ಕೊಪ್ಪಳ ಗವಿಮಠ ಜಾತ್ರೆ ದಕ್ಷಿಣ ಭಾರತ ಎರಡನೇ ಕುಂಭಮೇಳವಾದರೆ ದೋಟಿಹಾಳ ಶುಕಮುನಿ ಶ್ರೀಗಳ ಜಾತ್ರೆಯು ಕೊಪ್ಪಳ ಜಿಲ್ಲೆ ಎರಡನೇಯ ಕುಂಭ ಮೇಳ ಎನ್ನಬಹುದಾಗಿದೆ
ಕುಷ್ಟಗಿ: ಪ್ರತಿಯೊಬ್ಬರು ಜಾತ್ರೆಯಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ ಪಡೆಯಬೇಕು, ಬಂಧು ಬಳಗ ಒಟ್ಟುಗೂಡಿಸಲು ಜಾತ್ರೆಗಳು ಸಹಾಯವಾಗಿವೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಸನಸಾಬ್ ದೋಟಿಹಾಳ, ಅಮರೇಗೌಡ ಪಾಟೀಲ್ ಬಯ್ಯಾಪುರ ಅಭಿಮಾನಿ ಬಳಗದಿಂದ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅವಧೂತ ಶ್ರೀ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೋಟಿಹಾಳ ಭಾಗದ ಮಹಾತ್ಮರು ಶ್ರೀ ಶುಕಮುನಿಗಳು ಅವರ ಜೀವನ ತತ್ವ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದ ಅವರು, ಯುವ ಪೀಳಿಗೆ ದುಶ್ಚಟ ಬಿಟ್ಟು ಸಂಸ್ಕಾರಯುತ ಜೀವನದೊಂದಿಗೆ ಉತ್ತಮ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಗವಿಮಠ ಜಾತ್ರೆ ದಕ್ಷಿಣ ಭಾರತ ಎರಡನೇ ಕುಂಭಮೇಳವಾದರೆ ದೋಟಿಹಾಳ ಶುಕಮುನಿ ಶ್ರೀಗಳ ಜಾತ್ರೆಯು ಕೊಪ್ಪಳ ಜಿಲ್ಲೆ ಎರಡನೇಯ ಕುಂಭ ಮೇಳ ಎನ್ನಬಹುದಾಗಿದೆ ಎಂದರು.
ಯುವಮುಖಂಡ ಲಾಡ್ಲೆಮಷಾಕ್ ಪ್ರಾಸ್ತಾವಿಕವಾಗಿ ಮಾತನಾಡಿದರು
. ಹಿರಿಯ ಸಾಹಿತಿ ಕೆ.ವೈ.ಕಂದಕೂರು ಶ್ರೀಅವಧೂತ ಶುಕಮುನಿ ಶ್ರೀಗಳ ಚರಿತ್ರೆ ಕುರಿತು ಬರೆದಿರುವ ಪುಸ್ತಕ ಬಿಡುಗಡೆಯಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರಗೌಡ ಮಾಲಿ ಪಾಟೀಲ್, ಬಸಪ್ಪ ಚೌಡ್ಕಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಚಂದ್ರಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಂಸದ ಸಂಗಣ್ಣ ಕರಡಿ, ಗೋಪಾಲರಾವ್ ಕುಲಕರ್ಣಿ,ಶಂಕರಗೌಡ ಪಾಟೀಲ, ಪ್ರಭುರಾಜ ಪಾಟೀಲ, ಶೇಖರಗೌಡ ಮಾಲಿಪಾಟೀಲ, ಶಿವಶಂಕರಗೌಡ ಕಡೂರು, ದೊಡ್ಡಬಸವನಗೌಡ ಬಯ್ಯಾಪುರ, ಲಾಡ್ಲೆಮಷಾಕ ದೋಟಿಹಾಳ,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.