ಕನ್ನಡಪ್ರಭ ವಾರ್ತೆ ತುಮಕೂರು
ಉಪನ್ಯಾಸಕ ಡಾ.ಎಲ್.ಪಿ.ರಾಜು ಮಾತನಾಡಿ, ದ್ರೋಣರಿಗೆ ಗುರುಕಾಣಿಕೆಯಾಗಿ ತನ್ನ ಹೆಬ್ಬೆರಳು ನೀಡಿದ ಏಕಲವ್ಯ, ಭಕ್ತಿಗಾಗಿ ಶಿವನಿಗೆ ಕಣ್ಣು ನೀಡಿದ ಬೇಡರ ಕಣ್ಣಪ್ಪನ ಸಮುದಾಯ ನಮ್ಮದು. ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿದ ರಾಮಾಯಣ ಇಡೀ ಜಗತ್ತಿಗೆ ದಾರಿದೀಪವಾಗಿದೆ. ವಾಲ್ಮೀಕಿ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡದ ಮನುವಾದಿಗಳು ವಾಲ್ಮೀಕಿಯನ್ನು ದರೋಡೆಕಾರ ಎಂದು ಬಿಂಬಿಸಿದ್ದಾರೆ. ವಾಲ್ಮೀಕಿಯನ್ನು ತೇಜೋವದೆ ಮಾಡುತ್ತಾ ರಾಮನನ್ನು ವೈಭವೀಕರಣ ಮಾಡುವ ಕೆಲಸವಾಗುತ್ತಿದೆ. ಪಂಜಾಬ್ ಹೈಕೋರ್ಟ್ ಸಹ ವಾಲ್ಮೀಕಿ ದರೋಡಕೊರ ಅಲ್ಲ, ಆತ ಬೇಡ ಕುಲದ ವ್ಯಕ್ತಿ ಎಂದು ತಿರ್ಪು ನೀಡಿದೆ. ರಾಮನ ವಿಜೃಂಭಣೆಯಲ್ಲಿ ಹಾಗೂ ರಾಮನಬೇಕು, ಬೇಡಗಳ ಮಧ್ಯದಲ್ಲಿ ವಾಲ್ಮೀಕಿಯನ್ನು ನೇಪಥ್ಯಕ್ಕೆ ತಳಲಾಗಿದೆ ಎಂದು ಹೇಳಿದರು. ಶಿಡ್ಲಕೋಣದ ವಾಲ್ಮೀಕಿ ಗುರುಪೀಠದ ಶ್ರೀಸಂಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಸಮುದಾಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುವ ಮೂಲಕ ಶ್ರೀಮತಿ ಶಾಂತಲ ರಾಜಣ್ಣ ಉತ್ತಮ ಕೆಲಸ ಮಾಡುತಿದ್ದಾರೆ. ಯುವಜನತೆಯ ಸಂಘಟನೆಯ ಜೊತೆಗೆ, ಶೈಕ್ಷಣಿಕವಾಗಿ ಅವರನ್ನು ಹುರುದುಂಬಿಸುವ ಕೆಲಸದಿಂದ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗಲಿದೆ. ಇದು ಮುಂದುವರೆದುಕೊಂಡು ಹೋಗಲಿ ಎಂದು ಶುಭ ಹಾರೈಸಿದರು. ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶ್ರೀಮತಿ ಶಾಂತಲ ರಾಜಣ್ಣ ಮಾತನಾಡಿ, ಸಮುದಾಯವನ್ನು ಶೈಕ್ಷಣಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ಪ್ರಾಮಾಣಿಕವಾಗಿ ಶಿಕ್ಷಣಕ್ಕೆ ಹಣಕಾಸಿನ ಕೊರತೆ ಇದ್ದರೆ ಸಂಘ ನಿಮಗೆ ಸ್ಪಂದಿಸಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಆರ್.ರಾಜಕುಮಾರ್ ಮಾತನಾಡಿ, ಇಲಾಖೆಯಿಂದ ಪ್ರಬುದ್ದ ಯೋಜನೆಯ ಮೂಲಕ ವಿದೇಶದಲ್ಲಿ ಕಲಿಯಲು ಅವಕಾಶವಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಸಾ.ಲಿಂಗಯ್ಯ, ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜಿ ಕೃ?ಪ್ಪ,ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷೆ ಶ್ರೀಮತಿ ಶಾಂತಲರಾಜಣ್ಣ,ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ, ಅಧಿಕಾರಿಗಳಾದ ಡಾ.ಕೆ.ಆರ್.ರಾಜಕುಮಾರ್,ಕೆ.ಎಸ್.ಗಂಗಾಧರ್,ಡಿ.ಸಿ ಸಿ ಬ್ಯಾಂಕನ ಜಂಗಮಪ್ಪ,ಸಮಾಜದ ಮುಖಂಡರಾದ ಪ್ರತಾಪ್,ಸಿಂಗದಳ್ಳಿ ರಾಜಕುಮಾರ್,ನಿವೃತ್ತ ಬಿ ಇ ಓ,ಬಸವರಾಜ ಉಪಸ್ಥಿತರಿದ್ದರು.ಮುಡಾ ನಿವೇಶನ ನೀಡಿದವರೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ: ಅಸತ್ಯಕ್ಕಾಗಿ ಆಗ್ರಹ ಮಾಡುವ ಕಾಲ ಬಂದಿದೆ. ಈ ಸಿದ್ದರಾಮಯ್ಯನವರ ಮುಡಾ ಕೇಸ್ ಸಹ ವಿರೋಧ ಪಕ್ಷಗಳು ರಾಜಕೀಯಕ್ಕಾಗಿ ೧೩ ವರ್ಷಗಳ ಹಿಂದಿನ ಪ್ರಕರಣವನ್ನು ತಂದು ಜನಮಾನಸದಲ್ಲಿ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ನಿವೇಶನ ನೀಡಿದವರೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವ ರಾಜಣ್ಣ ಹೇಳಿದರು.ವಾಲ್ಮೀಕಿಯನ್ನು ದರೋಡೆಕೋರ ಎನ್ನುವವರು ಅಯೋಗ್ಯರು: ಮರ್ಹಷಿ ವಾಲ್ಮೀಕಿಯನ್ನು ದರೋಡೆಕೋರ ಎನ್ನುವವರು ಅಯೋಗ್ಯರು, ಮೇಲ್ವರ್ಗದ ಜನ ಸುಖಾಸುಮ್ಮನೆ ತಳ ಸಮುದಾಯದ ಜನರನ್ನು ಕೀಳುಮಟ್ಟದಿಂದ ಕಾಣುವ ಪರಿಸ್ಥಿತಿ ಹೋಗಬೇಕು. ವಾಲ್ಮೀಕಿ ದರೋಡೆಕೋರ ಎಂದು ಯಾರಾದರೂ ಸಭೆಗಳಲ್ಲಿ ಹೇಳಿದರೆ ಅಲ್ಲೇ ಖಂಡನೆ ಮಾಡಿ, ತಳ ಸಮುದಾಯಗಳಪರ ನಾಯಕತ್ವ ವಹಿಸಿ ಅಸಹಾಯಕ ಸಮುದಾಯದವರ ಬೆನ್ನಿಗೆ ನಿಂತು ನಾವು ನಾಯಕರಾಗಿ ಬೆಳೆಯಬೇಕು ಎಂದು ಯುವ ರಾಜಕಾರಣಿಗಳಿಗೆ ಸಚಿವ ರಾಜಣ್ಣ ಕಿವಿಮಾತು ಹೇಳಿದರು.