ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಗೆ ಉತ್ಸವ ಸಹಕಾರಿ: ಮಾಜಿ ಸಚಿವ ಹರತಾಳು ಹಾಲಪ್ಪ

KannadaprabhaNewsNetwork |  
Published : Feb 12, 2025, 12:35 AM IST
ಸಿದ್ದಾಪುರದಲ್ಲಿ ನಡೆದ ಸಿದ್ದಾಪುರ ಉತ್ಸವ ಸಮಾರೋಪದಲ್ಲಿ ಹರತಾಳು ಹಾಲಪ್ಪ ಸಾಧಕರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಸರ್ಕಾರಿ ಉತ್ಸವದ ಬದಲಾಗಿ ಜನರೆಲ್ಲ ಸೇರಿ ಆಯೋಜಿಸಿದ ಉತ್ಸವ ಇದು. ಉದ್ಯೋಗದ ನಿಮಿತ್ತ ಹೊರ ಊರುಗಳಲ್ಲಿರುವ ಇಲ್ಲಿನವರಿಗೆ ಊರನ್ನು ನೆನಪಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಸಿದ್ದಾಪುರ: ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಗೊಳ್ಳಲು ಜನರ ಉತ್ಸವಗಳು ಸಹಾಯಕವಾಗುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.

ಇತ್ತೀಚೆಗೆ ಸಿದ್ದಾಪುರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಅತ್ಯುತ್ತಮ ರಾಜಕೀಯ ಪ್ರಜ್ಞೆ, ವಿದ್ಯಾವಂತರನ್ನು ಹೊಂದಿದ ಅಪ್ಪಟ ಮಲೆನಾಡಿನ ಈ ತಾಲೂಕಿನಲ್ಲಿ ಜರುಗಿದ ಸಿದ್ದಾಪುರ ಉತ್ಸವ ಯಶಸ್ವಿಯಾಗಿದೆ. ಪಕ್ಷ, ಜಾತಿ ಭೇದ ಮೀರಿ ಸಂಘಟಿಸಿದ ಈ ಉತ್ಸವ ಶಾಘ್ಲನೀಯವಾದದ್ದು ಎಂದರು.

ಸರ್ಕಾರಿ ಉತ್ಸವದ ಬದಲಾಗಿ ಜನರೆಲ್ಲ ಸೇರಿ ಆಯೋಜಿಸಿದ ಉತ್ಸವ ಇದು. ಉದ್ಯೋಗದ ನಿಮಿತ್ತ ಹೊರ ಊರುಗಳಲ್ಲಿರುವ ಇಲ್ಲಿನವರಿಗೆ ಊರನ್ನು ನೆನಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳ ಸಾಧಕರನ್ನು ಗೌರವಿಸಲು, ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಒದಗಿಸಲು ಸಾಧ್ಯವಾಗುತ್ತದೆ ಎಂದರು.

ಅತಿಥಿ ಡಾ. ಶ್ರೀಧರ ವೈದ್ಯ ಮಾತನಾಡಿ, ಅರ್ಹತೆ, ಅವಕಾಶ, ಅದೃಷ್ಟ ಈ ಮೂರೂ ಸಾಧನೆಗೆ ಅಗತ್ಯ. ಈ ಉತ್ಸವದಲ್ಲಿ ಸಾಧನೆಗೆ ಗೌರವ, ಕಲಾವಿದರಿಗೆ, ಕ್ರೀಡಾಪಟುಗಳಿಗೆ ಅವಕಾಶ ದೊರಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿ ಗೌರವಾದ್ಯಕ್ಷ ಉಪೇಂದ್ರ ಪೈ ಮಾತನಾಡಿ, ಕಾರ್ಯಕರ್ತರ ಶ್ರಮ, ದಾನಿಗಳ ನೆರವು, ಪ್ರೇಕ್ಷಕರ ಪಾಲ್ಗೊಳ್ಳುವಿಕೆಯಿಂದ ಉತ್ಸವ ಕಳೆದ ಮೂರು ವರ್ಷಗಳಿಂದಲೂ ಯಶಸ್ವಿಯಾಗಿ ನಡೆದಿದೆ ಎಂದರು.

ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಶಿಭೂಷಣ ಹೆಗಡೆ, ಕಾರ್ಯಾಧ್ಯಕ್ಷ ಸತೀಶ ಹೆಗಡೆ ಬೈಲಳ್ಳಿ, ವಿಜಯ ಪ್ರಭು, ಉಪಾಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಅನಿಲ ದೇವನಳ್ಳಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ ಗೌಡರ್, ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿನಾಯಕ ಭಟ್ಟ ಮತ್ತಿಹಳ್ಳಿ(ಧಾರ್ಮಿಕ), ತಹಸೀಲ್ದಾರ್ ಎಂ.ಆರ್. ಕುಲಕರ್ಣಿ(ಆಡಳಿತ), ಆನಂದ ಐ. ನಾಯ್ಕ(ಸಹಕಾರ), ಜಿ.ಎಸ್. ಹೆಗಡೆ ಬೆಳ್ಳೆಡಿಕೆ(ನ್ಯಾಯವಾದಿ), ನಾಗೇಂದ್ರ ಭಟ್(ಸಮಾಜ ಸೇವೆ), ಮಂಜುನಾಥ ಭಟ್ಟ(ಶಿಕ್ಷಣ), ಡಾ. ಚಂದ್ರಶೇಖರ ಪಂಡಿತ(ವೈದ್ಯಕೀಯ), ಅರುಣ ಗೌಡರ್ ಬಂದೀಸರ(ನಾಟಿ ವೈದ್ಯ), ಗಂಗಾಧರ ಕೊಳಗಿ(ಮಾಧ್ಯಮ), ಕೇಶವ ಹೆಗಡೆ ಕೊಳಗಿ(ಯಕ್ಷಗಾನ), ಸದಾಶಿವ ಬಿ. ನಾಯ್ಕ(ಕೈಗಾರಿಕೆ), ಸುಮನಾ ಹೆಗಡೆ ಹೆಗ್ಗರಣಿ(ಕೃಷಿ), ಶಾರದಾ ಪಿ. ವಾಲ್ಮೀಕಿ(ತೋಟಗಾರಿಕೆ), ರಮೇಶ ನಾಯ್ಕ ಹುಸೂರು(ಹೈನುಗಾರಿಕೆ), ಗುರುರಾಜ ನಾಯ್ಕ(ಕ್ರೀಡೆ), ಅಣ್ಣಪ್ಪ ನಾಯ್ಕ(ಉತ್ತಮ ದರ್ಜಿ), ಸೋಮಶೇಖರ ಹೊನ್ನೆಗುಂಡಿ(ಲಾಂಡ್ರಿ), ಅನಂತ ಕಾಮತ್(ವ್ಯಾಪಾರ), ಪ್ರಶಾಂತ ಶೇಟ್(ರಜತ, ಸ್ವರ್ಣ ಶಿಲ್ಪ), ಚಂದ್ರು ಭಂಡಾರಿ(ಸವಿತಾ ಸಮಾಜ), ಗಣೇಶ ಆಚಾರಿ(ವಿಶ್ವಕರ್ಮ), ಕೇಶವ ಅಂಬಿಗ(ಹಮಾಲಿ), ಗಿರಿಧರ ಗೌಡ(ಕೊನೆ ಕೊಯ್ಲು), ವಾಸುದೇವ ಕೊಂಡ್ಲಿ(ರಿಕ್ಷಾ ಚಾಲನೆ), ಸಾವಿತ್ರಿ ಅವಧಾನಿ(ಯೋಗ), ಪರಮೇಶ್ವರ ಕಾನಳ್ಳಿ(ಜಾನಪದ), ಮಾಧವ ಎಂ. ನಾಯ್ಕ(ದೈಹಿಕ ಶಿಕ್ಷಣ), ಸುದರ್ಶನ ಪಿಳ್ಳೆ(ಉತ್ತಮ ಗುತ್ತಿಗೆದಾರ) ರಜತ್ ಹೆಗಡೆ(ಕಲೆ) ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌