ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಕನಕದಾಸರ ಅದ್ಧೂರಿ ಜಯಂತಿ ಜೊತೆಗೆ ಪಟ್ಟಣದ ಕನಕ ಭವನ ಪೂರ್ಣಗೊಳಿಸಲು ಸಹಕಾರವಿದೆ ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಭರವಸೆ ನೀಡಿದರು.ಪಟ್ಟಣದ ಪ್ರಜಾಸೌಧದ ಸಭಾ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕ ಭವನ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು. ದಾಸ ಶರಣರು ಮೂಢನಂಬಿಕೆ, ಜಾತಿ ವ್ಯವಸ್ಥೆ, ಅಸಮಾನತೆಗಳ ವಿರುದ್ಧ ಹೋಗಲಾಡಿಸಲು ಶ್ರಮಿಸಿದವರಲ್ಲಿ ಕನಕದಾಸರು ಕೂಡ ಒಬ್ಬರಾಗಿದ್ದರು. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿ, ಮೂಢನಂಬಿಕೆಗಳ ವಿರುದ್ಧ ಇದ್ದರು ಎಂದರು.ಕನಕದಾಸರು ಹಾಗೂ ಶರಣರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಜಯಂತಿ ಆಚರಣೆಗೂ ಅರ್ಥ ಬರಲಿದ್ದು, ಕನಕದಾಸರ ಆದರ್ಶ ಪ್ರಸ್ತುತ ಅಗತ್ಯ ಎಂದು ಪ್ರತಿಪಾದಿಸಿದರು. ಶಿಕ್ಷಣ ಇಲಾಖೆಯ ರವಿ ಸಿ. ಮಾತನಾಡಿ ಕನಕದಾಸರು 15 ಸಾವಿರಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆದು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ರಾಜ್ಯಾದ್ಯಂತ ಸಂಚರಿಸಿದ್ದಾರೆ ಎಂದರು. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂಬ ಸಂದೇಶ ಸಾರುವ ಮೂಲಕ ಜಾತ್ಯತೀತ ಸಮಾಜದ ಕನಸು ಕಂಡಿದ್ದರು ಅಂತವರ ಆದರ್ಶ ಪಾಲಿಸಬೇಕಿದೆ ಎಂದರು.ಪುರಸಭೆ ಉಪಾಧ್ಯಕ್ಷೆ ಹೀನಾ ಕೌಸರ್, ತಹಸೀಲ್ದಾರ್ ಟಿ. ರಮೇಶ್ ಬಾಬು, ಇನ್ಸ್‌ಪೆಕ್ಟರ್ ಎಸ್. ಪರಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ. ವಸಂತಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಶಿಶು ಯೋಜನಾಧಿಕಾರಿ ಎಂ. ಹೇಮಾವತಿ, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ಉದ್ಯಮಿ ಆರ್.ಮಧುಕುಮಾರ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ಪುರಸಭೆ ಮಾಜಿ ಉಪಾಧ್ಯಕ್ಷರಾದ ಎಸ್‌ಆರ್‌ಎಸ್ ರಾಜು, ಜಿ.ಎಲ್.ರಾಜು, ಪುರಸಭೆ ಸದಸ್ಯರು, ಕುರುಬ ಸಮಾಜದ ಮುಖಂಡರು ಇದ್ದರು.
ಕನಕ ಜಯಂತಿಗೆ ಅನ್ನಸಂತರ್ಪಣೆಪಟ್ಟಣದ ಮಡಹಳ್ಳಿ ಸರ್ಕಲ್‌ನಲ್ಲಿ ತಾಲೂಕು ಕುರುಬರ ಸಂಘ ಹಾಗೂ ಕನಕ ಕಾರ್ಮಿಕರ ಬಳಗ ಆಯೋಜಿಸಿದ್ದ ಕನಕದಾಸರ ಜಯಂತಿಯನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಅಭಿಮಾನಿಗಳು ಹಾಗೂ ಸಮಾಜದ ಮುಖಂಡರು ಅನ್ನ ಸಂತರ್ಪಣೆ ಮಾಡಿದ್ದಾರೆ. ಈ ವೇಳೆ ಎಲ್ಲರಿಗೂ ಕನಕದಾಸರ ಜಯಂತಿಯ ಶುಭಾಶಯ ಕೋರಿದರು. ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಉದ್ಯಮಿ ಆರ್.ಮಧುಕುಮಾರ್ ಹಾಗೂ ಕುರುಬ ಸಮಾಜದ ಗುಂಡ್ಲುಪೇಟೆ ರಘು, ಎಸ್‌ಆರ್‌ಎಸ್ ರಾಜು, ಶಿವಣ್ಣ ಪುತ್ತನಪುರ ಸೇರಿದಂತೆ ಕಾರ್ಮಿಕ ಬಳಗ ಹಾಗೂ ಸಮಾಜದ ಯುವಕರು ಇದ್ದರು.