- ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರ ಶಾಂತಿ ಸಭೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಪೊಲಿಸ್ ಠಾಣೆಯಲ್ಲಿ ಸೋಮವಾರ ಹಿಂದೂ ಹಾಗೂ ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಹಬ್ಬ- ಹರಿದಿನಗಳು ಸಮಾಜದಲ್ಲಿ ಶಾಂತಿ ನೆಲೆಸಲು ಆಚರಿಸಲಾಗುತ್ತದೆ. ರಾಗದ್ವೇಷ ಹರಡಲಿಕ್ಕೆ ಅಲ್ಲ. ಆದ್ದರಿಂದ ಹಬ್ಬಗಳನ್ನು ಎಲ್ಲರೂ ಸೇರಿ ಸಂತೋಷದಿಂದ ಆಚರಿಸಬೇಕು ಎಂದು ಮನವಿ ಮಾಡಿದರು.
ಹೊನ್ನಾಳಿ ನಗರ ಹಾಗೂ ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ದಂಧೆ ನಡೆಯುತ್ತಿದೆ ಎಂದು ಅನಾಮಿಕ ದೂರು ಬರುತ್ತಿವೆ ಹೊರತು, ಯಾರೂ ನಿಖರ ಮಾಹಿತಿ ನೀಡುತ್ತಿಲ್ಲ. ಆದರೂ ನಾವು ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡಿ ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತಿದ್ದೇವೆ. ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇದ್ದರೆ ನಮಗೆ ಕೊಡಿ, ನಿಮ್ಮ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು. ನಮಗೆ ಸಹಕಾರ ನೀಡಿದರೆ ಗಾಂಜಾ ಮಾರಾಟ ಸಂಪೂರ್ಣ ನಿಲ್ಲಿಸಬಹುದು ಎಂದರು.ಹದಿಹರೆಯದ ಮಕ್ಕಳ ಚಲನವಲನಗಳನ್ನು ಪೋಷಕರು ನಿತ್ಯ ಗಮನಿಸಿ, ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೆ ಬುದ್ಧಿ ಹೇಳಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಜ.1ರಿಂದ ಫೆ.14ರವರೆಗೆ 2 ಪೋಕ್ಸೋ ಪ್ರಕರಣದಲ್ಲಿ ಅಪರಾಧ ಎಸಗಿದ ಇಬ್ಬರಿಗೆ ತಲಾ 20 ವರ್ಷ ಶಿಕ್ಷೆಯಾಗಿದೆ. ಆದ್ದರಿಂದ ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ ಎಂದರು.
ಶಾಂತಿ ಸಭೆಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕುಮಾರ್, ಸಿಬ್ಬಂದಿ ಜಗದೀಶ್ ಹಾಗೂ ಚೇತನ್, ಆರ್‌ಎಸ್‌ಎಸ್ ಪ್ರಮುಖರಾದ ಎಚ್.ಎಂ. ಅರುಣ್‌ಕುಮಾರ್, ಬಿಜೆಪಿಯ ಮಂಜುನಾಥ್ ಇಂಚರ, ಕರವೇ ಸಂಘಟನೆಯ ಶ್ರೀನಿವಾಸ್, ಮಂಜು, ಮುಸ್ಲಿಂ ಮುಖಂಡರಾದ ಬಾಬುಲಾಲ್, ಸಮೀರ್, ಜಾವಿದ್, ಅಮಾನುಲ್ಲಾ, ಬಾಷ ಹಾಗೂ ಮುಕ್ತೇನಹಳ್ಳಿ ಗ್ರಾಮಸ್ಥರು ಇದ್ದರು.- - - -10ಎಚ್.ಎಲ್.ಐ2:
ಹೊನ್ನಾಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಯುಗಾದಿ, ರಂಜಾನ್ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು.