಮೆಂಡಾ ಫೌಂಡೇಶನ್ ಜಂಟಿಯಾಗಿ ಡಿಜಿಟಲ್ ಶಿಕ್ಷಣ ಬೆಂಬಲ ಯೋಜನೆಯನ್ನು ಅನುಷ್ಠಾನಗೊಳಿಸಿವೆ.
ಗದಗ ತಾಲೂಕಿನ 11 ಹಾಗೂ ಲಕ್ಷ್ಮೇಶ್ವರ ತಾಲೂಕಿನ 5 ಸರಕಾರಿ ಶಾಲೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, 4 ಸಾವಿರ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳ ಮೂಲಕ ನವೀನ ಕಲಿಕಾ ಸಂಪನ್ಮೂಲಗಳನ್ನು ಪಡೆಯಲಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯುತ್ ಕೈಕೊಡುವುದು ಸಾಮಾನ್ಯವಾಗಿದ್ದು, ಈ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ಪ್ರತಿಯೊಂದು ಶಾಲೆಗೂ ಸೋಲಾರ್ ಶಕ್ತಿಯ ಆಫ್‌ಗ್ರೇಡ್ ಬ್ಯಾಕಪ್ ವ್ಯವಸ್ಥೆ ಕಲ್ಪಿಸಲಾಗಿದೆ.ಇದರೊಂದಿಗೆ 50 ಇಂಚಿನ ಎಲ್‌ಇಡಿ ಪರದೆ ಹಾಗೂ ಆಧುನಿಕ ಡಿಜಿಟಲ್ ಕಲಿಕಾ ಸಾಧನಗಳನ್ನು ಅಳವಡಿಸಿ ಈಗಾಗಲೇ ಶಾಲಾ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. ಕರ್ನಾಟಕ ರಾಜ್ಯ ಪಠ್ಯಕ್ರಮಕ್ಕೆ ಸಂಪೂರ್ಣ ಹೊಂದಿಕೆಯಾಗುವ ಅಧಿಕೃತ ಮಲ್ಟಿಮೀಡಿಯಾ ಪಠ್ಯವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅಳವಡಿಸಲಾಗಿದ್ದು, ಅನಿಮೇಷನ್ ಮತ್ತು ದೃಶ್ಯ ಮಾದರಿಗಳು ಮಕ್ಕಳಲ್ಲಿ ಕ್ಲಿಷ್ಟಕರ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿವೆ. ಈ ಉಪಕರಣಗಳ ಸುಲಭ ನಿರ್ವಹಣೆಗಾಗಿ ಶಾಲಾ ಶಿಕ್ಷಕರಿಗೆ ಈಗಾಗಲೇ ವಿಶೇಷ ತಾಂತ್ರಿಕ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲಾಗಿದೆ.
ಸೆರೆಂಟಿಕಾ ರೆನಿವೇಬಲ್ಸ್ ಸಂಸ್ಥೆ