)
ತುಮಕೂರು: ನಗರದ ಹನುಮಂತಪುರದಲ್ಲಿ ಪೇಟೆ ಮಾತೆ ಕೊಲ್ಲಾಪುರದಮ್ಮ ಹಾಗೂ ಕರುಗಲ್ಲಮ್ಮ ದೇವರ ಐದು ದಿನಗಳ ಜಾತ್ರಾಮಹೋತ್ಸವ ಏರ್ಪಾಟಾಗಿದೆ. ಆಗಸ್ಟ್ 3ರಂದು ಬೆಳಿಗ್ಗೆ 10.30ಕ್ಕೆ ಶ್ರೀರಾಮನಗರದ ಆದಿಸ್ಥಾನ ಮುದ್ರೆ ಗೋಣಿಮರದ ಪೂಜೆ, ಮಧ್ಯಾಹ್ನ 3 ಗಂಟೆಗೆ ಕೋಟೆ ಕೊಲ್ಲಾಪುರದಮ್ಮ ಹಾಗೂ ಕರುಗಲ್ಲಮ್ಮ ದೇವಸ್ಥಾನದಿಂದ ದೇವರುಗಳನ್ನು ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಹನುಮಂತಪುರ ದೇವಸ್ಥಾನಕ್ಕೆ ಕರೆತರಲಾಗುವುದು.ನಂತರ ನಡೆಯುವ ಸಮಾರಂಭದಲ್ಲಿ ತಿಪಟೂರು ತಾಲೂಕು ಆಲುಬೂರು ಕ್ಷೇತ್ರದ ಸೋಮಶೇಖರ ಸ್ವಾಮೀಜಿ ಸಾನಿಧ್ಯವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಸ್.ಆರ್. ಶ್ರೀನಿವಾಸ್, ಡಾ.ಎಸ್. ನಾಗಣ್ಣ ಅತಿಥಿಗಳಾಗಿ ಭಾಗವಹಿಸುವರು.
ಆ.5ರಂದು ಮಧ್ಯಾಹ್ನ 2 ಗಂಟೆಗೆ ಬಿ.ಎ. ಗುಡಿಪಾಳ್ಯದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶ್ರೀ ಬಯಲು ಆಂಜನೇಯ ಕಲಾ ಟ್ರಸ್ಟ್ ಕಲಾವಿದರಿಂದ ಕುರುಕ್ಷೇತ್ರ ನಾಟಕ ಹಾಗೂ 6ರಂದು ಇದೇ ಟ್ರಸ್ಟ್ನಿಂದ ಇದೇ ಜಾಗದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ.
ಆಗಸ್ಟ್ 7ರಂದು ಕೊಲ್ಲಾಪುರದಮ್ಮ, ಕರುಗಲ್ಲಮ್ಮ ದೇವರಿಗೆ ಮಡ್ಲಕ್ಕಿ ಪೂಜೆ ರಾತ್ರಿ 8 ಗಂಟೆಗೆ ಎಲ್ಲೆ ಕಲ್ಲಿನ ಬಳಿ ಅಮ್ಮನವರ ಪೂಜಾ ಕಾರ್ಯಕ್ರಮ ಹಾಗೂ ಶ್ರೀರಾಮನಗರ ದೇವಸ್ಥಾನದವರೆಗೆ ದೇವರ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು ಎಂದು ಟಿ.ಎಲ್. ಕುಂಭಯ್ಯ ತಿಳಿಸಿದ್ದಾರೆ.