ನರಗುಂದ: ಪ್ರೊ. ಬಿ. ಕೃಷ್ಣಪ್ಪವರು ದಲಿತ ಸಂಘಟನೆ ಕಟ್ಟುವುದರ ಮೂಲಕ ಹಿಂದುಳಿದ ಸಮಾಜದ ಏಳಿಗೆಗಾಗಿ ಹೋರಾಟ ಮಾಡಿದ ನಾಯಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಮಾದಿಗ ಸೇನೆಯ ರಾಜ್ಯಾಧ್ಯಕ್ಷ ಡಾ. ಮುತ್ತು ಸುರಕೋಡ ತಿಳಿಸಿದರು.
ಒಕ್ಕೂಟ ಸಂಚಾಲಕ ದತ್ತಾತ್ರೆಯ ಜೋಗಣ್ಣವರ ಮಾತನಾಡಿ, ಜೂ. 13ರಂದು ಗದಗ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಎಲ್ಲ ಜಾತಿ ವರ್ಗದ ಎಸ್ಎಸ್‌ಎಲ್‌ಸಿ, ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ ಹೆಸರು ದಾಖಲಿಸಬೇಕು ಎಂದು ಮನವಿ ಮಾಡಿದರು.
ಅಂಗನವಾಡಿ ಕಾರ್ಯಕರ್ತೆ ಶಾರದಾ ಹಳೇಮನಿ ದಲಿತ ಸಂಘಟನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನವೀನ ಜೋಗಣ್ಣವರ, ಬಸು ದಂಡಾಪುರ, ನೀಲಗಂಗಾ ಮಾದರ, ಬಸಮ್ಮ ಗುರಿಕಾರ, ಸುಶೀಲಾ ನಾಗರಳ್ಳಿ, ಅನಸೂಯಾ ಮಾದರ, ಫಕೀರವ್ವ ಜೋಗಣ್ಣವರ, ಸುಮಿತ್ರಾ ತಳವಾರ, ಭಾರತಿ ಮಾದರ, ಮಹಾಂತೇಶ ಪೂಜಾರ, ವಿಕ್ರಮ ಹೊನಕೇರಿ, ವೆಂಕಟೇಶ ಖಾನಪೇಠ, ಕಿರಣ ಜೋಗಣ್ಣವರ, ಸಂಜು ಜೋಗಣ್ಣವರ, ಕಾಶಿನಾಥ ಹನುಮಂತ ಶಿರಹಟ್ಟಿ, ರಾಹುಲ್ ಲಮಾಣಿ, ಬಸು ಜೋಗಣ್ಣವರ, ಗುರುನಾಥ ಕೆಂಗಾರಕರ ಸೇರದಂತೆ ಮುಂತಾದವರು ಇದ್ದರು. 14ರಂದು ಗುರುವಂದನಾ, ಸ್ನೇಹ ಸಮ್ಮಿಲನನರೇಗಲ್ಲ: ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ1988- 89ರಿಂದ 1995- 96ನೇ ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಅಧ್ಯಯನ ಮಾಡಿದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜೂ. 14ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಶಿವಾನಂದ ಮುಳಗುಂದ ತಿಳಿಸಿದರು.
ಪತ್ರಕರ್ತ ಅರುಣ ಕುಲಕರ್ಣಿ ಮಾತನಾಡಿದರು. ಮೈಲಾರಪ್ಪ ಗೋಡಿ, ಶಿವಾನಂದ ಪದ್ಮಸಾಲಿ, ಉಮೇಶ್ ಪಾದಗಟ್ಟಿ, ಶಿವಪ್ಪ ತಳವಾರ, ವಿರೂಪಾಕ್ಷಪ್ಪ ಸಂಗನಾಳ, ಪ್ರಸನ್ನಕುಮಾರ ಗಚ್ಚಿನಮಠ, ಬಸವರಾಜ ಕುಷ್ಟಗಿ ಹಾಗೂ ಮಾಬುಸಾಬ ಎಂ. ಇದ್ದರು.