ಆನವಟ್ಟಿ: ಈಗಾಗಲೆ ಹಳ್ಳಿ-ಹಳ್ಳಿಯಲ್ಲೂ ಜೆಜೆಎಲ್‌ನಿಂದ ಕುಡಿಯುವ ನೀರಿನ ಪೈಪ್ ಲೈನ್ ಬಹುತೇಕ ಆಗಿದೆ. ಆನವಟ್ಟಿಯಲ್ಲಿ 7 ಲಕ್ಷದ ಒಂದು, 5 ಲಕ್ಷದ ಎರಡು ಟಿಎಚ್‌ಒ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶರಾವತಿ ನದಿಯಿಂದ ದೊಡ್ಡ ಪೈಪ್‌ಗಳ ಕಾಮಗಾರಿ ಶೀಘ್ರವಾಗಿ ಮುಗಿಸಿ ಆನವಟ್ಟಿ, ಸೊರಬ, ಶಿರಾಳಕೊಪ್ಪ ಮುತಾಂದ ಕಡೆ ನದಿಯಿಂದ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಭರವಸೆ ನೀಡಿದರು.ಭಾನುವಾರ ಆನವಟ್ಟಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ₹50 ಲಕ್ಷದ ವಿವಿಧ ಕಾಮಗಾರಿಗಳ ಭೂಮಿಪೂಜೆ, ಪರಿಶಿಷ್ಟ ಜಾತಿ, ಪರಿಶೀಷ್ಟ ಪಂಗಡ ಹಾಗೂ ಇತರೆ ಬಡ ವರ್ಗದ ಫಲಾನುಭವಿಗೆ ಹೊಲಿಗೆ ಯಂತ್ರ ಮತ್ತು ಸೋಲಾರ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೊರಬ, ಆನವಟ್ಟಿ, ಶಿರಾಳಕೊಪ್ಪ ನೂತನ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ₹380 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು 354 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಅಂದಾಜು ₹600 ಕೋಟಿ ಅನುದಾನ ಒದಗಿಸುವ ವಿಶ್ವಾಸ ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಶೇ.70ರಷ್ಟು ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಇನ್ನೂ ಶೇ.30ರಷ್ಟು ಅದಷ್ಟು ಬೇಗ ಸರಿಪಡಿಸಿ, ಉತ್ತಮ ದರ್ಜೆ ಸರ್ಕಾರಿ ಶಾಲೆಗಳಾಗಿ ನಿರ್ಮಿಸುವ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕೂ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.ಕೆಪಿಎಸ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಶೀಘ್ರದಲ್ಲೇ ಒಂದು ದೊಡ್ಡಮಟ್ಟದ ಅನುದಾನ ಶಿಕ್ಷಣ ಇಲಾಖೆಗೆ ಬರಲಿದೆ. ನಂತರ ಸರ್ಕಾರಿ ಶಾಲೆಗಳ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ವಿಶ್ವಾಸ ಭರಿತವಾಗಿ ಮಾತನಾಡಿದರು.ಸಮಾರಂಭದಲ್ಲಿ ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ್, ಮುಖ್ಯಾಧಿಕಾರಿ ಎಲ್.ಶಂಕರ್, ನಾಮ ನಿರ್ದೇಶನ ಸದಸ್ಯರಾದ ಅನೀಶ್ ಪಾಟೀಲ್, ಮಹಮ್ಮದ್ ಗೌಸ್ ಮಕಂದರ್, ಕೃಷ್ಣಪ್ಪ ತಲ್ಲೂರು, ಮುಖಂಡರಾದ ಚೌಟಿ ಚಂದ್ರಶೇಖರ್ ಪಾಟೀಲ್, ಜರ್ಮಲೆ ಚಂದ್ರಶೇಖರ್, ಕೆ.ಪಿ.ರುದ್ರಗೌಡ ಗಿಣಿವಾಲ, ಸದಾನಂದ ಗೌಡ ಬಿಳಗಲಿ, ಶಿವಲಿಂಗೇಗೌಡ, ಮಧುಕೇಶ್ವರ್ ಪಾಟೀಲ್, ಚಾಂದ್ ಸಾಬ್, ಸುರೇಶ್ ಹಾವಣ್ಣನವರ್, ಗಣಪತಿ ಹುಲ್ತಿಕೊಪ್ಪ, ಎಂ.ಡಿ.ಶೇಖರ್, ಅರುಣ ಸಮನವಳ್ಳಿ, ರಮೇಶ್ ಬುಡುಗ ಇದ್ದರು.