ಕನ್ನಡಪ್ರಭ ವಾರ್ತೆ ಆಳಂದ
ಆಸ್ಪತ್ರೆಯನಿಟ್ಟು ಕೊಂಡಿದ್ದ ಮೂವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ, 10 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ಸುಶೀಲ ಕುಮಾರ ಅಂಬುರೆ ಹೇಳಿದ್ದಾರೆ.
ಹೊರಗಿನ ಕೆಲ ವ್ಯಕ್ತಿಗಳ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ.ಟಿಎಚ್‍ಒ ಕ್ರಮದ ಹಿನ್ನೆಲೆ ಪಟ್ಟಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ (ಟಿಎಚ್‍ಒ) ನೇತೃತ್ವದಲ್ಲಿ ಕೆಲವು ದಿನಗಳಲ್ಲಿ ನಡೆದಿರುವ ಆರ್‌ಎಂಪಿ ವೈದ್ಯರ ವಿರುದ್ಧದ ದಾಳಿ ಭಾರಿ ಚರ್ಚೆಗೆ ಕಾರಣವಾಗಿದೆ.
ವೃತ್ತಿ ಬಿಟ್ಟ ವೈದ್ಯರೊಂದಿಗೆ ಏಕೆ ಸಂವಾದ?: ಟಿಎಚ್‍ಒ ಅವರು ಇತ್ತೀಚೆಗೆ 62ವರ್ಷ ವಯಸ್ಸಿನ ನಿವೃತ್ತ ಆರ್‌ಎಂಪಿಗೆ ಕರೆ ಮಾಡಿ, “ನೀನು ಇನ್ನೂ ಅನಧಿಕೃತ ವೈದ್ಯಕೀಯ ಸೇವೆ ನೀಡುತ್ತೀಯಾ?” ಎಂದು ಪ್ರಶ್ನಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ತಕ್ಷಣವೇ ಆ ವೈದ್ಯರು, “ಇತ್ತೀಚೆಗೆ ವೈದ್ಯಕೀಯ ಸೇವೆ ಬಿಟ್ಟು ಹೊಲದ ಕೆಲಸದಲ್ಲಿ ತೊಡಗಿದ್ದೇನೆ” ಎಂದು ಉತ್ತರಿಸಿದರಂತೆ, ಟಿಎಚ್‍ಒ ಅವರು, “ಅದನ್ನು ಲಿಖಿತವಾಗಿ ನೀಡು” ಎಂದು ಕೇಳಿದ್ದರೆನ್ನಲಾಗಿದೆ. ನಂತರ ಮತ್ತೆ ಅವರಿಂದ ಸಂಪರ್ಕವಾಗಿಲ್ಲವೆಂದು ಹೆಸರು ಬಳಸಲಿಚ್ಚಿಸಿದ ಆರ್‌ಎಂಪಿ ತಿಳಿಸಿದ್ದಾರೆ.
ಮೂವರು ನಕಲಿ ವೈದ್ಯರ ಮೇಲೆ ಎಫ್‍ಐಆರ್: ಕಲಬುರಗಿ ವ್ಯಕ್ತಿಯೊಬ್ಬರು ದೂರು ನೀಡಿದರ ಆಧಾರದ ಮೇಲೆ ಮೂವರು ನಕಲಿ ಆಸ್ಪತ್ರೆಗಳ ವ್ಯಕ್ತಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇದಕ್ಕೆ ಹೊರತಾಗಿ ಆಸ್ಪತ್ರೆಯ ಪರವಾನಿಗೆ ವೈದ್ಯರಿಗೆ ಅವ್ಯವಸ್ಥೆ ಕಂಡು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಇಬ್ಬರಿಗೆ ನೋಟಿಸ್ ನೀಡಲಾಗಿದೆ.----------
ಇನ್ನೂ 8-10ಜನರ ನಕಲಿ ವೈದ್ಯರ ಪಟ್ಟಿ ಇದೆ. ಅಲ್ಲದೆ ಇಂಥ ಪ್ರಕರಣಗಳ ಬಗ್ಗೆ ಸಾರ್ವಜನಿಕರು ದೂರು ಕೊಟ್ಟರೆ ಉಳಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ದಿನಕ್ಕೆ ಒಂದೂ ಅಥವಾ ಎರಡನ್ನೂ ಮಾತ್ರ ಪರಿಶೀಲಿಸಬಹುದಾಗಿದೆ.-ಸುಶೀಲ್ ಕುಮಾರ ಅಂಬುರೆ, ತಾಲೂಕು ಆರೋಗ್ಯಾಧಿಕಾರಿಗಳು ಆಳಂದ