ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಅನು ಮ್ಯೂಜಿಕ್ ಫೌಂಡೇಶನ್‌ನಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಮತ್ತು ಜಿಲ್ಲಾ ಘಟಕ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 9ನೇ ಸಂಸ್ಥಾಪನಾ ದಿನಾಚರಣೆಯನ್ನು ಜಾನಪದ ತ್ರಿಪದಿ ವಾಚಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಾ.ಎಸ್. ಬಾಲಾಜಿ, ಜಿಲ್ಲೆಯಲ್ಲಿ ಡಿ.ಎಂ. ಸಾವಕಾರ ಸಾರಥ್ಯದಲ್ಲಿ ಪರಿಷತ್ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದೆ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಹಾಗೂ ನಾಡಿನ ಜಾನಪದ ಕಲೆ ಸಂಸ್ಕೃತಿ ಉಳಿಸಲು ಮತ್ತು ಎಲೆಮರೆ ಕಾಯಿಯಂತಿರುವ ಜಾನಪದ ಕಲಾವಿದರನ್ನು ಉಳಿಸಿ ಬೆಳೆಸಲು ಪರಿಷತ್ ಸ್ಥಾಪಿಸಲಾಗಿದೆ ಎಂದು ಹೇಳಿದರು.ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ರಾಜ್ಯದಲ್ಲಿ ಮಾತ್ರವಲ್ಲ, ಗಡಿನಾಡಿನಲ್ಲಿ, ಹೊರ ರಾಜ್ಯಗಳಲ್ಲಿಯೂ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದ್ದಾರೆ. 50 ವರ್ಷ ಮೀರಿದ ಎಲೆಮರೆಯ ಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರ್ತಿಸಿ, ರಾಜ್ಯಮಟ್ಟದಲ್ಲಿ `ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸುತ್ತಿರುವರು ಎಂದು ಹೇಳಿದರು.
ರಂಗಕರ್ಮಿ ಎಚ್. ಎನ್. ಶೇಬನ್ನವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜನಪದ ಕಲೆ ಮತ್ತು ಸಾಹಿತ್ಯ ನಮ್ಮ ಉಸಿರಾಗಬೇಕು. ಕಲೆ ಉಳಿದರೆ ಕಲಾವಿದರು ಉಳಿಯಲು ಸಾಧ್ಯ. ನಿಜವಾದ ಕಲಾವಿದರಿಗೆ ಮಾಸಾಶನ ದೊರೆಯಬೇಕು. ಅರ್ಹ ಕಲಾವಿದರು ಮಧ್ಯವರ್ತಿಗಳನ್ನು ತಿರಸ್ಕರಿಸಿ, ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋಗಿ ಅರ್ಜಿ ಹಾಕಿ ಸೌಲಭ್ಯ ಪಡೆಯುವಂತೆ ಹೇಳಿದರು.
ವೇದಿಕೆ ಮೇಲೆ ಕಜಾಪ ತಾಲೂಕಾಧ್ಯಕ್ಷ ಎಸ್. ಬಿ. ಕಟಗಿ, ಪದಾಧಿಕಾರಿಗಳಾದ ವಿ. ಜಿ. ಪಾಟೀಲ, ಎಸ್. ಬಿ. ಯಾವಗಲ್ಮಠ, ಸಂಜಯ ನಡುವಿನಮನಿ, ನಾರಾಯಣ ಯಳ್ಳಿಗುತ್ತಿ, ಮುತ್ತು ಅರಕೇರಿ, ಗುರು ಹಿರೇಮಠ, ಪ್ರಶಾಂತ ಪ್ರಭುಕರ, ಮುತ್ತು ಮಾಚಕನೂರ ಮತ್ತಿತರಿದ್ದರು.