ಕನ್ನಡಪ್ರಭ ವಾರ್ತೆ ಸುತ್ತೂರು
ಒಂದು ಪ್ರದರ್ಶನದಲ್ಲಿ 30 ರಿಂದ 40 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ.
ಈ ಪ್ರದರ್ಶನದಲ್ಲಿ ಸೌರಮಂಡಲ ಹಾಗೂ ತಾರಾಮಂಡಲ ವೀಕ್ಷಣೆ, ಗ್ರಹಣದ ಪರಿಕಲ್ಪನೆ ಉಪಗ್ರಹ ಉಡಾವಣೆ, ಭೂಮಿ ಹಾಗೂ ನಕ್ಷತ್ರಗಳ ಜೀವನಚಕ್ರ, ಹವಾಮಾನ ಬದಲಾವಣೆ, ಬ್ಯ್ಲಾಕ್ ಹೋಲ್ಸ್ ಹಾಗೂ ಭೂಮಿಯ ಚಲನೆ ಮುಂತಾದವುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ ಬಾಹ್ಯಾಕಾಶದ ಬಗ್ಗೆ ಸಮಗ್ರ ಮಾಹಿತಿ ಪಡೆಯಬಹುದಾಗಿದೆ.ಮುಂದಿನ ದಿನಗಳಲ್ಲಿ ಎರಡೂ ಸಂಸ್ಥೆಗಳ ವತಿಯಿಂದ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳಲ್ಲಿ ತಾರಾಲಯ ಪ್ರದರ್ಶನಗಳನ್ನು ಮಕ್ಕಳ ಅನುಕೂಲಕ್ಕಾಗಿ ಉಚಿತವಾಗಿ ಏರ್ಪಡಿಸಲು ಉದ್ದೇಶಿಸಿದೆ.
ಈ ಕೇಂದ್ರದ ಒಳಾಂಗಣದಲ್ಲಿ 44 ವಿಜ್ಞಾನ ಮಾದರಿಗಳು ಹಾಗೂ ಹೊರಾಂಗಣದಲ್ಲಿ 16 ವಿಜ್ಞಾನ ಮಾದರಿಗಳನ್ನು ವೈಜ್ಞಾನಿಕ ಪರಿಕಲ್ಪನೆಯಡಿ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಹ್ಯಾಂಡ್ಸ್ ಆನ್ ಟ್ರೈನಿಂಗ್ ಮೂಲಕ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಪಠ್ಯಪುಸ್ತಕದಿಂದ ತರಗತಿಗಳಲ್ಲಿ ಕಲಿಯುವ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶವನ್ನು ಈ ಕೇಂದ್ರದಲ್ಲಿ ಕಲ್ಪಿಸಿದೆ. ಇದುವರೆವಿಗೆ ವಿವಿಧ ಫ್ರೌಢಶಾಲೆಗಳ ಎರಡು ಸಾವಿರಕ್ಕೂ ಮೀರಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ವೈ.ಎಂ. ಸಾಸಲಾರಾಧ್ಯ ಅವರನ್ನು ಮೊ. 9686677234 ಸಂಪರ್ಕಿಸುವುದು.