ಸಂಗೀತ ಕಲಿಯಲು ಕರೋಕೆ ಸರಳ ಮಾಧ್ಯಮ: ಬಿ.ಆರ್.ನಟರಾಜ ಜೋಯಿಸ್

KannadaprabhaNewsNetwork |  
Published : Dec 16, 2024, 12:48 AM IST
32 | Kannada Prabha

ಸಾರಾಂಶ

ಪ್ರತಿಯೊಬ್ಬರೂ ಸಂಗೀತ ಪ್ರಿಯನಾಗಿರುತ್ತಾರೆ. ಆದರೆ, ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಸಮಯವೂ ಸಿಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋಕೆ ಎಲ್ಲಾ ಅನುಕೂಲಕರ ಮಾಧ್ಯಮವಾಗಿ ಹೊರಹೊಮ್ಮಿದೆ. ಇತ್ತೀಚಿನ ದಿನಗಳಲ್ಲಿ ಕರೋಕೆ ಹೆಚ್ಚು ಪ್ರಚಲಿತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಂಗೀತ ಕಲಿಯಲು ಕರೋಕೆ ಅತಿ ಸರಳ ಮಾಧ್ಯಮವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಸ್ವರ ಸಂಭ್ರಮ ಕರೋಕೆ ಗಾಯನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಂಗೀತ ಪ್ರಿಯನಾಗಿರುತ್ತಾರೆ. ಆದರೆ, ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಸಮಯವೂ ಸಿಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋಕೆ ಎಲ್ಲಾ ಅನುಕೂಲಕರ ಮಾಧ್ಯಮವಾಗಿ ಹೊರಹೊಮ್ಮಿದೆ. ಇತ್ತೀಚಿನ ದಿನಗಳಲ್ಲಿ ಕರೋಕೆ ಹೆಚ್ಚು ಪ್ರಚಲಿತವಾಗುತ್ತಿದೆ. ವೃತ್ತಿಪರರು, ಹವ್ಯಾಸಿ ಸಂಗೀತಗಾರರು ತಮ್ಮ ವೃತ್ತಿಯ ಜೊತೆಗೆ ಕರೋಕೆ ಮಾಧ್ಯಮವನ್ನು ಉಪಯೋಗಿಸಿಕೊಂಡು ಸಂಗೀತದಲ್ಲಿ ತಲ್ಲೀನರಾಗಿದ್ದಾರೆ ಎಂದು ಹೇಳಿದರು.

ಮನೋ ವಿಜ್ಞಾನಿ ಡಾ. ರೇಖಾ, ಮನಃಶಾಂತಿ ಮಾತನಾಡಿ, ಸಂಗೀತಕ್ಕೆ ತಲೆಬಾಗದವರಿಲ್ಲ. ಹೀಗಾಗಿ ಎಲ್ಲರ ಮನಸ್ಸನ್ನು ಅರಳಿಸುವ ಶಕ್ತಿ ಹೊಂದಿದೆ. ಕೆಲಸ ಮಾಡಿ ದಣಿದಾಗ ಸಂಗೀತ ಆಲಿಸಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಉಲ್ಲಾಸ ಉಂಟಾಗಲಿದೆ. ಹಿಂದಿನ ಕಾಲದ ಜನರು ಹೆಚ್ಚಿನ ಸಮಯವನ್ನು ಇದಕ್ಕೆ ಮೀಸಲಿಡುತ್ತಿದ್ದ ಕಾರಣ ದೈಹಿಕ ಶ್ರಮ ಗೊತ್ತಾಗುತ್ತಿರಲಿಲ್ಲ ಎಂದರು.

ಸಂಗೀತ ಕಲೆಯನ್ನು ಉಳಿಸಿ, ಬೆಳೆಸಬೇಕೆಂಬ ನಿಟ್ಟಿನಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರ ಗುರುತಿಸಿ ಗೌರವ ನೀಡುವ ಅಗತ್ಯವಿದ್ದು, ಅದಕ್ಕಾಗಿ ಅರ್ಜಿ ಹಾಕುವ ಸಂಪ್ರದಾಯ ಬಿಡಬೇಕಿದೆ ಎಂದು ಅವರು ಒತ್ತಾಯಿಸಿದರು.

ಕರೋಕೆ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ 150ಕ್ಕೂ ಹೆಚ್ಚು ಗಾಯಕರು ಆಗಮಿಸಿ ವಿವಿಧ ಚಿತ್ರಗೀತೆಗಳನ್ನು ಹಾಡಿದರು.

ಭರತ್ ನಾಯಕ್, ಜಾಯ್, ಸಮಂತ, ಸೈಯದ್ ಗೌಸ್, ಎನ್.ವಿ.ಎಸ್. ಸಚಿನ್, ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಕಸ್ತೂರಿ ಚಂದ್ರು, ಕೊಡಗು ಜಿಲ್ಲಾಧ್ಯಕ್ಷೆ ನಯನಾ ಹರಿಶ್ಚಂದ್ರ, ಮೈಸೂರ್ ನಗರ ಅಧ್ಯಕ್ಷೆ ಮೌಲ್ಯ ಜೈ ಕುಮಾರ್, ಸಂಸ್ಥಾಪಕ ಕಾರ್ಯದರ್ಶಿ ತೇಜಸ್ ಪೃಥ್ವಿರಾಜ್, ಜಿಲ್ಲಾಧ್ಯಕ್ಷ ಅಮೀನಾ ಬೇಗಂ, ಎಚ್.ಪಿ. ನಟರಾಜ್, ಜಿಲ್ಲಾ ಕಾರ್ಯದರ್ಶಿ ಚೆಲುವರಾಜ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ