ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಐಗಳಿ ಗ್ರಾಮದ ಅಪ್ಪಯ್ಯಸ್ವಾಮಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ 1995-96ರ ಬ್ಯಾಚ್‌ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮಗೆ ಜನ್ಮ ನೀಡಿದ ತಂದೆ ತಾಯಿ ಮತ್ತು ಜ್ಞಾನಾರ್ಜನೆ ಮಾಡಿಸಿ, ಒಳ್ಳೆಯ ಸಂಸ್ಕಾರ ಕಳಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಲಾಗದು. ಪ್ರತಿಯೊಬ್ಬರ ಬದುಕಿನಲ್ಲಿ ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಅವರ ಮಾರ್ಗದರ್ಶನದಿಂದಲೇ ನಾವು ಇಂದು ಉನ್ನತ ಹುದ್ದೆಯಲ್ಲಿದ್ದೇವೆ. ನಮಗೆ ಪಾಠ ಹೇಳಿದ ಶಿಕ್ಷಕರಿಗೆ ಮತ್ತು ಕಲಿತ ಶಾಲೆಗೆ ಯಾವತ್ತು ಚಿರಋಣಿಯಾಗಿರುವುದಾಗಿ ತಿಳಿಸಿದರು.
ನಿವೃತ್ತ ಶಿಕ್ಷಕ ಪಿ.ವೈ.ದೇವಣಗಾವಿ ಮಾತನಾಡಿ, ಪ್ರತಿಯೊಬ್ಬರೂ ಗುರುಋಣ ಮತ್ತು ಪಿತೃಋಣಗಳನ್ನು ತೀರಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಐಗಳಿ ಗ್ರಾಮದ ಶಿಷ್ಯ ಬಳಗ 30 ವರ್ಷಗಳ ನಂತರ ಒಂದೆಡೆ ಸೇರಿ ಗುರುವಂದನೆ ಸಲ್ಲಿಸುತ್ತಿರುವುದು ಮರೆಯಲು ಸಾಧ್ಯವಿಲ್ಲ. ಈ ಕ್ಷಣ ನಮಗೆ ಖುಷಿ ತಂದಿರುವುದಲ್ಲದೆ ಗ್ರಾಮದ ಈ ಸುಂದರ ಪರಿಸರದಲ್ಲಿ ಮತ್ತು ಹಿರಿಯರ ಒಡನಾಟ ನೆನಪಿಗೆ ಬರುತ್ತದೆ ಎಂದರು.ನಿವೃತ್ತ ಶಿಕ್ಷಕಿ ಎಸ್.ವೈ.ಸರಸಂಬಿ ಮಾತನಾಡಿ, ಮೂವತ್ತು ವರ್ಷದ ಹಿಂದೆ ನಮ್ಮ ಪಾಠ ಕೇಳಿದ ಮಕ್ಕಳು ಇಂದು ಅನೇಕ ಉನ್ನತ ಸ್ಥಾನಗಳಲ್ಲಿದ್ದಾರೆ ಎಂಬುದು ನಮ್ಮೆಲ್ಲರಿಗೆ ಹೆಮ್ಮೆ. ಅವರೆಲ್ಲರೂ ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು, ಗುರುವಂದನೆ ಸಲ್ಲಿಸಿರುವುದು ಬದುಕಿನ ಸುವರ್ಣ ಗಳಿಗೆ ಎಂದು ಶ್ಲಾಘಿಸಿದರು.ಸಂಸ್ಥೆಯ ಅಧ್ಯಕ್ಷ ಡಾ.ಜಿ.ಎ.ಹಿರೇಮಠ, ಪ್ರಾಚಾರ್ಯ ಆರ್.ಎಂ.ರಾಣಗಟ್ಟಿ ಹಾಗೂ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್.ಎಂ.ಜನಗೌಡ ಮಾತನಾಡಿದರು. ತೆಲಸಂಗ ಹಿರೇಮಠದ ವೀರೇಶ ದೇವರು ಆಶೀರ್ವಚನ ನೀಡಿದರು. ಅಗಲಿದ ಗುರುಗಳಿಗೆ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು. ಈ ವೇಳೆ ಸಹಪಾಠಿ ಸ್ನೇಹ ಬಳಗದ ಸಂಗಪ್ಪ ಕುಂಬಾರ, ಹಜರತ್ ಲವಂಗಿ, ಚಂದ್ರಶೇಖರ ಮುದುಗೌಡರ, ಶಬ್ಬೀರ್ ಮುಜಾವರ, ಭಾರತಿ ನೇಮಗೌಡ, ಸುಜಾತಾ ತೆಲಸಂಗ, ರಾಜಕುಮಾರ ವಾಘಮೋರೆ, ಅರ್ಜುನ ಬೋಸ್ಲೆ, ಬಸಯ್ಯ ಹಿರೇಮಠ ಸೇರಿ ಇತರರು ಉಪಸ್ಥಿತರಿದ್ದರು. ಸಂಗಪ್ಪ ಕುಂಬಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಕಂಬಾಗಿ ನಿರೂಪಿಸಿದರು. ಜಿ.ಬಿ ಪಾಟೀಲ ವಂದಿಸಿದರು.ಗುರುವಂದನೆ ಸಮರ್ಪಣೆ:
ನಿವೃತ್ತ ಶಿಕ್ಷಕರಾದ ಪಿ.ವೈ.ದೇವಣಗಾವಿ, ಎ.ಎಸ್.ಶೂರ್ಪಾಲಿ, ಬಿ.ವಿ.ಕನಸೆ, ಎಸ್.ಸಿ.ಹಡಪದ, ಸುರೇಶ್ ಕುಲಕರ್ಣಿ, ಎಸ್.ಎಸ್.ಸರಸಂಬಿ, ಟಿ.ಜಿ.ಮುಜಾವರ, ಎಸ್.ವೈ.ಸರಸಂಬಿ, ಎಸ್.ಎಸ್.ಹದಿಮೂರು, ಎಸ್.ಆರ್.ಕುಂಬಾರ, ಎಂ.ಎಂ.ಎಲಿಗಾರ, ಎಸ್.ಬಿ.ಕೆಂಪೇಪಾಟೀಲ, ಆರ್.ಆರ್.ಅಲಕುಂಟಿ, ನಾನಾಸಾಬ ಭಜಂತ್ರಿ, ಎ.ಬಿ.ಕುಟಕೋಳಿ, ಎಂ.ಕೆ.ಐಗಳಿ, ಎ.ಡಿ.ಮಾಳಿ, ಎಸ್.ಬಿ.ಮಠ, ಎಸ್.ಜಿ.ಬಿರಾದಾರ, ಮುಖ್ಯೋಪಾಧ್ಯಾಯ ಎಸ್.ಎಂ.ಜನಗೌಡ ಸೇರಿ ಶಿಕ್ಷಕರಿಗೆ ಗುರುವಂದನೆ ಸಮರ್ಪಿಸಲಾಯಿತು