ಕೊಟ್ಟೂರು: ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲ ಜನತೆಗೆ ಸಮಾನತೆ ಹಕ್ಕು ನೀಡಿದ್ದಾರೆ ಎಂದು ಗುಲಬರ್ಗಾ ವಿವಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಬಿ.ಸಿ. ಮಹಾಬಲೇಶ್ವರಪ್ಪ ಹೇಳಿದರು.
ತಹಸೀಲ್ದಾರ್ ಜಿ.ಕೆ. ಅಮರೇಶ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬದ್ದಿ ಮರಿಸ್ವಾಮಿ, ಡಿಎಸ್‌ಎಸ್ ಮುಖಂಡ ತಗ್ಗಿನಕೇರಿ ಕೊಟ್ರೇಶ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಅನಿಲ್ ಹೊಸಮನಿ ಉದ್ಘಾಟಿಸಿದರು. ತಾಪಂ ಇಒ ಡಾ. ಆನಂದಕುಮಾರ್, ಸಿಪಿಐ ದುರುಗಪ್ಪ, ಪಿಎಸ್‌ಐ ಗೀತಾಂಜಲಿ ಶಿಂಧೆ, ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ್, ಪಶುವೈದ್ಯಾಧಿಕಾರಿ ಡಾ. ಚಂದ್ರನಾಯ್ಕ, ಎಪಿಎಂಸಿ ಕಾರ್ಯದರ್ಶಿ ಎಚ್.ಕೆ. ವೀರಣ್ಣ, ನರೇಗಾ ಎಡಿ ವಿಜಯಕುಮಾರ್, ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ಯೋಗೀಶ್ವರ ದಿನ್ನೆ, ಬಾಬು ಜಗಜೀವನರಾಮ್ ಸಂಘದ ತಾಲೂಕು ಅಧ್ಯಕ್ಷ ಟಿ. ಹನುಮಂತಪ್ಪ, ಮುಖಂಡರಾದ ಬಿ. ದುರುಗೇಶ್, ಕಂದಗಲ್ ಪರುಶರಾಮ, ಕೆಂಗರಾಜ, ಹೊಟ್ಟೇರ ಅಜ್ಜಯ್ಯ, ಗುಡಿಯಾರ ಮಲ್ಲಿಕಾರ್ಜುನ, ಬಿ. ಶಿವರಾಜ, ಅಮರೇಶ್, ಪರಶುರಾಮ, ಹುಲುಗೇಶ, ಮಂಜುನಾಥ, ಮಿಲ್ಟ್ರಿ ಅಜ್ಜಪ್ಪ, ಸಮಾಜ ಕಲ್ಯಾಣ ಇಲಾಖೆಯ ಸದಾನಂದ, ತುಪ್ಪದ ವೀರೇಶ್ ಇದ್ದರು.
ಪಿಯು ರ‍್ಯಾಂಕ್ ಪಡೆದ ಅರ್ಚನಾ, ಯೋಗಪಟು ಬಂಜಾರ ನಾಗರಾಜ, ಪತ್ರಿಕಾ ವಿತರಕ ಉತ್ತಂಗಿ ಕೊಟ್ರೇಶ್, ನಿವೃತ್ತ ಮುಖ್ಯಗುರು ಸಿ. ಚೌಡಪ್ಪ, ಶಿಕ್ಷಕ ಮುತ್ತೇಶ್, ವಕೀಲ ಡಿ.ಲಿ. ಲಿಂಗರಾಜ, ಡಿಎಸ್‌ಎಸ್ ಮುಖಂಡ ಬಿ. ಪರಶುರಾಮ, ವಾದ್ಯ ಕಲಾವಿದ ಸಿ.ಕೆ. ಪ್ರಕಾಶ, ಉಜ್ಜಿನಿ ರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಕಂದಾಯ ಇಲಾಖೆಯ ಸಿ.ಮ. ಗುರುಬಸವರಾಜ, ಶಿಕ್ಷಕ ವೀರಭದ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು.ಮೆರವಣಿಗೆ ಕಾರ್ಯಕ್ರಮದ ಆನಂತರ ಬೆಳ್ಳಿರಥದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಅವರ ಭಾವಚಿತ್ರಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆಯಿತು. ದಾರಿಯುದ್ದಕ್ಕೂ ಬಿಸಿಲು ಲೆಕ್ಕಿಸದೇ ಯುವಕರು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.