ಹಾವೇರಿ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಅಸಮಾಧಾನದ ವಿಚಾರ ರಾಜ್ಯ ಮಟ್ಟದ ಸಮಸ್ಯೆಯಲ್ಲ ಅದು ನಮ್ಮ ನಡುವಿನ ಸಮಸ್ಯೆ ಎಂದು ಹೇಳುವ ಮೂಲಕ ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನದ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಒತ್ತಾಯದಿಂದ ಬಿಡದಿ ಜಮೀನು ಪಡೆಯುತ್ತಿಲ್ಲ: ಬಿಡದಿ ಭಾಗದ ರೈತರ ಜಮೀನನ್ನು ಸರ್ಕಾರ ಒತ್ತಾಯಪೂರ್ವಕವಾಗಿ ಪಡೆಯುತ್ತಿಲ್ಲ. ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದೆ ಬರುತ್ತಿರುವ ರೈತರ ಜಮೀನನ್ನು ಮಾತ್ರ ಪಡೆಯಲಾಗುತ್ತಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ರೈತರ ಜಮೀನನ್ನು ಸರ್ಕಾರ ಒತ್ತಾಯಪೂರ್ವಕವಾಗಿ ಪಡೆಯುತ್ತಿಲ್ಲ. ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದೆ ಬರುತ್ತಿರುವ ರೈತರ ಜಮೀನನ್ನು ಮಾತ್ರ ಪಡೆಯಲಾಗುತ್ತಿದೆ. ಜಮೀನು ನೀಡುವುದಿಲ್ಲ ಎಂದು ಹೇಳಿದವರ ಜಮೀನನ್ನು ಸರ್ಕಾರ ಪಡೆದುಕೊಳ್ಳುವುದಿಲ್ಲ. ಜಮೀನು ನೀಡಿದವರ ಜಾಗದ ಸರ್ವೆ ಕಾರ್ಯಕ್ಕಾಗಿ ಅಧಿಕಾರಿಗಳು ನಿನ್ನೆ ಕೂಡ ಭೇಟಿ ನೀಡಿದ್ದರು ಎಂದು ಹೇಳಿದರು.ರೈತರ ಮೇಲೆ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದ ಅವರು, ಸರ್ಕಾರದಿಂದ ರೈತರ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ. ಅಲ್ಲಿ ನಡೆದಿರುವ ಘಟನೆಯ ಸಂಪೂರ್ಣ ಮಾಹಿತಿ ನನಗೆ ಇಲ್ಲ. ಆದರೆ ರೈತರ ಮೇಲೆ ಯಾವುದೇ ಒತ್ತಡ ಅಥವಾ ಬಲವಂತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.