ಶಾಲಾ ಪಠ್ಯಗಳಲ್ಲಿ ಜಾನಪದ ವಿಷಯ ಸೇರಿಸಬೇಕು

KannadaprabhaNewsNetwork |  
Published : Aug 12, 2025, 12:30 AM IST
11ಕೆಆರ್ ಎಂಎನ್ 3.ಜೆಪಿಜಿನಗರದ ಹೊರ ವಲಯದ ಜಾನಪದ ಲೋಕದಲ್ಲಿ  ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ಆಯೋಸಿರುವ ಲೋಕಸಿರಿ ತಿಂಗಳ ಅತಿಥಿ - 108ರ ಕಾರ್ಯಕ್ರಮದಲ್ಲಿ ಕಲಾವಿದ ಶಿವಣ್ಣ ಮತ್ತು ತಂಡದವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ಶಾಲಾ ಪಠ್ಯಗಳಲ್ಲಿ ಜಾನಪದ ವಿಷಯವನ್ನು ಸೇರಿಸಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಲಾವಿದರಿಂದ ಜಾನಪದ ಕಲೆಗಳ ಕುರಿತು ತರಬೇತಿ ಕೊಡಿಸಬೇಕು. ಇದರಿಂದ ಜಾನಪದ ಕಲೆಗಳು ಉಳಿದು ಬೆಳೆಯಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್ ಸಲಹೆ ನೀಡಿದರು.

ರಾಮನಗರ: ಶಾಲಾ ಪಠ್ಯಗಳಲ್ಲಿ ಜಾನಪದ ವಿಷಯವನ್ನು ಸೇರಿಸಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಲಾವಿದರಿಂದ ಜಾನಪದ ಕಲೆಗಳ ಕುರಿತು ತರಬೇತಿ ಕೊಡಿಸಬೇಕು. ಇದರಿಂದ ಜಾನಪದ ಕಲೆಗಳು ಉಳಿದು ಬೆಳೆಯಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್ ಸಲಹೆ ನೀಡಿದರು.

ನಗರದ ಹೊರ ವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ಆಯೋಸಿರುವ ಲೋಕಸಿರಿ ತಿಂಗಳ ಅತಿಥಿ-108ರ ಕಾರ್ಯಕ್ರಮದಲ್ಲಿ ರಾಮನಗರ ತಾಲೂಕು ಹನುಮಂತೇಗೌಡನದೊಡ್ಡಿಯ ಮಾದೇಶ್ವರನ ಗುಡ್ಡರಾದ ತಂಬೂರಿ ಕಲಾವಿದ ಶಿವಣ್ಣ ಅವರನ್ನು ಗೌರವಿಸಿ ಮಾತನಾಡಿದರು.

ಜಾನಪದ ಕಲೆಗಳು ಹಿರಿಯರ ಕೊಡುಗೆ, ಅವು ಶಾಶ್ವತ. ಶಾಲಾ ಮಕ್ಕಳಿಗೆ ತರಬೇತಿ ಕೊಡುವುದರಿಂದ ಜಾನಪದ ಕಲೆಗಳು ಮತ್ತಷ್ಟು ವಿಸ್ತರಿಸಲು ಸಾಧ್ಯವಾಗಲಿದೆ. ಸರ್ಕಾರಗಳು ಜಾನಪದ ವಿಷಯವನ್ನು ಶಾಲಾ ಪಠ್ಯಗಳಲ್ಲಿ ಸೇರ್ಪಡೆ ಮಾಡುವ ಕುರಿತು ಚಿಂತನೆ ಮಾಡಬೇಕು ಎಂದರು.

ಜಾನಪದ ಕಲೆ, ಸಾಹಿತ್ಯ ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಅದನ್ನು ಪೋಷಿಸುತ್ತಿರುವ ಜಾನಪದ ಲೋಕ ನಾಡಿಗೆ ಹೆಮ್ಮೆ, ಜಾನಪದ ಕಲೆಗಳ ತವರು. ಹಿಂದೆ ಲೋಕಸಿರಿ ಕಾರ್ಯಕ್ರಮ ಆರಂಭಕ್ಕೆ ಪತ್ರಕರ್ತರೆ ಕಾರಣರಾಗಿದ್ದು ಎಂದು ಸೂರ್ಯ ಪ್ರಕಾಶ್ ನೆನಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ , ಇಂತಹ ಲೋಕವನ್ನು ಕಟ್ಟಲು ನಾಗೇಗೌಡರು ಅಹರ್ನಿಶಿ ದುಡಿದಿದ್ದಾರೆ. ನೂರಾರು ಗಂಟೆಗಳು ಕೇಳುವಷ್ಟು ನೋಡುವಷ್ಟು ಆಡಿಯೋ, ವಿಡಿಯೋ ದಾಖಲೀಕರಣ ಮಾಡಿದ್ದಾರೆ. ಹೊಸ ಪೀಳಿಗೆಗೆ ಜಾನಪದವನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಟಿ.ಶಿವರಾಜು ಮಾತನಾಡಿ, ಜಾನಪದ ಲೋಕದ ಆಕರ್ಷಕ ಕೇಂದ್ರ ಬಿಂದುಗಳೇ ಕಲಾವಿದರು. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂದು ಹೇಳಿದರು.

ಅನೇಕಲ್ ಬಳಿಯ ಬೆಂಗಳೂರು ಕಾಲೇಜ್ ಆಫ್ ಎಜುಕೇಷನ್‌ನ ಪ್ರಾಂಶುಪಾಲರಾದ ಡಾ.ಸಿ.ಎಸ್.ಸುಬ್ರಮಣಿ ಮಾತನಾಡಿದರು.

ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಕಲಾವಿದರಾದ ಶಿವಣ್ಣ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡರು ಮತ್ತು ಕಲೆಯ ಆಸಕ್ತಿ ಕಲಿತ ಬಗೆಯನ್ನು ತಿಳಿಸಿದರು. ಮಂಟೇಸ್ವಾಮಿಯ ಕುರಿತ ಬಸವಣ್ಣನ ಸಾಲು, ಮಲೈಮಹದೇಶ್ವರ, ನಂಜುಂಡೇಶ್ವರ, ಬೆಳ್ಳಿಬೆಟ್ಟದ ವಡೆಯ ಬಿಳಿಗಿರಿರಂಗನಾಥ, ಬೇವಿನಹಟ್ಟಿ ಕಾಳಮ್ಮ, ನೀಲವೇಣಿ ಪವಾಡ, ಗಂಗೆ-ಗೌರಿ ಕಥೆಗಳನ್ನು ಹಾಡಿದರು. ತಂಡದ ಸದಸ್ಯರಾದ ಕೆ.ಎಂ.ಸುರೇಶ್ , ಪ್ರತಾಪ್, ಪತ್ನಿ ಗೌರಮ್ಮ ತಾಳ ಮತ್ತು ದನಿ ಗೂಡಿಸಿದರು. ಕ್ಯೂರೇಟರ್ ಡಾ.ಯು.ಎಂ.ರವಿ ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು,

ಪರಿಷತ್ತಿನ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾದ ಸು.ತಾ.ರಾಮೇಗೌಡ, ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ರಂಗ ಸಹಾಯಕ ಪ್ರದೀಪ್ , ಬೆಂಗಳೂರು ಕಾಲೇಜ್ ಆಫ್ ಎಜುಕೇಷನ್ ಪ್ರಶಿಕ್ಷಣಾರ್ತಿಗಳು, ಡಿಪ್ಲೊಮಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

11ಕೆಆರ್ ಎಂಎನ್ 3.ಜೆಪಿಜಿ

ನಗರದ ಹೊರ ವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ಆಯೋಸಿರುವ ಲೋಕಸಿರಿ ತಿಂಗಳ ಅತಿಥಿ - 108ರ ಕಾರ್ಯಕ್ರಮದಲ್ಲಿ ಕಲಾವಿದ ಶಿವಣ್ಣ ಮತ್ತು ತಂಡದವರನ್ನು ಅಭಿನಂದಿಸಲಾಯಿತು.

----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ