ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಮುಸಲ್ಮಾನ್ ರಾಜ್ಯ ಮಾಡಲು ಹೊರಟಿದೆ. ಭದ್ರಾವತಿಯ ಶಾಸಕ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ಸುಳ್ಳು, ತನಿಖೆ ಆಗಲಿ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ಓಲೈಕೆಯಿಂದಲೇ ಇಂದು ಈ ರೀತಿ ಕೂಗುತ್ತೀರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳು ಗಣೇಶೋತ್ಸವ ಮೆರವಣಿಗೆ ಮಾಡಿದರೆ ಮಸೀದಿಯಿಂದ ಕಲ್ಲು ಹೊಡಿತಾರೆ. ರಾಷ್ಟ್ರ ಭಕ್ತರ ಜೊತೆ ಪೊಲೀಸರಿಗೂ ಕಲ್ಲು ಹೊಡೆಯುತ್ತಾರೆ. ಹುಬ್ಬಳ್ಳಿಯಲ್ಲಿ ನಾಲ್ಕು ಜನ ಯುವಕರಿಗೆ ಚಾಕು ಇರಿದಿದ್ದಾರೆ. ರಾಜ್ಯದ ಮುಸಲ್ಮಾನರು ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕುವುದಾದರೆ ದೇಶ ಬಿಟ್ಟು ತೊಲಗಲಿ ಎಂದರು.ಮಂಡ್ಯದ ಹೆಣ್ಣು ಮಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ನಾಲ್ಕೈದು ಜನ ಮುಸ್ಲಿಮರನ್ನ ಬಂಧನ ಮಾಡಿದರೆ ಸಾಕಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಗಂಡುಗಲಿ ರೀತಿ ನಿರ್ಧಾರ ಕೈಗೊಳ್ಳಬೇಕಿತ್ತು. ಸಿಎಂ ಹಾಗೂ ಗೃಹ ಸಚಿವರು ಇವರು ಮುಸಲ್ಮಾನರ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ, ಹುಟ್ಟುತ್ತೇನೆ ಎಂಬ ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾಬರಿಗಾದ್ರೂ ಹುಟ್ಟಲಿ, ಅವರು ಯಾರಿಗಾದ್ರೂ ಹುಟ್ಟಲಿ ಎಂದು ಹರಿಹಾಯ್ದರು.