ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಹೇರಿದ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕರಾಳ ದಿನ ಆಚರಣೆಯಲ್ಲಿ ಮಾತನಾಡಿದರು.
ಅಂದು ಇಂದಿರಾ ಗಾಂಧಿ ಸಂವಿಧಾನವನ್ನು ದುರ್ಬಲ ಮಾಡಿದರೆ, ಇಂದು ರಾಹುಲ್ ಗಾಂಧಿ ಅಧಿಕಾರ ಗಳಿಸುವುದಕ್ಕಾಗಿ ಸಂವಿಧಾನ ವನ್ನು ದುರ್ಬಲ ಮಾಡುತ್ತಿದ್ದಾರೆ . ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ಬೇಸತ್ತ ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ. ಸಿ.ಸಿದ್ದು ಮಾತನಾಡಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಸಂವಿಧಾನದ ಕೊಲೆ ಮಾಡಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು ಎಂದು ಹೇಳಿದರು.
ಈ ವೇಳೆ ತಾಲೂಕು ಮೋರ್ಚಾ ಅಧ್ಯಕ್ಷ ಸಿ.ಕೆ.ಸತೀಶ್, ರೈತ ಮೋರ್ಚಾ ಅಧ್ಯಕ್ಷ ಬಿ. ಎಚ್. ರವಿ, ಯುವ ಮೋರ್ಚಾ ಅಧ್ಯಕ್ಷ ಸಿ.ಡಿ.ಸಂತೋಷ್, ಮಹಿಳಾ ಮೋರ್ಚಾ ಅಧ್ಯಕ್ಷ ಶ್ವೇತ, ಮುಖಂಡರಾದ ವಾಸು, ಎಂ.ಎಸ್. ವೀರಭದ್ರ ಸ್ವಾಮಿ, ರಂಜಿತಾ, ಸೌಮ್ಯ ಶ್ರೀನಿವಾಸ್, ಕಾಂತಾಮಣಿ, ಮಾ.ನ ಪ್ರಸನ್ನ ಕುಮಾರ್ ಮತ್ತಿತರರು ಇದ್ದರು.