ಗುರುಗಳ ಬಗ್ಗೆ ತಾತ್ಸಾರ ಬೇಡ, ಅಭಿಮಾನವಿರಲಿ: ಶಿಕ್ಷಣತಜ್ಞ ಸುರೇಶ ಕುಲಕರ್ಣಿ

KannadaprabhaNewsNetwork |  
Published : Apr 27, 2026, 02:00 AM IST
ಸಮಾರಂಭದಲ್ಲಿ ಸುರೇಶ ಕುಲಕರ್ಣಿ ಮಾತನಾಡಿದರು. | Kannada Prabha

ಸಾರಾಂಶ

ಮಕ್ಕಳ ವಿದ್ಯಾಭ್ಯಾಸ ಸಲುವಾಗಿ ತಂದೆ- ತಾಯಿ ತ್ಯಾಗ ದೊಡ್ಡದು. ಅಂತಹ ಪಾಲಕರ ಕಣ್ಣಲ್ಲಿ ನೀರು ಹಾಕಿಸುವ ಕೆಲಸ ಮಾಡಬಾರದು. ಗುರುಗಳ ಬಗ್ಗೆ ತಾತ್ಸಾರ ಬೇಡ. ಅಭಿಮಾನವಿರಲಿ.

ಲಕ್ಷ್ಮೇಶ್ವರ: ದೇಶದ ಅಭಿವೃದ್ಧಿಗೆ ಎಂಜಿನಿಯರರ ಪಾತ್ರ ಮಹತ್ವದ್ದು. ಮಾಹಿತಿ ತಂತ್ರಜ್ಞಾನ ಶಿಕ್ಷಣ ಈ ಭಾಗದ ಮಕ್ಕಳಿಗೆ ದೊರೆಯಲಿ ಎಂದು ಕಾಲೇಜು ಸ್ಥಾಪನೆ ಮಾಡಿರುವುದು ಶ್ಲಾಘನೀಯ ಎಂದು ಶಿಕ್ಷಣತಜ್ಞ ಸುರೇಶ ಕುಲಕರ್ಣಿ ತಿಳಿಸಿದರು.

ಪಟ್ಟಣದ ಕಮಲಾ ವೆಂಕಪ್ಪ ಎಂ. ಅಗಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ 20ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ವಿದ್ಯಾಭ್ಯಾಸ ಸಲುವಾಗಿ ತಂದೆ- ತಾಯಿ ತ್ಯಾಗ ದೊಡ್ಡದು. ಅಂತಹ ಪಾಲಕರ ಕಣ್ಣಲ್ಲಿ ನೀರು ಹಾಕಿಸುವ ಕೆಲಸ ಮಾಡಬಾರದು. ಗುರುಗಳ ಬಗ್ಗೆ ತಾತ್ಸಾರ ಬೇಡ. ಅಭಿಮಾನವಿರಲಿ. ಮೊಬೈಲ್ ನೋಡಬೇಡಿ ಅಂತಾ ಹೇಳಲ್ಲ. ಆದರೆ ಅದರಲ್ಲಿ ಶಿಕ್ಷಣ ಸಂಬಂಧ ಮಹತ್ವವಾದ ವಿಷಯಗಳನ್ನು ನೋಡಿ. ಭಾಷೆ, ಅಭಿನಯ, ಸಂಗೀತ ಚಿತ್ರದ ಮೂಲಕ ಶಿಕ್ಷಣ ಕೊಡಿ. ವಿದ್ಯಾರ್ಥಿಗಳು ಓದಿದ ವಿಷಯವನ್ನು ಮನನ ಮಾಡಿಕೊಳ್ಳಿ. ಹೊಸ ವಿಷಯಗಳ ಅಧ್ಯಯನ ಮಾಡಿ. ಎಲ್ಲಕ್ಕಿಂತ ಮೊದಲು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಯಬೇಕು ಎಂದರು.ಪ್ರಾಚಾರ್ಯ ಪರಶುರಾಮ ಬಾರ್ಕಿ ಮಾತನಾಡಿ, ಗ್ರಾಮೀಣ ಭಾಗದ ಬಡವರು ರೈತರ ಕೂಲಿ ಕಾರ್ಮಿಕರ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2 ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅಗಡಿ ಕಾಲೇಜು ಶಿಕ್ಷಣ ನೀಡಿದೆ. ವಿದ್ಯಾರ್ಥಿಗಳು ಉತ್ತಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಪ್ರೊ. ವಿಕ್ರಮ ಶಿರೋಳ, ಪ್ರೊ. ಆರ್.ಎನ್. ಪಾಟೀಲ, ಡಾ. ಸುಭಾಸ ಮೇಟಿ, ಪ್ರೊ. ಸ್ವಪ್ನ ಚನ್ನಗೌಡ್ರ, ಡಾ. ಗಿರೀಶ ಯತ್ತಿನಹಳ್ಳಿ, ಪ್ರೊ. ಅರುಣ ಕುಂಬಿ, ಸಂತೋಷ ಭುಜರಿ, ಶ್ರೀನಿವಾಸ ಆರ್., ಶಿವರಾಜ ಹಿರೇಮಠ, ಪ್ರೊ. ಸೋಮಶೇಖರ ಕೇರಿಮನಿ, ಎಸ್.ಎಫ್. ಕೊಡ್ಲಿ ಷಣ್ಮುಖ ಜಿ., ಪ್ರೊ. ಪ್ರತಿಮಾ ಮಹಾಪುರುಷ ರವಿಪ್ರಕಾಶ ಇದ್ದರು.ಅಭಿಷೇಕ ಕಣವಿ, ಅಕ್ಷತಾ ಹಡಪದ, ಲಕ್ಷಣ ಪಾಟೀಲ್ ನಿರೂಪಿಸಿದರು. ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ರಾಘವೇಂದ್ರ ಎ. ಸ್ವಾಗತಿಸಿದರು. ಚಂದ್ರಮೌಳಿ ಜೋಶಿ ವಂದಿಸಿದರು.ಭೈರನಹಟ್ಟಿ ಶಾಲೆ ಉತ್ತಮ ಸಾಧನೆ

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 2025- 26ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಸಾವಿತ್ರಿ ಮೊರಬದ ಶೇ. 91.64, ಶಶಿಕಲಾ ಸಂಗಟಿ ಶೇ. 89.44, ಅಕ್ಷತಾ ಐನಾಪೂರ ಶೇ. 89.28, ಮಾದೇವಿ ಹಾದಿಮನಿ ಶೇ. 84.48, ಶ್ರುತಿ ಮಾದರ ಶೇ. 83.20, ಚೈತ್ರಾ ಐನಾಪೂರ ಶೇ. 82.56, ಮಲ್ಲಮ್ಮ ಮೊರಬದ ಶೇ. 80, ಪ್ರತಿಭಾ ಐನಾಪೂರ ಶೇ. 79.52, ಪ್ರತಿಭಾ ಐನಾಪೂರ ಶೇ. 78.88, ಭವಾನಿ ಮೊರಬದ ಶೇ. 77.12, ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 3 ವಿದ್ಯಾರ್ಥಿಗಳು ಉತ್ತಮ ಶೇಣಿಯಲ್ಲಿ, 21 ಪ್ರಥಮ, 1 ದ್ವಿತೀಯ, 8 ತೃತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಎಸ್ಡಿಎಂಸಿ ಅಧ್ಯಕ್ಷ ನಾಗೇಶ ನರಸಾಪೂರ, ಸದಸ್ಯರು, ಮುಖ್ಯೋಪಾಧ್ಯಾಯ ಎಂ.ಡಿ. ಸಕ್ರಿ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯ-ರಾಜುಗೌಡ
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮರಸ್ಯ ಉತ್ತೇಜಿಸುತ್ತವೆ-ಶಾಸಕ ಬಣಕಾರ