ಗದಗ-ಬೆಟಗೇರಿ ನಗರಸಭೆ ₹ 446 ಲಕ್ಷ ಉಳಿತಾಯ ಬಜೆಟ್‌

KannadaprabhaNewsNetwork |  
Published : Apr 04, 2025, 12:48 AM IST
3ಜಿಡಿಜಿ10 | Kannada Prabha

ಸಾರಾಂಶ

ಗದಗ-ಬೆಟಗೇರಿ ನಗರಸಭೆ ಸಭಾಭವನದಲ್ಲಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ರು. 446.97 ಲಕ್ಷಗಳ ಉಳಿತಾಯದ ಅಂದಾಜು ಬಜೆಟ್ ಮಂಡಿಸಿದರು.

ಗದಗ: ಗದಗ-ಬೆಟಗೇರಿ ನಗರಸಭೆ ಸಭಾಭವನದಲ್ಲಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ರು. 446.97 ಲಕ್ಷಗಳ ಉಳಿತಾಯದ ಅಂದಾಜು ಬಜೆಟ್ ಮಂಡಿಸಿದರು.

ರಾಜಸ್ವ ಖಾತೆಯಲ್ಲಿ 7822.31 ಲಕ್ಷಗಳ ರಾಜಸ್ವ ವೆಚ್ಚ, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ 4720.97 ಲಕ್ಷಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ವಿಶೇಷ ಖಾತೆಯಲ್ಲಿ 2995.19 ಲಕ್ಷಗಳ ಆದಾಯವನ್ನು ನಿರೀಕ್ಷಿಸಿದ್ದು ಒಟ್ಟಾರೆ 15538.47 ಲಕ್ಷಗಳ ವೆಚ್ಚವನ್ನು ನಿರೀಕ್ಷಿಸಲಾಗಿದ್ದು, ಒಟ್ಟು 3777.97 ಲಕ್ಷಗಳ ಕೊರತೆ ಅಂದಾಜಿಸಿದೆ. ಈ ಕೊರತೆಯನ್ನು 4224.94 ಲಕ್ಷಗಳ ಆರಂಭಿಕ ಶಿಲ್ಕುದಿಂದ ಸರಿದೂಗಿಸಿ ಒಟ್ಟು 446.97 ಲಕ್ಷಗಳ ಉಳಿತಾಯ ಮಂಡಿಸಿದರು.

ನಗರಸಭೆಗೆ ಆಸ್ತಿ ತೆರಿಗೆಯಿಂದ ಶೇ 21ರಷ್ಟು, ಮಳಿಗೆಗಳ ಬಾಡಿಗೆಯಿಂದ ಶೇ 1ರಷ್ಟು, ಫೀ ಹಾಗೂ ಬಳಕೆ ವೆಚ್ಚದಿಂದ ಶೇ 15ರಷ್ಟು ಹಾಗೂ ರಾಜ್ಯ, ಕೇಂದ್ರ ಸರ್ಕಾರದ ಅನುದಾನ, ವಂತಿಕೆಗಳಿಂದ ಶೇ 62 ರಷ್ಟು, ಆದಾಯ ಬರಬಹುದೆಂದು ಅಂದಾಜಿಸಲಾಗಿದೆ. ಸಿಬ್ಬಂದಿ ವೇತನ, ಮಾನವ ಸಂಪನ್ಮೂಲ ವೆಚ್ಚಕ್ಕಾಗಿ ಶೇ 37 ರಷ್ಟು, ಆಡಳಿತಕ್ಕೆ ಸಂಬಂಧಿಸಿದ ವೆಚ್ಚಕ್ಕಾಗಿ ಶೇ 3ರಷ್ಟು, ದುರಸ್ತಿ ಮತ್ತು ನಿರ್ವಹಣೆ ವೆಚ್ಚಕ್ಕಾಗಿ ಶೇ 35ರಷ್ಟು, ಕಾರ್ಯಕ್ರಮ ವೆಚ್ಚಕ್ಕಾಗಿ ಶೇ 8ರಷ್ಟು, ನಗರದ ಬಡವರ ಏಳ್ಗೆಗಾಗಿ ಶೇ 1ರಷ್ಟು ಖರ್ಚು ಮಾಡುವ ಗುರಿ ಹೊಂದಲಾಗಿದೆ.

ಆಸ್ತಿ ತೆರಿಗೆ ಆದಾಯ ಅಭಿವೃದ್ಧಿ ಶುಲ್ಕ, ಕಟ್ಟಡ ಅನುಮತಿ ಶುಲ್ಕ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಖಾತಾ ನಕಲು, ಖಾತಾ ಬದಲಾವಣೆಯಿಂದ ಘನತಾಜ್ಯ ನಿರ್ವಹಣೆ ಶುಲ್ಕ ಒಳಚರಂಡಿ ಬಳಕೆದಾರರ ಫೀ, ನೀರು ಸರಬರಾಜು ಫೀ ಸೇರಿದಂತೆ ಆದಾಯದ ವಿವಿಧ ಮೂಲಗಳ ಕುರಿತು ಅಂಕಿ ಅಂಶಗಳ ಮೂಲಕ ತಿಳಿಸಿದರು. ನಗರಸಭೆಯ ಆಡಳಿತ, ರಸ್ತೆ ಹಾಗೂ ಚರಂಡಿ, ಬೀದಿ ದೀಪ, ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರು ಹಾಗೂ ಒಳಚರಂಡಿ, ಉದ್ಯಾನವನ ಹಾಗೂ ಹಸರೀಕರಣ, ಸಾರ್ವಜನಿಕ ಸೌಕರ್ಯಗಳು, ಈಜುಗೊಳ ನಿರ್ವಹಣೆ, ಶಿಕ್ಷಣ ಮತ್ತು ಸಂಸ್ಕೃತಿ, ಸ್ವಚ್ಛತೆ ಹೀಗೆ ವಿವಿಧ ವಿಭಾಗಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾದ ಅನುದಾನಗಳ ಅಂಕಿ ಅಂಶಗಳನ್ನು ಓದಿದರು.

ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ (ಪರಿಸರ) ಆನಂದ ಬದಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಸಿವಿಲ್) ಬಂಡಿವಡ್ಡರ, ಲೆಕ್ಕಾಧೀಕ್ಷಕ ಟಿ.ಎಚ್. ದ್ಯಾವನೂರ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿನಿರತ ಪತ್ರಕರ್ತರ ಮಕ್ಕಳ ಶ್ರೇಯೊಭಿವೃದ್ಧಿಗಾಗಿ 5.00 ಲಕ್ಷ ರು.ಗಳನ್ನು ವಂತಿಕೆಯಾಗಿ ನೀಡಲು ಅವಕಾಶ ಮಾಡಿಕೊಡಲಾಗಿದ್ದು ಇದಕ್ಕೆ ಮಂಜೂರಾತಿ ಪಡೆಯಲಾಯಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ