- ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ
ಮಹಾತ್ಮ ಗಾಂಧಿಯವರು ಮೌಲ್ಯ ಪ್ರತಿಪಾದನೆ ಅನುಯಾಯಿ. ಅಹಿಂಸೆ ಪರ ಹಾಗೂ ಸ್ವದೇಶಿ ಅಭಿಯಾನಕ್ಕೆ ಮುನ್ನುಡಿ ಬರೆದವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ನಗರದ ರತ್ನಗಿರಿ ಬೋರಿಯಲ್ಲಿ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಪ್ರಯುಕ್ತ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಗಾಂಧೀಜಿ, ಶಾಸ್ತ್ರಿ ಹಾಗೂ ಸ್ವಯಂಸೇವಕ ಸಂಘ ಶತಾಬ್ದಿ ಈ ಮೂರು ವಿಶೇಷ ಆಚರಣೆಗಳು ವಿಜಯ ದಶಮಿ ದಿನ ಕೂಡಿ ಬಂದಿರುವುದು ಸಂತಸದ ಸಂಗತಿ ಎಂದರು.ಗಾಂಧಿ ಎಂದರೆ ಸತ್ಯದ ಹಾದಿಯಲ್ಲಿ ನಡೆದವರು ಸ್ವಭಾಷಾ, ಸ್ವದೇಶಿ ಮಹತ್ವ ಕೊಟ್ಟು ಭಾರತೀಯರ ಪಾಲಿಗೆ ಶ್ರೇಷ್ಠ ರಾದವರು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಶತಾಬ್ದಿ ಆಚರಿಸುತ್ತಿದೆ. ರಾಷ್ಟ್ರಭಕ್ತಿ, ಬ್ರಿಟಿಷ್ ಆಳ್ವಿಕೆ ವಿರುದ್ಧ ಹೋರಾಡಲಿ ಕೇಶವಜೀ ಅವರು ಸಂಘ ಸ್ಥಾಪಿಸಿ ಬ್ರಿಟಿಷ್ ದಾಸ್ಯದಿಂದ ನೊಂದವರನ್ನು ಹೊರತರಲು ಶ್ರಮಿಸಿದವರು ಎಂದರು.
ಇತ್ತೀಚಿನ ದಿನಗಳಲ್ಲಿ ಗಾಂಧಿ ಹೆಸರನ್ನು ಇಟ್ಟುಕೊಂಡ ವ್ಯಕ್ತಿಗಳು ಗಾಂಧಿ ಸದ್ಗುಣಗಳನ್ನು ಅಳವಡಿಸಿಕೊಂಡಿಲ್ಲ ಇದರ ಬದಲಾಗಿ ರಾಷ್ಟ್ರ ವಿರೋಧಿ ಹಾಗೂ ಸಂವಿಧಾನ ವಿರೋಧಿ ಮಾತುಗಳನ್ನು ಆಡುತ್ತ ಗಾಂಧಿ ಹೆಸರಿಗೆ ಮಸಿ ಬಳಿಯುವಂತ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರದ ಅಧ್ಯಕ್ಷ ಪುಷ್ಪರಾಜ್, ನಗರಸಭೆ ಉಪಾಧ್ಯಕ್ಷ ಲಲಿತಾ ರವಿ ನಾಯಕ್, ವಕ್ತರ ಸಿಎಚ್ ಲೋಕೇಶ್ ಮುಖಂಡರಾದ ನಾಗರಾಜ್ ಪ್ರದೀಪ್ ಕೌಶಿಕ್ ಜಯಪ್ರಕಾಶ್ ಮತ್ತಿತರು ಇದ್ದರು.