ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಊಟಿ ರಸ್ತೆಯಲ್ಲಿರುವ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಡಿ. 16 ರಿಂದ 18ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಕೃಷ್ಣಮೂರ್ತಿಪುರಂನ ದತ್ತ ಸೇನೆ ಮತ್ತು ಉಪನ್ಯಾಸ ಮಾಲಿಕೆ ಸಮಿತಿಯಿಂದ ಬೆಂಗಳೂರಿನ ಪ್ರವಚನ ಚಕ್ರವರ್ತಿ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ಉಪನಿಷತ್ ದರ್ಶನ ಎಂಬ ವಿಷಯ ಕುರಿತು ಪ್ರವಚನ ಮಾಲಿಕೆ ಆಯೋಜಿಸಿದೆ.ಡಿ. 16ರ ಸಂಜೆ 5.30ಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ಸ್ವಾಮಿಗಳಾದ ದತ್ತ ವಿಜಯಾನಂದ ತೀರ್ಥ ಶ್ರೀಗಳು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಮುಖ್ಯಅತಿಥಿಗಳಾಗಿ ಮೇಲುಕೋಟೆ ವಂಗೀಪುರ ಮಠದ ಶ್ರೀ ಇಳ್ಳೈ ಆಳ್ವಾರ್ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಮಾಜಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಉದ್ಯಮಿ ಮಹೇಶ್ ಶೆಣೈ, ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್, ಹಿರಿಯ ಸಮಾಜ ಸೇವಕ ಡಾ.ಕೆ. ರಘುರಾಮ್ ವಾಜಪೇಯಿ, ಸಪ್ತ ಋಷಿ ಸೌಹಾರ್ದ ಸೊಸೈಟಿಯ ನಿರ್ದೇಶಕ ನಾಗಚಂದ್ರ, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್, ಉದ್ಯಮಿ ರವಿಶಾಸ್ತ್ರ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ಲಕ್ಷ್ಮೀಪುರಂ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ರವಿಶಂಕರ್, ಕಾಂಗ್ರೆಸ್ ಮುಖಂಡ ಜೈರಾಜ್, ಹರಿದಾಸ ಸಮಿತಿ ಅಧ್ಯಕ್ಷ ರವಿಕುಮಾರ್, ಗಿರೀಶ್, ಒಂಟಿಕೊಪ್ಪಲ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟ್ರಸ್ಟಿ ಪುಟ್ಟಸ್ವಾಮಿ ಭಾಗವಹಿಸುವರು.ಡಿ. 18ರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ದತ್ತಾವಧೂತರ ಅವತಾರ ಎಂಬ ವಿಷಯ ಕುರಿತು ಗುರುದ್ವಯರ ಸನ್ನಿಧಿಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಬೆಂಗಳೂರಿನ ವಿಪ್ರ ಮುಖಂಡ ರಘುನಾಥ, ಜ್ಯೋತಿ ಸಮೂಹ ಸಂಸ್ಥೆಯ ನರಸಿಂಹನ್, ವಿಪ್ರ ಮುಖಂಡ ಲಕ್ಷ್ಮೀಕಾಂತ್, ಉದ್ಯಮಿ ರಾಜಶೇಖರ್, ಕಾಂಗ್ರೆಸ್ ಮುಖಂಡ ಎಂ.ಎನ್. ನವೀನ್ ಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ. ನಟರಾಜ ಜೋಯಿಸ್, ವಿಪ್ರ ವಕೀಲ ಪರಿಷತ್ ಅಧ್ಯಕ್ಷ ರವೀಂದ್ರ ಆಗಮಿಸಲಿದ್ದಾರೆ.
ಭಕ್ತಾದಿಗಳು ಮೂರು ದಿನದ ಕಾರ್ಯಕ್ರಮಗಳಿಗೆ ಆಗಮಿಸಿ ಕೃತಾರ್ಥರಾಗಬೇಕೆಂದು ದತ್ತ ಸೇನೆ ಅಧ್ಯಕ್ಷ ಆರ್.ಎಸ್. ಸತ್ಯನಾರಾಯಣ ತಿಳಿಸಿದ್ದಾರೆ. ಮಾಹಿತಿಗೆ ಮೊ. 9686832244 ಸಂಪರ್ಕಿಸಬಹುದು.