ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ತಾಲೂಕು ತಹಶೀಲ್ ಕಾರ್ಯಾಲಯದಲ್ಲಿ, ತಹಶೀಲ್ದಾರ ಎಂ. ಬಸವರಾಜ್ ಅವರಿಗೆ ತಾಲೂಕು ಘಟಕದಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು, ನಿಗದಿತ ದರದಲ್ಲಿ ಭತ್ತ ಖರೀದಿಸದೆ ತಮಗೆ ಇಚ್ಚಿಸಿದಂತೆ ರೈತರ ಭತ್ತ ಖರೀದಿಸಲಿದ್ದಾರೆ. ರಸಗೊಬ್ಬರ ದರದ ಬಗ್ಗೆ ಮಾಹಿತಿ ಹಾಕಬೇಕು. ಕಳಪೆ ಗೊಬ್ಬರ ಮಾರಾಟ ತಡೆಯಬೇಕು ಅಲ್ಲದೆ ರೈತರ ಸಮ್ಮುಖದಲ್ಲಿ ಎಲ್ಲ ಗೊಬ್ಬರ ಅಂಗಡಿಗಳ ಮಾಲೀಕರ ಸಭೆ ನಡೆಸಬೇಕು ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು. ಈ ಸಂದರ್ಭ ಸಿದ್ದನಗೌಡ ಗುರಡ್ಡಿ, ದೊಡ್ಡಪ್ಪ ಕಕ್ಕೇರಿ, ಗೊಲ್ಲಾಳ ಹುಣಸಗಿ, ಬಸವರಾಜ್ ಬೂದಿಹಾಳ, ಗೋವಿಂದ ಪತ್ತಾರ, ರಾಯಪ್ಪ ವಜ್ಜಲ್, ಸೋಮಯ್ಯ ಹಿರೇಮಠ, ಶಿವಲಿಂಗಯ್ಯ ಬೇವಿನಾಳಮಠ ಸೇರಿದಂತೆ ಇತರರಿದ್ದರು.
-9ವೈಡಿಆರ್1 :