ಮಾಮ್ಕೋಸ್ ಎತ್ತರಕ್ಕೆ ಬೆಳೆಸುವಲ್ಲಿ ಸರ್ವರ ಸಹಕಾರ ಅಗತ್ಯ

KannadaprabhaNewsNetwork |  
Published : Jul 28, 2026, 01:15 AM IST
ಮ್ಯಾಮ್.ಕೋಸ್ ತರೀಕೆರೆ ಶಾಖೆ ಸದಸ್ಯರ ಸಮಾಲೋಜನಾ ಸಭೆ | Kannada Prabha

ಸಾರಾಂಶ

ತರೀಕೆರೆಮಾಮ್ಕೋಸ್ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸುವಲ್ಲಿ ಸರ್ವರ ಸಹಕಾರ ಅಗತ್ಯ ಎಂದು ಶಿವಮೊಗ್ಗ ಮಾಮ್ಕೋಸ್ ನಿ.ಉಪಾಧ್ಯಕ್ಷ ಮಹೇಶ್ ಎಚ್.ಎಸ್.ಹುಲ್ಕುಳಿ ಹೇಳಿದ್ದಾರೆ.

-ಮಹೇಶ್ ಎಚ್.ಎಸ್.ಹುಲ್ಕುಳಿ ಅಭಿಪ್ರಾಯ । ಮಾಮ್ಕೋಸ್ ತರೀಕೆರೆ ಶಾಖೆ ಸದಸ್ಯರ ಸಮಾಲೋಜನಾ ಸಭೆ

ಕನ್ನಡಪ್ರಭ ವಾರ್ತೆ ತರೀಕೆರೆ

ಮಾಮ್ಕೋಸ್ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸುವಲ್ಲಿ ಸರ್ವರ ಸಹಕಾರ ಅಗತ್ಯ ಎಂದು ಶಿವಮೊಗ್ಗ ಮಾಮ್ಕೋಸ್ ನಿ.ಉಪಾಧ್ಯಕ್ಷ ಮಹೇಶ್ ಎಚ್.ಎಸ್.ಹುಲ್ಕುಳಿ ಹೇಳಿದ್ದಾರೆ.

ಸೋಮವಾರ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ನಿ. ಶಿವಮೊಗ್ಗ, ತರೀಕೆರೆ ಶಾಖೆ ವತಿಯಿಂದ ತರೀಕೆರೆ ಶಾಖೆ ನೂತನ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಮಾಮ್ಕೋಸ್ ತರೀಕೆರೆ ಶಾಖೆ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಅಡಕೆ ಹಾನಿಕಾರಕ ಅಲ್ಲ, ವಿಷಕಾರಕ ಅಲ್ಲ ಎಂದು ಮಾಮ್ಕೋಸ್ ಕಾನೂನು ಹೋರಾಟ ಮಾಡುತ್ತಿದೆ. ಸಂಸ್ಥೆಯಲ್ಲಿ 76ರಿಂದ ಚುನಾಯಿತ ಸದಸ್ಯರಿದ್ದು, 16 ಜನ ಉಪಾಧ್ಯಕ್ಷರಾಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾಮ್ಕೋಸ್ ಸಂಸ್ಥೆ ಶಾಖೆಗಳು ತಮ್ಮ ಸ್ವಂತ ಕಟ್ಟಡ ಹೊಂದಿದೆ. ಶಿವಮೊಗ್ಗದಲ್ಲಿ ಅಡಕೆ ಖರೀದಿ ಕೇಂದ್ರ ಇದೆ ಎಂದು ಹೇಳಿದರು.

ಮಾಮ್ಕೋಸ್ ಸಂಸ್ಥೆಯಲ್ಲಿ 19 ಜನ ಚುನಾಯಿತ ಸದಸ್ಯರು ಇದ್ದಾರೆ. ಗುಣಮಟ್ಟದ ಅಡಕೆಗೆ ಉತ್ತಮ ಧಾರಣೆ ಇದೆ. ಮಾಮ್ಕೋಸ್ 9 ಕೋಟಿ 53 ಲಕ್ಷ ನಿವ್ವಳ ಲಾಭ ಗಳಿಸಿದೆ, ಕ್ರಾಪ್ ಲೋನ್ ಕೂಡ ವಿತರಿಸಲಾಗುತ್ತಿದೆ. 3 -4 ಕೋಟಿ ಗೊಬ್ಬರ ವ್ಯವಹಾರ ನಿರ್ವಹಿಸಲಾಗುತ್ತಿದೆ. ಅಡಕೆ ಬೆಳೆ ಸಂರಕ್ಷಣೆ ಸಂಶೋಧನೆಗೆ ಅಡಕೆ ಸಂಸ್ಕರಣಾ ಯಂತ್ರೋಪಕರಣಗಳ ಅನ್ವೇಷಣೆ ಅಭಿವೃದ್ಧಿಗೆ ಅರ್ಥಿಕ ನೆರವು ನೀಡಲಾಗುತ್ತಿದೆ. ಉಚಿತವಾಗಿ ಒಂದು ವರ್ಷದ ಅವಧಿಗೆ ಅಡಕೆ ಸಂಗ್ರಹಿಸಿಡುವ ಸೌಲಭ್ಯವನ್ನು ಮಾಮ್ಕೋಸ್ ಕಲ್ಪಿಸಿದ್ದು, ಸದಸ್ಯರಿಗಾಗಿ ಗುಂಪು ವಿಮಾ ಅಭಿರಕ್ಷೆ ಯೋಜನೆ ಚಾರಿಗೆ ತರಲಾಗಿದೆ ಎಂದರು.

ವೈದ್ಯಕೀಯ ಸೌಲಭ್ಯ, ಪಾರಿತೋಷಕ ಬಹುಮಾನ, ತಂತ್ರಜ್ಞಾನ ಮತ್ತು ಇತರೆ ಸೌಲಭ್ಯ ಸಂಸ್ಥೆ ಹೊಂದಿದೆ. ಸಂಘದ ಎಲ್ಲಾ ವ್ಯವಹಾರವನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ ಎಂದು ಹೇಳಿದರು.

ಅಡಕೆ ಬೆಳೆಗಾರರಾದ ಟಿ.ವಿ.ಶಿವಶಂಕರಪ್ಪ, ತಮ್ಮಯಣ್ಣ, ಲೋಕೇಶ್, ಚಿರಂಜೀವಿ, ಗೋಪಾಲಕೃಷ್ಣ ಮತ್ತಿತರ ರೈತರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರೈತರು, ಮಾಮ್ಕೋಸ್ ನಿರ್ದೇಶಕರಾದ ಟಿ.ಎಲ್.ರಮೇಶ್, ಯಡಗೆರೆ ಸುಬ್ರಹ್ಮಣ್ಯ, ನರೇಂದ್ರ, ಶ್ರೀನಿವಾಸ್, ಸುರೇಶ್ ಚಂದ್ರ, ಸಹನಾ ಸುಭಾಷ್, ಜಯಶ್ರೀ, ವಿರುಪಾಕ್ಷಪ್ಪ, ನಂದನ್, ಮ್ಯಾಮ್ ಕೋಸ್ ಸಂಸ್ಥೆ ನಿರ್ದೇಶಕರು ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಕಾನೂನು ಸಲಹೆಗಾರರಾದ ಎಸ್.ಸುರೇಶ್ ಚಂದ್ರ, ತರೀಕೆರೆ ಶಾಖೆ ಪ್ರದೀಪ್ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.

-

27ಕೆಟಿಆರ್.ಕೆ.12ಃ

ತರೀಕೆರೆಯಲ್ಲಿ ನಡೆದ ಮಾಮ್ಕೋಸ್ ಸ್ಥಳೀಯ ಶಾಖೆ ಸದಸ್ಯರ ಸಮಾಲೋಚನಾ ಸಭೆಯನ್ನು ಶಿವಮೊಗ್ಗ ಮಾಮ್ಕೋಸ್ ನಿ.ಉಪಾಧ್ಯಕ್ಷ ಮಹೇಶ್ ಎಚ್.ಎಸ್.ಹುಲ್ಕುಳಿ ಉದ್ಘಾಟಿಸಿದರು. ಮಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ