ಒಳಮೀಸಲಾತಿ ರೋಸ್ಟರ್ ತಿದ್ದುಪಡಿಗೆ ಆಗ್ರಹಿಸಿ ಲಂಬಾಣಿ ಸಮಾಜದಿಂದ ಮನವಿ

KannadaprabhaNewsNetwork |  
Published : Jul 31, 2026, 01:15 AM IST
ಒಳಮೀಸಲಾತಿ ರೋಸ್ಟರ್ ತಿದ್ದುಪಡಿಗೆ ಆಗ್ರಹಿಸಿ ಲಂಬಾಣಿ ಸಮಾಜದಿಂದ ಮನವಿ | Kannada Prabha

ಸಾರಾಂಶ

ಹೊಸ ರೋಸ್ಟರ್ ಪದ್ಧತಿಯಿಂದ ಸಮಾಜದ ಯುವಕರು ಹಾಗೂ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳಲ್ಲಿ ಹಿನ್ನಡೆಯಾಗುತ್ತಿರುವುದಾಗಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಹೊಸ ರೋಸ್ಟರ್‌ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಸಮಾಜಕ್ಕೆ ಯಾವುದೇ ಅನ್ಯಾಯವಾಗದಂತೆ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಸರ್ಕಾರವು ಒಳಮೀಸಲಾತಿಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಎಲ್ಲ ಸಮುದಾಯಗಳಿಗೆ ನ್ಯಾಯ ದೊರೆಯುವ ರೀತಿಯಲ್ಲಿ ರೋಸ್ಟರ್ ಪದ್ಧತಿಯನ್ನು ಪರಿಷ್ಕರಿಸಿ, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅರಸೀಕೆರೆ: ಒಳಮೀಸಲಾತಿಗೆ ಸಂಬಂಧಿಸಿದಂತೆ ಜಾರಿಗೆ ತರಲಾಗಿರುವ ಹೊಸ ರೋಸ್ಟರ್‌ ಪದ್ಧತಿಯಿಂದ ಲಂಬಾಣಿ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಹಾಗೂ ಮೈಸೂರು ಸೀಮೆ ಲಂಬಾಣಿ ಸಂಘದ ವತಿಯಿಂದ ಗುರುವಾರ ತಹಸೀಲ್ದಾರ್‌ ಸಂತೋಷ್‌ ಕುಮಾರ್‌ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ, ಹೊಸ ರೋಸ್ಟರ್ ಪದ್ಧತಿಯಿಂದ ಸಮಾಜದ ಯುವಕರು ಹಾಗೂ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳಲ್ಲಿ ಹಿನ್ನಡೆಯಾಗುತ್ತಿರುವುದಾಗಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಹೊಸ ರೋಸ್ಟರ್‌ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಸಮಾಜಕ್ಕೆ ಯಾವುದೇ ಅನ್ಯಾಯವಾಗದಂತೆ ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಸರ್ಕಾರವು ಒಳಮೀಸಲಾತಿಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಎಲ್ಲ ಸಮುದಾಯಗಳಿಗೆ ನ್ಯಾಯ ದೊರೆಯುವ ರೀತಿಯಲ್ಲಿ ರೋಸ್ಟರ್ ಪದ್ಧತಿಯನ್ನು ಪರಿಷ್ಕರಿಸಿ, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಸಾಕಿ ಮಂಜುನಾಥ ನಾಯ್ಕ, ಮಾಳಾ ನಾಯ್ಕ, ಸದಾಶಿವ ನಾಯ್ಕ, ಲೋಕೇಶ್ ಪಿ.ಕೆ, ವೆಂಕಟೇಶ್ ನಾಯ್ಕ, ಪ್ರದೀಪ ನಾಯ್ಕ, ನಿತಿನ್ ಕುಮಾರ್‌, ಅರುಣ್ ನಾಯ್ಕ, ನಾಗರಾಜ್ ನಾಯ್ಕ (ವಾಲೆಹಳ್ಳಿ), ಚೇತನ್, ಸುರೇಶ್ (ಮುದ್ದನಹಳ್ಳಿ), ಮಂಜುಳಾಬಾಯಿ, ಮಂಜುನಾಥ್ ನಾಯ್ಕ್ (ಅಣ್ಣಿ), ಕಿರಣ್ ನಾಯ್ಕ (ಮುದ್ದನಹಳ್ಳಿ), ರವಿ ನಾಯ್ಕ (ಶಾನೆಗೆರೆ), ಜಯಣ್ಣ ನಾಯ್ಕ (ಹರತನಹಳ್ಳಿ), ಶಿವಾನಾಯ್ಕ, ಶ್ರೀನಿವಾಸ ನಾಯ್ಕ (ಕಾರೆಹಳ್ಳಿ) ಸೇರಿದಂತೆ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಷಾಹಾರದಿಂದ 57 ವಿದ್ಯಾರ್ಥಿಗಳು ಅಸ್ವಸ್ಥ: ಭುಗಿಲೆದ್ದ ಆಕ್ರೋಶ
ಕೊಲ್ಲಾಪುರದಮ್ಮ, ಕರುಗಲ್ಲಮ್ಮ ಜಾತ್ರಾಮಹೋತ್ಸವ ಆ.3ರಿಂದ