ಕನ್ನಡಪ್ರಭ ವಾರ್ತೆ ಮಳವಳ್ಳಿ
ಎಲ್ಲಾ ಕಾಲದಲ್ಲೂ ಶಕುನಿಗಳು ಇರುತ್ತಾರೆ. ಕುಟುಂಬ ಒಡೆಯಲು ಪ್ರಯತ್ನ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಕುಟುಂಬಗಳು ಒಡೆದು ಹೋಗಬಾರದು ಎಂದರು.
ರಾಮಾಯಣವೂ ಕುಟುಂಬ ಸಾಮರಸ್ಯ ತೋರಿಸುತ್ತದೆ. ರಾಮನ ದೇಗುಲದಲ್ಲಿ ರಾಮನ ವಿಗ್ರಹ ಮಾತ್ರ ಇರುವುದಿಲ್ಲ. ಶರಣರು ಕೂಡ ಕುಟುಂಬ ಸಾಮರಸ್ಯದ ಬಗ್ಗೆ ವಚನಗಳಲ್ಲಿ ಸಾರಿದ್ದಾರೆ. ಭಾರತದಲ್ಲಿ ಕುಟುಂಬಕ್ಕೆ ದೊಡ್ಡ ಮಹತ್ವ ಇದೆ. ಎಂತಹದ್ದೇ ಜಗಳ ಇದ್ದರೂ ಸಂದರ್ಭ ಬಂದಾಗ ಒಂದಾಗಿ ಬಿಡುತ್ತಾರೆ ಎಂದರು.ಆದರೆ, ಇತ್ತೀಚಿನ ಕೆಲ ಮಾಧ್ಯಮಗಳಲ್ಲಿ ಕುಟುಂಬಗಳ ವಿಷಯಗಳನ್ನು ಚರ್ಚೆ ಮಾಡುತ್ತಿರುವುದು ಸಮಾಜದಲ್ಲಿನ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೌಟುಂಬಿಕ ಜಗಳಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟರು.ಜಾತಿ, ಧರ್ಮದ ಭೇದವಿಲ್ಲದ ಮಠಗಳಿಂದ ಶ್ರೇಷ್ಠ ಕಾರ್ಯ
ಚಲನಚಿತ್ರ ನಟ ನೀನಾಶಂ ಸತೀಶ್ ಮಾತನಾಡಿ, ವಿದ್ಯೆಗಿಂತ ಮತ್ತೊಂದು ಶ್ರೇಷ್ಠವಾದು ಯಾವುದು ಇಲ್ಲ, ಮಠಗಳು ಜಾತಿ, ಧರ್ಮ ಭೇದವಿಲ್ಲದೇ ಎಲ್ಲರಿಗೂ ಅನ್ನದೊಂದಿಗೆ ಅಕ್ಷರದ ಜ್ಞಾನವನ್ನು ನೀಡುವ ಮೂಲಕ ಮಾದರಿಯಾಗಿವೆ. ಕಲಾವಿದರಿಗೆ ಎಲ್ಲರೂ ಒಂದೇ, ನಗುವಿನ ಮುಂದೆ ಮತ್ತೊಂದು ಇಲ್ಲ, ಮಂಟೇಸ್ವಾಮಿ ಅವರ ಹೆಸರನ್ನು ಬಳಸಿ ನನ್ನದೊಂದು ಚಿತ್ರ ಹೊರತರುತ್ತಿದ್ದೇವೆ ಎಂದು ಹೇಳಿದ ಅವರು, ದಿ ರೈಸ್ ಆಫ್ ಅಶೋಕ ಚಿತ್ರದ ತುಣುಕನ್ನು ಪ್ರದರ್ಶಿಸಿದರು. ಚಿತ್ರದಲ್ಲಿ ರಚಿಸಿರುವ ಮಲೆ ಮಹದೇಶ್ವರ ದೇವರ ಕುರಿತ ಏಳೋ ಏಳೋ ಮಹಾದೇವ, ಕೇಳೋ ಕೇಳೋ ಮಹಾದೇವ ಎಂಬ ಗೀತೆಯನ್ನು ಹಾಡಿ ನೆರದಿದ್ದ ಜನರನ್ನು ರಂಜಿಸಿದರು.ಪಾದಯಾತ್ರೆ ನೆನೆದ ನಟ ನಾಗಭೂಷಣಜಯಂತ್ಯುತ್ಸವದಲ್ಲಿ ನಟ ಎನ್.ಎಸ್.ನಾಗಭೂಷಣ ಮಾತನಾಡಿ, ಮಳವಳ್ಳಿ ನನಗೆ ಅದೃಷ್ಟದ ನೆಲ ನನ್ನ ಚಿತ್ರವೊಂದನ್ನು ಇಲ್ಲಿಯೇ ಚಿತ್ರೀಕರಿಸಿ, ಟ್ರೈಲರ್ ಬಿಡುಗಡೆ ಮಾಡಿದ್ದೆ. ಕೆ.ಎಂ.ದೊಡ್ಡಿಯಿಂದ ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಪಾದಯಾತ್ರೆಯಲ್ಲಿ ನಾನು ಡಾಲಿ ಧನಂಜಯ ಭಾಗಿಯಾಗಿದ್ದವು. ನಮ್ಮ ಅದೃಷ್ಟ ನನಗೆ ಮತ್ತು ಡಾಲಿ ಧನಂಜಯನಿಗೆ ಮದುವೆಯಾಯಿತ್ತು. ಮಠಗಳು ತ್ರಿವಿಧ ದಾಸೋಹದ ಕೆಲಸ ಮಾಡುತ್ತವೆ. ಸಾಂಸ್ಕೃತಿಕವಾಗಿಯೂ ಮಠಗಳ ಕೊಡುಗೆ ದೊಡ್ಡದಿದೆ. ಕನ್ನಡ ಸಾಹಿತ್ಯ ಹಾಗೂ ಕನ್ನಡ ಸಿನಿಮಾ ನೋಡುವಂತೆ ಮನವಿ ಮಾಡಿದರು.