ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪಬ್ಲಿಕ್ ಶಾಲೆಯ ದಶಮಾನೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ವಿದ್ಯೆ ವಿದ್ಯಾರ್ಥಿಗಳ ಬದುಕು ರೂಪಿಸಲಿದೆ. ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಶಿಕ್ಷಣ ಅಗತ್ಯವಾಗಿದೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಗುರಿ ಇಟ್ಟುಕೊಂಡು ಎಸ್‌ಟಿಜಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಸಂಸ್ಥೆ ಆರಂಭಗೊಂಡು ಹತ್ತು ವರ್ಷವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಪುಟ್ಟರಾಜು ಅವರು ಕಂಡ ಕನಸ್ಸು ನನಸ್ಸಾಗಿದೆ ಎಂದರು.ದೇಶ, ವಿದೇಶದಲ್ಲಿ ನೀಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳಿಗೆ ಹಲವು ಟೆಕ್ನಾಲಜಿಗಳನ್ನು ಬಳಸಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಶಾಲೆ ಶಿಕ್ಷಣದ ಗುಣಮಟ್ಟವನ್ನು ಕಂಡು ರಾಜ್ಯದ ಮೂಲೆಮೂಲೆಗಳಿಂದ ಪೋಷಕರು ಮಕ್ಕಳನ್ನು ತಂದು ಎಸ್‌ಟಿಜಿ ಶಿಕ್ಷಣ ದಾಖಲಿಸುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಬಣ್ಣಿಸಿದರು.
ಕಳೆದ ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ಒಬ್ಬರು ಅಥವಾ ಇಬ್ಬರು ಐಎಎಸ್, ಐಪಿಎಸ್ ಪಾಸ್ ಮಾಡುತ್ತಿದ್ದರು. ಈಗ ವರ್ಷಕ್ಕೆ 40 -50 ಮಂದಿ ರಾಜ್ಯದ ವಿದ್ಯಾರ್ಥಿ ಐಎಎಸ್, ಐಪಿಎಸ್ ಪಾಸ್ ಮಾಡುತ್ತಿದ್ದಾರೆ. ಎಸ್‌ಟಿಜಿ ಸಂಸ್ಥೆ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಸಂಸ್ಥೆ ಆರಂಭಿಸಲು ಸಿಇಒ ಆದ, ನನ್ನ ಪುತ್ರ ಸಿ.ಪಿ.ಶಿವರಾಜು ಅವರೊಂದಿಗೆ ಚರ್ಚಿಸಿ 2014ರಲ್ಲಿ ನನ್ನ ತೋಟದ ಮನೆಯಲ್ಲಿ ಕೇವಲ 63 ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆ ಆರಂಭಿಸಿದೆವು. ಪೋಷಕರ ಆಶೀರ್ವಾದದಿಂದ ಪ್ರಸ್ತತ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಸಂಸ್ಥೆ ಕಷ್ಟದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಸಾಲಸೌಲಭ್ಯ ನೀಡಿ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಿದರು ಎಂದು ಸ್ಮರಿಸಿದರು.
ಮಂಡ್ಯದ ಎರಡು ಉಪವಿಭಾಗದಲ್ಲಿ ಮಂಡ್ಯ ಉಪ ವಿಭಾಗದಲ್ಲಿ ಕೆ.ವಿ.ಶಂಕರೇಗೌಡರು ಹಾಗೂ ಜಿ.ಮಾದೇಗೌಡರು ಉತ್ತಮವಾದ ಶಿಕ್ಷಣ ಸಂಸ್ಥೆ ಕಟ್ಟಿಬೆಳೆಸಿದ್ದಾರೆ. ಅಂತಹ ಮಹಾನ್ ನಾಯಕರ ಸಾಲಿನಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಪಾಂಡವಪುರ ಉಪವಿಭಾಗದಲ್ಲಿ ಶಾಲೆ ಆರಂಭಿಸಿದ್ದೇನೆ. ಈ ಸಂಸ್ಥೆ ಸದಾ ಮಕ್ಕಳು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದರು.
ಸಮಾರಂಭದಲ್ಲಿ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ತನುಶ್ರೀ ಶಿವರಾಜು, ಜಿಪಂ ಮಾಜಿ ಸದಸ್ಯೆ ನಾಗಮ್ಮ ಪುಟ್ಟರಾಜು, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಟ್ರಸ್ಟಿ ತಮ್ಮಣ್ಣಗೌಡ, ಆಡಳಿತಾಧಿಕಾರಿ ನಿವೇಧಿತ ನಾಗೇಶ್, ಪ್ರಾಂಶುಪಾಲೆ ಮಾಚಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.