ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಆಯೋಗದ ನಿರ್ದೇಶನದಂತೆ ರಾಜ್ಯಾ ದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಠರಣೆ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ನೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತಿದೆ. ಪ್ರಸ್ತುತ ಜಿಲೆಯಲ್ಲಿ ಒಟ್ಟು ಮತದಾರರು 17,14,559 ಇದ್ದು, ಅದರಲ್ಲಿ 15,84,491 ಡಿಜಿಟೈ ಸೇಶನ್ ಹಾಗೂ ಎಎಸ್ಡಿಡಿ ಅಡಿಯಲ್ಲಿ ಇಎಫ್ ಸಂಗ್ರಹವಾಗಿದ್ದು, ಎನ್ಯೂಮರೇಷನ್ ಫಾರ್ಮ್‌ಗಳು ಇನ್ನೂ ಸಂಗ್ರಹವಾಗಬೇಕಿದೆ. ಈಗಾಗಲೇ ಸ್ವೀಕರಿಸಿರುವ ಫಾರ್ಮ್ಗಳಲ್ಲಿ 1,30,068 ಎನ್ನೂಮರೇಷನ್ ಫಾರ್ಮ್ಗಳ ಡಿಜಿಟೈಸೇಶನ್ ಕಾರ್ಯ ಬಾಕಿಯಿದೆ. ಈ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ವೇಳಾಪಟ್ಟಿ ಯಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಜು.30ರ ಬೆಳಗ್ಗೆ 10 ಗಂಟೆಯ ವೇಳೆಗೆ ಶೇ.89.36ರಷ್ಟು ನಮೂನೆಗಳ ಡಿಜಿಟೈಸೇಶನ್ ಪೂರ್ಣಗೊಂಡಿದ್ದು, ಒಟ್ಟಾರೆ ಶೇ.92ಕ್ಕಿಂತ ಹೆಚ್ಚು ಎಣಿಕೆ ಹಾಗೂ ವರ್ಗೀ ಕರಣ ಕಾರ್ಯ ಪೂರ್ಣಗೊಂಡಿದೆ. ಉಳಿದ ಶೇ.7.5ರಷ್ಟು ಎಣಿಕೆ ನಮೂನೆಗಳ ಸಂಗ್ರಹಣೆ ಮಾತ್ರ ಬಾಕಿಯಿದ್ದು, ಸಾರ್ವಜನಿಕರು ತ್ವರಿತವಾಗಿ ನಮೂನೆ ಸಲ್ಲಿಸಿ ದರೆ ಜಿಲ್ಲೆಯಲ್ಲಿ ಎಸ್ಐಆರ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬಹುದಾಗಿದೆ ಎಂದರು.ಜಿಲ್ಲೆಯಲ್ಲಿ ಅಬ್ಬೆಂಟ್, ಶಿಫ್ರೆಡ್, ಡೆತ್, ಡುಪ್ಲಿಕೇಶನ್ ಹಾಗೂ ಇತರೆ ವಿಭಾಗದಲ್ಲಿ ಒಟ್ಟು 2,23,737 (13.05%) ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 4,839 ಗೈರು ಹಾಜರಾತಿ ಮತದಾರರು ಇದ್ದಾರೆ. ಇವರು ಉದ್ಯೋಗ ಅಥವಾ ಇತರೆ ಕಾರಣಗಳಿಂದ ಜಿಲ್ಲೆ ಬಿಟ್ಟು ಹೊರಗಡೆ ಹೋಗಿದ್ದರೆ, ಆ.8 ರೊಳಗೆ ಅಥವಾ ಸಾಧ್ಯವಾದರೆ ಈ ಭಾನುವಾರದೊಳಗೆ ಆನ್ಲೈನ್ ಅಥವಾ ಖುದ್ದಾಗಿ ಬಂದು ಎಣಿಕೆ ನಮೂನೆ ಸಲ್ಲಿಸುವ ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ತಾವು ಮತದಾನ ಮಾಡಲು ಬಯಸುವ ಸ್ಥಳದಲ್ಲಿ ಮಾತ್ರ ಹೆಸರು ಉಳಿಸಿಕೊಂಡು, ಉಳಿದ ಕಡೆ ಡುಪ್ಲಿಕೇಶನ್ ಕುರಿತು ಮಾಹಿತಿ ನೀಡಬೇಕು.
ಅರ್ಜಿ ನಮೂನೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಕೊನೆಯ ದಿನ ಆ.8 ಆಗಿರುವುದರಿಂದ ಯಾರು ಇನ್ನೂ ತಮ್ಮ ಎನ್ಯುಮರೇಷನ್ ಫಾರ್ಮ್ ಸಲ್ಲಿಸದಿರುವ ಎಲ್ಲಾ ಅರ್ಹ ಮತದಾರರು ವಿಳಂಬ ಮಾಡದೆ. ತಮ್ಮ ವ್ಯಾಪ್ತಿಯ ಬಿಎಲ್ಒ ಅಥವಾ ಸಮೀಪದ ಮತದಾರರ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಡಿಸಿ ಕೋರಿದ್ದರು. ಈ ವೇಳೆ ಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಎಡಿಸಿ ಶಿವಾನಂದ, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣೆ ಶಾಖೆಯ ಶಿರಸ್ತೆದಾರ ಋಷಿಕೇಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿ ಇತರರು ಇದ್ದರು.