ಸತ್ಯ, ವಾಸ್ತವ, ವಿಜ್ಞಾನದ ತಳಹದಿಯಲ್ಲಿ ವಚನ ಸಂವಿಧಾನ ರಚನೆ: ಮನಸುಳಿ ಮೋಹನ್ ಕುಮಾರ್

KannadaprabhaNewsNetwork |  
Published : Aug 17, 2025, 01:35 AM IST
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ಸತ್ಯ, ವಾಸ್ತವ ಮತ್ತು ವಿಜ್ಞಾನ ಈ ಮೂರರ ತಳಹದಿಯಲ್ಲಿ ವಚನ ಸಂವಿಧಾನ ರಚನೆ ಆಗಿವೆ ಎಂದು ಚಿಂತಕರು ಮತ್ತು ಪತ್ರಕರ್ತರು ಮನಸುಳಿ ಮೋಹನ್ ಕುಮಾರ್ ಹೇಳಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರಾವಣ ಸಾಹಿತ್ಯ ಸಂಭ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸತ್ಯ, ವಾಸ್ತವ ಮತ್ತು ವಿಜ್ಞಾನ ಈ ಮೂರರ ತಳಹದಿಯಲ್ಲಿ ವಚನ ಸಂವಿಧಾನ ರಚನೆ ಆಗಿವೆ ಎಂದು ಚಿಂತಕರು ಮತ್ತು ಪತ್ರಕರ್ತರು ಮನಸುಳಿ ಮೋಹನ್ ಕುಮಾರ್ ಹೇಳಿದ್ದಾರೆ.

ತಾಲೂಕು ಕಸಾಪದಿಂದ ಪಟ್ಟಣದ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ದಲ್ಲಿ ಬಸವಣ್ಣನ ವಚನಗಳಲ್ಲಿ ವೈಚಾರಿಕ ಚಿಂತನೆ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ನೈತಿಕತೆ, ಆರ್ಥಿಕತೆ, ಸಾಮಾಜಿಕತೆ, ಧಾರ್ಮಿಕತೆ, ರಾಜನೀತಿ, ಆಡಳಿತ, ವ್ಯಕ್ತಿಗತ ಬದುಕು ಹೀಗೆ ಎಲ್ಲದಕ್ಕೂ ಸತ್ಯ ವಾಸ್ತವದ ಜೊತೆಗೆ ವೈಜ್ಞಾನಿಕತೆ ಮೆರುಗು ಕೊಟ್ಟಿದ್ದು ಬಸವಾದಿ ಶರಣರು, ವೈಜ್ಞಾನಿಕ ಭಾವ, ಸ್ವಭಾವ ಮತ್ತು ಪ್ರಭಾವ ಇವತ್ತಿಗೆ ತುರ್ತಾಗಿ ಬೇಕಿದೆ. ಅಮೇರಿಕಾದ ಮಗ್ಗಲಲ್ಲಿ ಇರುವ ಕ್ಯೂಬಾ ಒಂದು ಪುಟ್ಟರಾಷ್ಟ್ರ, ಈ ರಾಷ್ಟ್ರದಲ್ಲಿ 99.8 ರಷ್ಟು‌ ಜನ ವಿದ್ಯಾವಂತರಿದ್ದಾರೆ. ಇಂದು ಕ್ಯೂಬಾ ಜಗತ್ತಿನ ವೈದ್ಯಕೀಯ ತರಬೇತಿ ರಾಜಧಾನಿ ಎಂದು ಕರೆಯಲ್ಪಡುತ್ತವೆ. ಅಲ್ಲಿಯ ಶಿಶು ಮರಣಾ ಕ್ರಮಾಂಕ ಅಮೆರಿಕಾಕ್ಕಿಂತಲೂ ಕಡಿಮೆ. ವಿಶ್ವದಲ್ಲೇ ಸರಾಸರಿ ಸಾವಿರಕ್ಕೆ ಅತಿ ಹೆಚ್ಚು ವೈದ್ಯರಿರುವ ದೇಶಗಳಲ್ಲಿ ಕ್ಯೂಬಾ ಒಂದು. ಇಲ್ಲಿ ಶತಾಯುಷಿಗಳ ಸಂಖ್ಯೆ ಹೆಚ್ಚು. (ಕಾಯಕ) ಉದ್ಯೋಗ ಪೂರ್ಣ ಮತ್ತು ಆರೋಗ್ಯಪೂರ್ಣ ದೇಶವಿದು ಎಂದು ಹೇಳಿದರು.

ಇದು ಸಾಧ್ಯ ಆಗಿರುವುದು ಬಸವಣ್ಣನವರ ವೈಜ್ಞಾನಿಕ ಚಿಂತನೆಗಳನ್ನೇ ಇಲ್ಲಿ ಯೋಚಿಸಿರುವ ಸಾಧ್ಯತೆ ದಟ್ಟವಾಗಿದೆ, ಕ್ಯೂಬಾ ದಲ್ಲಿ ಮೌಢ್ಯಕ್ಕಿಂತ ಮೌಲ್ಯದ ಕಡೆ ಇಡೀ ದೇಶವೇ ಸಾಮೂಹಿಕವಾಗಿ ಯೋಚಿಸಿದ ಫಲವಾಗಿ ಆ ದೇಶ ಇಂದಿನ ಬಲಿಷ್ಠ ಅಮೇರಿಕವನ್ನೇ ಎದುರು ಹಾಕಿಕೊಂಡು ಬದುಕಿದೆ ಮತ್ತು ಗೆದ್ದಿದೆ ಎಂಬುದು ಗಮನಾರ್ಹ. ಕ್ಯೂಬಾ ದೇಶದಲ್ಲಿ ''''''''ಕಾಯಕ ದಾಸೋಹ ಜಂಗಮ ಸೇವೆ ವೈಚಾರಿಕತೆ'''''''' ಒಟ್ಟಾಗಿವೆ. ಭಾರತದಲ್ಲಿ ಇಂತಹ ಚಿಂತನೆಗೆ ಮೌಢ್ಯಗಳು ಸದಾ ಅಡ್ಡಿ ಆಗುತ್ತಿರು ವುದು ಎದ್ದು ಕಾಣುತ್ತಿದೆ. ವೈಯಕ್ತಿಕ ಮತ್ತು ಸಾರ್ವಜನಿಕ ಬದುಕು ಯಶಸ್ವಿಯಾಗಲು ಬಸವಾದಿ ಶರಣರ ಚಿಂತನೆಗೆ ಒಳಗಾಗಲೇ ಬೇಕಿದೆ ಎಂದರು.ಒಂದು ಸಣ್ಣದಾದ ಕ್ಯೂಬಾ ದೇಶ ಇಡೀ ಅಮೇರಿಕ ಹತ್ತು ಅಧ್ಯಕ್ಷರ ಆಡಳಿತದ ವಿರುದ್ಧ ಹೋರಾಡಿ, ಗೆದ್ದಿದೆ. ವೈಚಾರಿಕತೆ ಯಿಂದ ಮಾತ್ರ ಏನಾದರು ಸಾಧ್ಯ ಎಂಬುದನ್ನು ಬಸವಾದಿ ಶರಣರು ಎಚ್ಚರಿಸಿದ್ದಾರೆ. ಯುವ ಪೀಳಿಗೆ ಬಸವಾದಿ ಶರಣರ ಪ್ರಜ್ಞೆ ಹಾದಿಯಲ್ಲೇ ಎಚ್ಚರಗೊಳ್ಳಬೇಕಿದೆ ಎಂದು ಹೇಳಿದರು.ಸಭೆಯಲ್ಲಿ ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡ ಶ್ರೀ ಭಗವಾನ್, ಚೇತನ್, ಸುನಿತ ಕಿರಣ್, ಲತಗೋಪಾಲಕೃಷ್ಣ, ವಿನುತ ಮಾತನಾಡಿದರು. ನವೀನ್ ಪೆನ್ನಯ್ಯ ಶಿಕ್ಷಕ ಶಂಕ್ರಪ್ಪ ಉಪಸ್ಥಿತರಿದ್ದರು.15ಕೆಟಿಆರ್.ಕೆ.12ಃ

ತರೀಕೆರೆಯಲ್ಲಿ ತಾಲೂಕು ಕಸಾಪದಿಂದ ನಡೆದ ಕಾರ್ಯಕ್ರಮದಲ್ಲಿ ಚಿಂತಕರು ಮತ್ತು ಪತ್ರಕರ್ತರು ಮನಸುಳಿ ಮೋಹನ್ ಕುಮಾರ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಸುನಿತ ಕಿರಣ್, ಲತಾ ಗೋಪಾಲಕೃಷ್ಣ ಮತ್ತಿತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!